ಮಹಿಳಾ ಉದ್ಯಮಿಯಾಗಲು ತರಬೇತಿ

KannadaprabhaNewsNetwork |  
Published : Feb 21, 2025, 11:47 PM IST
21 ಕ.ಟಿ.ಇ.ಕೆ ಚಿತ್ರ 1: ಟೇಕಲ್‌ನ ಹುಳದೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕೂರ್ನಹೊಸಹಳ್ಳಿ ಗ್ರಾಮದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ನೂತನ ಕಟ್ಟಡವನ್ನು ಶಾಸಕ ಕೆ.ವೈ.ನಂಜೇಗೌಡರು ಟೇಪು ಕತ್ತರಿಸಿ ಉದ್ಘಾಟಿಸುತ್ತಿದ್ದಾರೆ. ಚಿತ್ರದಲ್ಲಿ ಸಂಘದ ಅಧ್ಯಕ್ಷೆ ಗಿರಿಜಮ್ಮ, ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಮ್ಮ ಮುಂತಾದವರಿದ್ದಾರೆ. | Kannada Prabha

ಸಾರಾಂಶ

ಮುಂದಿನ ದಿನಗಳಲ್ಲಿ ಮಹಿಳೆಯರನ್ನು ಉದ್ಯಮಶೀಲರನ್ನಾಗಿರುವ ಮತ್ತು ಸಣ್ಣ ಉದ್ಯಮಿಗಳಾಗಲು ತರಬೇತಿ ನೀಡಲು ನೆರವಾಗುತ್ತದೆ ಸರ್ಕಾರದಿಂದ ನಿಮ್ಮ ಸಂಘಕ್ಕೆ ಸಿಗುವ ಎಲ್ಲಾ ರೀತಿಯ ಯೋಜನೆಗಳನ್ನು ನೀಡಲು ಶಿಫರಸು ಮಾಡಲಾಗುವುದು. ಹುಳದೇನಹಳ್ಳಿ ಪಂಚಾಯ್ತಿ ಆಡಳಿತ ಉತ್ತಮವಾಗಿದೆ ಇನ್ನೂ ನರೇಗಾದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ

ಕನ್ನಡಪ್ರಭ ವಾರ್ತೆ ಟೇಕಲ್

ಮಾಲೂರು ತಾಲೂಕಿನಲ್ಲಿ ಪ್ರಪ್ರಥಮವಾಗಿ ಟೇಕಲ್‌ನ ಹುಳದೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕೂರ್ನಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಇದು ಮಹಿಳಾ ಸಂಘದ ಅಭಿವೃದ್ಧಿಗೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚು ಸಹಕಾರಿಯಾಗುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡರು ತಿಳಿಸಿದರು.

ಅವರು ಟೇಕಲ್‌ನ ಕೂರ್ನಹೊಸಹಳ್ಳಿ ಗ್ರಾಮದಲ್ಲಿ ಮಹಿಳಾ ಸಬಲೀಕರಣಕ್ಕೆ ನೂತನ ವರ್ಕ್ ಶೆಡ್ ನಿರ್ಮಾಣ ಮಾಡಲಾಗಿದ್ದು ಅದಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.ಉದ್ಯಮಿಯಾಗಲು ತರಬೇತಿ

ಇದರಿಂದ ಮುಂದಿನ ದಿನಗಳಲ್ಲಿ ಮಹಿಳೆಯರನ್ನು ಉದ್ಯಮಶೀಲರನ್ನಾಗಿರುವ ಮತ್ತು ಸಣ್ಣ ಉದ್ಯಮಿಗಳಾಗಲು ತರಬೇತಿ ನೀಡಲು ನೆರವಾಗುತ್ತದೆ ಸರ್ಕಾರದಿಂದ ನಿಮ್ಮ ಸಂಘಕ್ಕೆ ಸಿಗುವ ಎಲ್ಲಾ ರೀತಿಯ ಯೋಜನೆಗಳನ್ನು ನೀಡಲು ಶಿಫರಸು ಮಾಡಲಾಗುವುದು. ಹುಳದೇನಹಳ್ಳಿ ಪಂಚಾಯ್ತಿ ಆಡಳಿತ ಉತ್ತಮವಾಗಿದೆ ಇನ್ನೂ ನರೇಗಾದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಿ ಎಂದರು.

ಹುಳದೇನಹಳ್ಳಿ ವ್ಯಾಪ್ತಿಯಲ್ಲಿ ಗ್ರಾಮೀಣ ಸಂತೆ ನಡೆಸಲು ಅದರಲ್ಲೂ ಕುರಿ, ಮೇಕೆ, ಹಸು ಮಾರಾಟದ ಸಂತೆ ಮಾಡಲು ಗ್ರಾಮಸ್ಥರ ಮನವಿಗೆ ಮಾತನಾಡಿ ಸಂತೆ ಅಭಿವೃದ್ಧಿಗೆ ಇರುವ ಕಾನೂನು ರೀತಿಯಲ್ಲಿ ಸಂತೆಯನ್ನು ನಡೆಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ನಂತರ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ.ಅಧ್ಯಕ್ಷೆ ಹಾಲಿ ಸದಸ್ಯ ಮತ್ತು ಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ ಕಟ್ಟಡದ ನಿರ್ಮಾಣಕ್ಕೆ ಕಾರಣರಾದ ಹೇಮಾಮಾಲಿನಿ ನಾರಾಯಣಸ್ವಾಮಿರವರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ಕೆ.ಸುಧಾಸತೀಶ್, ಗ್ರಾ.ಪಂ.ಸದಸ್ಯರಾದ ಸೂರ್ಯನಾರಾಯಣರಾವ್, ಟಿ.ಎಂ.ಮುನಿರಾಜು, ಮಂಜುಳಾ, ರಾಮಪ್ಪ, ಮುಖಂಡರಾದ ಹೆಚ್.ವಿ.ಚಂದ್ರಶೇಖರ್‌ಗೌಡ, ತಿಮ್ಮೇಗೌಡ, ಎಸ್.ಜಿ.ರಾಮಮೂರ್ತಿ, ಬಗರ್‌ಹುಕುಂನ ಸತೀಶಬಾಬು, ಚಲಪತಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ, ಕಾರ್ಯದರ್ಶಿ ನರಸಪ್ಪ, ಸಂಜೀವಿನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಮ್ಮ ಮತ್ತಿತರರು ಮತ್ತಿತರರು ಉಪಸ್ಥಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ