ಬ್ಯಾಡಗಿ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಕಾಯಕ ಬಂಧು, ಮೇಟ್, ಎನ್‌ಎಂಎಸ್ ಹಾಗೂ ಗ್ರಾಮ ಕಾಯಕ ಮಿತ್ರರಿಗೆ ವಿಬಿ ಜಿ ರಾಮ್ ಜಿ ಕುರಿತು ತರಬೇತಿ ಕಾರ್ಯಾಗಾರ ನಡೆಸಲಾಯಿತು.
ಯೋಜನೆಯ ಉದ್ದೇಶ ಹಾಗೂ ಅನುಷ್ಠಾನದ ಕುರಿತು ಸಂಪೂರ್ಣ ಮಾಹಿತಿ ನೀಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿ ಕರು ಯೋಜನೆಯಡಿ ಕೆಲಸಕ್ಕೆ ಹಾಜರಾಗುವಂತೆ ಪ್ರೇರೇಪಿಸಬೇಕು. ಬಾಕಿ ಉಳಿದಿರುವ ಹಾಗೂ ಸಕ್ರಿಯ ಕಾರ್ಮಿಕರ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು. ನಿಷ್ಕ್ರಿಯ ಉದ್ಯೋಗ ಚೀಟಿಗಳನ್ನು ಪುನಃ ಸಕ್ರಿಯಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದರು.
ಐಇಸಿ ಸಂಯೋಜಕರಾದ ಸಿದ್ಧಲಿಂಗಮ್ಮ ಸಿರಿಗೇರಿ ಮಾತನಾಡಿ, ಎನ್‌ಎಂಎಂಎಸ್ ಮೂಲಕ ಹಾಜರಾತಿ ದಾಖಲಿಸುವ ವಿಧಾನ, ನೂತನ ಕೂಲಿ ಪಾವತಿ ಪದ್ಧತಿ ಹಾಗೂ ಹಣ ಬಿಡುಗಡೆ ಪ್ರಕ್ರಿಯೆಯ ಕುರಿತು ಸವಿಸ್ತಾರವಾಗಿ ತರಬೇತಿ ನೀಡಿದರು.ಸಂಪನ್ಮೂಲ ವ್ಯಕ್ತಿ ಮಲ್ಲೇಶಪ್ಪ ಮೋಟನವರ ಅವರು ಕಾಯಕ ಬಂಧುಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ವಿಬಿ ಜಿ ರಾಮ್ ಜಿ ಯೋಜನೆಯ ಪ್ರಮುಖ ಅಂಶಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರಾದ ಸಂತೋಷ ನಾಯ್ಕ್, ಐಇಸಿ ಸಂಯೋಜಕರಾದ ಅಕ್ಷಯ ದೇಶಪಾಂಡೆ, ಆಡಳಿತ ಸಹಾಯಕರಾದ ಪ್ರತಿಭಾ, ಗಣಕಯಂತ್ರ ನಿರ್ವಾಹಕರಾದ ಮಂಜುನಾಥ ಎಲಿ, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.