ಕೃಷಿಗೆ ಸಂಬಂಧಿಸಿದ ತೋಟಗಾರಿಕೆ, ಕೃಷಿ ಇಲಾಖೆ, ರೇಷ್ಮೆ ಸೇರಿದಂತೆ ಒಂದೇ ಇಲಾಖೆಗೆ ವಿಲೀನ ಮಾಡುವುದು ಮತ್ತು ಇಲಾಖೆಗಳ ಜಾಗಗಳನ್ನು ಪರಭಾರೆ ಮಾಡದೆ ರೈತರ ಅಭಿವೃದ್ಧಿ ದೃಷ್ಟಿಯಿಂದ ಅದೇ ಇಲಾಖೆಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಆಗ್ರಹ.
ಕನ್ನಡಪ್ರಭ ವಾರ್ತೆ ಮದ್ದೂರು
ತೋಟಗಾರಿಕೆ ಬೆಳೆಗಳ ನಿಖರ ಬೇಸಾಯ ತರಬೇತಿ ಕೇಂದ್ರದ ಜಾಗವನ್ನು ಬೇರೆ ಇಲಾಖೆಗೆ ಪರಭಾರೆ ಮಾಡಲು ಹೊರಟಿರುವ ಸರ್ಕಾರದ ಕ್ರಮ ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ನಗರದ ತರಬೇತಿ ಕೇಂದ್ರದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ರೈತ ಸಂಘದ ಅಧ್ಯಕ್ಷ ವಿ.ಸಿ.ಉಮೇಶ್ ನೇತೃತ್ವದಲ್ಲಿ ತರಬೇತಿ ಕೇಂದ್ರಕ್ಕೆ ಮುತ್ತಿಗೆ ಹಾಕಿದ ರೈತ ಕಾರ್ಯಕರ್ತರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಕೆ.ಎಂ.ಉದಯ್ ವಿರುದ್ಧ ಘೋಷಣೆ ಕೂಗಿದರು.
ಕೃಷಿಗೆ ಸಂಬಂಧಿಸಿದ ತೋಟಗಾರಿಕೆ, ಕೃಷಿ ಇಲಾಖೆ, ರೇಷ್ಮೆ ಸೇರಿದಂತೆ ಒಂದೇ ಇಲಾಖೆಗೆ ವಿಲೀನ ಮಾಡುವುದು ಮತ್ತು ಇಲಾಖೆಗಳ ಜಾಗಗಳನ್ನು ಪರಭಾರೆ ಮಾಡದೆ ರೈತರ ಅಭಿವೃದ್ಧಿ ದೃಷ್ಟಿಯಿಂದ ಅದೇ ಇಲಾಖೆಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಆಗ್ರಹಿಸಿದರು.
ಮದ್ದೂರು ಪಟ್ಟಣದ ಹೃದಯ ಭಾಗದಲ್ಲಿ ಸುಮಾರು 28 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಉತ್ಕೃಷ್ಟ ತರಬೇತಿ ಕೇಂದ್ರದಲ್ಲಿ ಪ್ರತಿ ವರ್ಷ 20 ರಿಂದ 30 ರೈತರಿಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮ ನಡೆಯುತ್ತವೆ. ಇಂತಹ ಕೇಂದ್ರವನ್ನು ಸರ್ಕಾರ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬೇಕೆ ಹೊರತು ಬೇರೆ ಇಲಾಖೆಗೆ ವರ್ಗಾಯಿಸಬಾರದು. ಒಂದು ವೇಳೆ ಸರ್ಕಾರ ವರ್ಗಾಯಿಸಲು ಮುಂದಾದಲ್ಲಿ ಉಗ್ರಚಳವಳಿ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರಗೌಡ, ಜಿಲ್ಲಾ ಖಜಾಂಚಿ ಶೆಟ್ಟಿಹಳ್ಳಿ ರವಿಕುಮಾರ್, ಉಪಾಧ್ಯಕ್ಷ ಜಿ.ಎ.ಶಂಕರ್, ಸಾದೊಳಲು ಸಿದ್ದೇಗೌಡ, ಜಿ. ರಾಮಕೃಷ್ಣ, ಬನ್ನಹಳ್ಳಿ ರಮೇಶ್ ಮತ್ತಿತರರು ಭಾಗವಹಿಸಿದ್ದರು.ನಾಳೆ ವಿದ್ಯುತ್ ವ್ಯತ್ಯಯ
ಮಂಡ್ಯ: 66/11 ಕೆ.ವಿ ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಆಗಸ್ಟ್ 13 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ.ತಾಲೂಕಿನ ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರಗಳಾದ ವಿ.ಸಿ.ಫಾರಂ, ಹಾಡ್ಯ, ಮೊಡಚಾಕನಹಳ್ಳಿ, ಮಾಚಹಳ್ಳಿ, ಜಯಪುರ, ಟಿ.ಮಲ್ಲಿಗೆರೆ, ಹುಲಿಕೆರೆ, ಹುಲಿಕೆರೆಕೊಪ್ಪಲು, ಹುಚ್ಚೇಗೌಡನಕೊಪ್ಪಲು, ದೇವರಾಯಪಟ್ಟಣ, ಹುಲ್ಲೇನಹಳ್ಳಿ, ಶಿವಳ್ಳಿ, ಹುಲಿಕೆರೆ, ಮಲ್ಲೇನಹಳ್ಳಿ, ಚಂದಗಾಲು, ಹೊಳಲು, ಎಂ.ಎನ್ ಕಟ್ಟೆ, ಪುಟ್ಟಿಕೊಪ್ಪಲು, ಮಾದೇಗೌಡನಕೊಪ್ಪಲು, ಗಾಣದಾಳು, ಕುರಿಕೊಪ್ಪಲು, ವಡ್ಡರಹಳ್ಳಿ ಕೊಪ್ಪಲು, ಬಿಳಗುಲಿ ಹಾಗೂ ಈ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬಜ ಸರ್ವರಾಜ ನಿಗಮ ನಿಯಮಿತ ಕಾ ಮತ್ತು ಪಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರಾದ ಎಸ್. ಅನಿತಾಬಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.