ಪಾರದರ್ಶಕ ಆಡಳಿತವೇ ಸಹಕಾರಿ ರಂಗದ ಯಶಸ್ಸಿನ ಗುಟ್ಟು: ಸುನೀಲಗೌಡ ಪಾಟೀಲ

KannadaprabhaNewsNetwork |  
Published : May 13, 2026, 02:00 AM IST
ಪೊಟೋ ಮೇ.12ಎಂಡಿಎಲ್ 1. ವಿಜಯಪುರದ ಬಿ.ಎಲ್.ಡಿ ಬ್ಯಾಂಕಿನ ನೂತನ ಶಾಖೆಯನ್ನು ಯುವ ಕಾಂಗ್ರೆಸ್ ನಾಯಕ ವಿನಯ ತಿಮ್ಮಾಪೂರ ಉಧ್ಘಾಟಿಸಿದರು. ಶಾಸಕ ಸುನಿಲಗೌಡ ಪಾಟೀಲ, ದಯಾನಂದ ಪಾಟೀಲ ಇತರರು ಇದ್ದರು. | Kannada Prabha

ಸಾರಾಂಶ

ಸಹಕಾರಿ ರಂಗದಲ್ಲಿ ಶಿಸ್ತು ಮತ್ತು ಪಾರದರ್ಶಕತೆ ಕಾಯ್ದುಕೊಂಡಾಗ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ. ವಿಜಯಪುರದ ಬಿ.ಎಲ್.ಡಿ ಸೌಹಾರ್ದ ಸಹಕಾರಿ ಸಂಘ ಕೇವಲ ಮೂರೂವರೆ ವರ್ಷ ಗಳಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಸಿ ಗ್ರಾಹಕರ ವಿಶ್ವಾಸ ಗಳಿಸಲು ಅದರ ಆಡಳಿತ ವೈಖರಿಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಸಹಕಾರಿ ರಂಗದಲ್ಲಿ ಶಿಸ್ತು ಮತ್ತು ಪಾರದರ್ಶಕತೆ ಕಾಯ್ದುಕೊಂಡಾಗ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ. ವಿಜಯಪುರದ ಬಿ.ಎಲ್.ಡಿ ಸೌಹಾರ್ದ ಸಹಕಾರಿ ಸಂಘ ಕೇವಲ ಮೂರೂವರೆ ವರ್ಷ ಗಳಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಸಿ ಗ್ರಾಹಕರ ವಿಶ್ವಾಸ ಗಳಿಸಲು ಅದರ ಆಡಳಿತ ವೈಖರಿಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ನಗರದ ರೂಗಿ ಹೈಟ್ಸ್ ನಲ್ಲಿ ಸಂಘದ 12ನೇ ಶಾಖೆ ಉದ್ಘಾಟಿಸಿ ಮಾತನಾಡಿ, ಗ್ರಾಹಕರಿಗೆ ಆಕರ್ಷಕ ಬಡ್ಡಿ ದರ ಹಾಗೂ ಹಿರಿಯ ನಾಗರಿಕರಿಗೆ ಶೇ.0.5ರಷ್ಟು ಹೆಚ್ಚಿನ ಬಡ್ಡಿ ಸೌಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ ಆರ್. ತಿಮ್ಮಾಪುರ ಅವರು ಬ್ಯಾಂಕಿನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಬಿ.ಎಲ್.ಡಿ.ಇ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ಶ್ಲಾಘಿಸಿ, ಸಚಿವ ಆರ್.ಬಿ.ತಿಮ್ಮಾಪೂರ ಅವರ ಗೆಲುವಿಗೆ ಸಚಿವ ಎಂ.ಬಿ.ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರ ಸೇವೆಯನ್ನು ಸ್ಮರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್. ಪಾಟೀಲ ಮಾತನಾಡಿ, ಠೇವಣಿಗಳಿಗೆ ಇಲ್ಲಿ ಹೆಚ್ಚಿನ ಭದ್ರತೆಯಿದ್ದು, ಸಾಲ ಸೌಲಭ್ಯಗಳನ್ನು ಸರಳೀಕರಿಸಲಾಗಿದೆ. ಶಿಕ್ಷಣ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸಚಿವ ಎಂ.ಬಿ.ಪಾಟೀಲ ಅವರು ಹಾಗೂ ಕುಟುಂಬದವರ ಸೇವೆಯನ್ನು ಕೊಂಡಾಡಿದರು.

ಕೆಎಂಎಫ್ ಅಧ್ಯಕ್ಷ ಲಿಂಗರಾಜ್ ಪಾಟೀಲ, ಡಾ.ಮೋಹನ್ ಬಿರಾದಾರ, ಅಪ್ಪಣ್ಣ ರೂಗಿ, ಉದಯಕುಮಾರ ಸಾರವಾಡ, ರಾಜುಗೌಡ ಪಾಟೀಲ, ಡಾ.ಮಹಾಂತೇಶ ಬಿರಾದಾರ, ಅರುಣ ಶಹಾ, ವಿವೆಕಾನಂದ ಪಾಟೀಲ, ಡಾ.ಎಂ.ಬಿ.ಬಕ್ಷಿ, ಮಾನಿಂಗ ಕುರಿ, ರಾಜು ಬಾಗವಾನ, ಸಚಿವ ಎಂ.ಬಿ.ಪಾಟೀಲ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಕರ ರಸ್ತೆ ಅಪಘಾತ- ಟ್ಯ್ರಾಕ್ಟರ್‌ ಚಾಲಕ ಸಾವು
36 ಕೆರೆ ಭರ್ತಿಗೆ ಆಗ್ರಹ: ರೈತ ಸಂಘದ ಪ್ರತಿಭಟನೆ