ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕನ್ನಡಪ್ರಭ ಪತ್ರಿಕೆಯ ವರದಿಗೆ ಎಚ್ಚೆತ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದ ನೆಪದಲ್ಲಿ ಸಾರಿಗೆ ಬಸ್ ದರ ದಿಡೀರ್ ಏರಿಸಿದ್ದ ದರವನ್ನು ಇಳಿಕೆ ಮಾಡಿದ್ದಾರೆ. ಜ.೧೩ ರ ಕನ್ನಡಪ್ರಭ ಪತ್ರಿಕೆಯಲ್ಲಿ ಗೋಪಾಲಸ್ವಾಮಿ ಭಕ್ತರಿಗೆ ಬಸ್ ದರ ಏರಿಕೆ ಬಿಸಿ, ೨೦೨೩ ರ ತನಕ ೬೦ ರು ಇತ್ತು. ಹೊಸ ವರ್ಷದಿಂದ ಬಸ್ ದರ ೭೦ ರು.ಗೋಪಾಲಸ್ವಾಮಿ ಬೆಟ್ಟದ ದೂರ ೬ ಕಿಮಿ ಎಂದು ವರದಿ ಪ್ರಕಟಿಸಿ ಕೆಎಸ್‌ಆರ್‌ಟಿಸಿ ಗಮನ ಸೆಳೆದಿತ್ತು.ಗುಂಡ್ಲುಪೇಟೆ ಘಟಕ ವ್ಯವಸ್ಥಾಪಕಿ ಪುಷ್ಪ ದರ ಏರಿಕೆ ಕಡಿಮೆ ಮಾಡಲು ಆಗುವುದಿಲ್ಲ. ಬೆಟ್ಟ ಕಡಿದಾಗಿದೆ ಹೆಚ್ಚು ಡಿಸೇಲ್ ಬೇಕು. ಮೈಲೇಜ್ ಬರಲ್ಲ ದರ ಏರಿಕೆ ಅನಿವಾರ್ಯ ಎಂದು ಗೋಪಾಲಸ್ವಾಮಿ ಬೆಟ್ಟದ ಬಸ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಕನ್ನಡಪ್ರಭ ವರದಿಯನ್ನು ಗಮನಿಸಿದ್ದ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ ದರ ಏರಿಕೆ ಸಂಬಂಧ ಗುಂಡ್ಲುಪೇಟೆ ಘಟಕ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ದರ ಇಳಿಸುವುದಾಗಿ ಭರವಸೆ ನೀಡಿದ್ದರು.ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದ ನೆಪದಲ್ಲಿ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿ ಬರಲು ೬೦ ರು.ಬದಲು ೭೦ ರು ಗುಂಡ್ಲುಪೇಟೆ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಮಾಡಿದ್ದರು ಇದಕ್ಕೆ ಪ್ರಯಾಣಿಕರ ಆಕ್ರೋಶ ಹಾಗೂ ಗೋಪಾಲಪುರ ಗ್ರಾಪಂ ಸದಸ್ಯ ಜಿ.ಕೆ.ಲೋಕೇಶ್ ದರ ಪರಿಷ್ಕರಿಸಿ ಹಿಂದಿನ ದರ ಮುಂದುವರಿಸಬೇಕು ಎಂದು ಆಗ್ರಹಿಸಿದ್ದರು. ಇದಾದ ಬಳಿಕ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಗುಂಡ್ಲುಪೇಟೆ ಘಟಕ ವ್ಯವಸ್ಥಾಪಕರು ದರ ಏರಿಕೆ ಸಂಬಂಧ ಚರ್ಚಿಸಿ ೧೦ ರು ಏರಿಕೆ ದರ ಕಡಿತಗೊಳಿಸಿ ಹಿಂದಿನ ದರದಲ್ಲಿ ಬಸ್ ಓಡಿಸಲು ಸೂಚನೆ ನೀಡಿದ್ದಾರೆ.ಪ್ರಯಾಣಿಕರ ಮೆಚ್ಚುಗೆ: ಹೊಸ ವರ್ಷದ ನೆಪದಲ್ಲಿ ಕೆಎಸ್‌ಆರ್‌ಟಿಸಿ ಗುಂಡ್ಲುಪೇಟೆ ಘಟಕ ವ್ಯವಸ್ಥಾಪಕರು ೧೦ ದರ ಏರಿಕೆ ಮಾಡಿದ್ದರು ಈ ಬಗ್ಗೆ ಪ್ರಯಾಣಿಕರ ಧ್ವನಿಯಾಗಿ ಕನ್ನಡಪ್ರಭ ವರದಿ ಪ್ರಕಟಿಸಿದ ಬಳಿಕ ಬಸ್ ದರ ೧೦ ರು.ಕಡಿತ ಮಾಡಲು ಕನ್ನಡಪ್ರಭ ಪತ್ರಿಕೆಯೇ ಕಾರಣವಾಗಿದೆ ಎಂದು ಪ್ರಯಾಣಿಕರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನ ಸಾಮಾನ್ಯರ ಪರವಾಗಿ ಕನ್ನಡಪ್ರಭ ಧ್ವನಿ ಎತ್ತಿ ಪ್ರಯಾಣಿಕರಿಗೆ ಹೊರೆಯಾಗಿದ್ದ ೧೦ ರು.ಕಡಿತಗೊಳಿಸಿದ್ದಕ್ಕೆ ಕನ್ನಡಪ್ರಭಕ್ಕೆ ದೊಡ್ಡ ನಮಸ್ಕಾರ.