ಕನ್ನಡಪ್ರಭ ವಾರ್ತೆ ಮೈಸೂರು
ಮಿನಿ ಫಾಕ್ಸ್, ವತ್ಸಲ್ ಪರಾಶನ್, ಗಯೂಕಿ, ತೆದೋ, ಭಾರತದ ರಾಗಗಳು ಹಾಗೂ ಭಾರತೀಯ ಸಂಗೀತ ಉಪಕರಣಗಳನ್ನು ಬಳಸಿಕೊಂಡು ಸಂಗೀತ ಪ್ರದರ್ಶನ ನೀಡಿದ ಇವರು ತಮ್ಮ ಮೇಲುವಾದ ಕಂಠದಿಂದ ನೆರದಿದ್ದ ಸಾರ್ವಜನಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ತಂಡದ ನಾಯಕ ಮಾತನಾಡಿ, ಭಾರತದಲ್ಲಿ ನಾವು ಪ್ರದರ್ಶನ ನೀಡುತ್ತಿರುವುದು ನಮ್ಮೆಲರಿಗೂ ಹೆಮ್ಮೆಯ ವಿಷಯ. ಇಲ್ಲಿ ನಮ್ಮ ಸಂಸ್ಕೃತಿಯನ್ನು ನಿಮ್ಮೆಲ್ಲರಿಗೂ ತಿಳಿಯುವಂತೆ ಮಾಡುವುದು ನಮಗೆ ಸಂತಸ ತಂದಿದೆ ಎಂದರು.11 ಜನರಿಂದ ಕೂಡಿದ ನ್ಯೂ ಬಾನ ತಂಡದವರು ಮೊದಲಿಗೆ ಭಾರತದ ರಾಷ್ಟ್ರ ಗೀತೆಯನ್ನು ಹಾಡುವುದರ ಮೂಲಕ ಸಾರ್ವಜನಿಕರನ್ನು ಎದ್ದು ನಿಲ್ಲುವಂತೆ ಮಾಡಿದರು. ನಂತರದಲ್ಲಿ ತಮ್ಮ ದೇಶದ ರಾಷ್ಟ್ರಗೀತೆಯನ್ನು ಮೈಸೂರು ಜನತೆಗೆ ಪರಿಚಯಿಸಿದರು. ಅದಾದ ನಂತರದಲ್ಲಿ ಮೂರು ಸಂಗೀತ ಪ್ರದರ್ಶನ ನೀಡಿ ಜನರ ಮನ ಸೆಳೆಯುವುದರ ಮೂಲಕ ಶಿಳ್ಳೆ ಹೊಡೆದು ಸಂಭ್ರಮಿಸಿದರು.