ಏಕ ಬಳಕೆಯ ಬಳಸಿದ ಪ್ಲಾಸ್ಟಿಕ್ ಕಪ್‌ನಲ್ಲಿ ಗ್ರಾಹಕರಿಗೆ ತಂಪು ಪಾನೀಯ ಪೆಪ್ಸಿ ಮಾರಾಟ ಮಾಡಿದ ಆರೋಪ ನಗರದ ಕನಕಪುರ ರಸ್ತೆಯಲ್ಲಿರುವ ಫೋರಂ ಸೌತ್ ಬೆಂಗಳೂರು ಮಾಲ್‌ನಲ್ಲಿರುವ ಪಿವಿಆರ್ ವಿರುದ್ಧ ಕೇಳಿ ಬಂದಿದೆ.

-ಇನ್ಸ್ಟಾ ಪೋಸ್ಟ್‌ ಬಳಿಕ ಫೋರಂ ಮಾಲ್ ಕ್ಷಮೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಏಕ ಬಳಕೆಯ ಬಳಸಿದ ಪ್ಲಾಸ್ಟಿಕ್ ಕಪ್‌ನಲ್ಲಿ ಗ್ರಾಹಕರಿಗೆ ತಂಪು ಪಾನೀಯ ಪೆಪ್ಸಿ ಮಾರಾಟ ಮಾಡಿದ ಆರೋಪ ನಗರದ ಕನಕಪುರ ರಸ್ತೆಯಲ್ಲಿರುವ ಫೋರಂ ಸೌತ್ ಬೆಂಗಳೂರು ಮಾಲ್‌ನಲ್ಲಿರುವ ಪಿವಿಆರ್ ವಿರುದ್ಧ ಕೇಳಿ ಬಂದಿದೆ.

ಈ ಸಂಬಂಧ ಗ್ರಾಹಕರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಈ ಕುರಿತು ವ್ಯಾಪಕ ಚರ್ಚೆಗಳು ನಡೆದಿದ್ದು ಪ್ರತಿಷ್ಠಿತ ವ್ಯಾಪಾರ ಸ್ಥಳಗಳಲ್ಲೇ ಗ್ರಾಹಕರನ್ನು ಈ ರೀತಿ ವಂಚಿಸಿದರೆ ಯಾರನ್ನು ನಂಬಬೇಕು? ಎಂದು ಅನೇಕರು ಪ್ರಶ್ನಿಸಿದ್ದಾರೆ. ಮಿಥಿಲ್ ಕುಮಾರ್ ಎಂಬುವರು ವಿಡಿಯೋ ಪೋಸ್ಟ್ ಮಾಡಿದ್ದು, ಈ ಬಗ್ಗೆ ಜನರು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.

ಕ್ಷಮೆ ಕೇಳಿರ ಫೋರಂ: ನಿಮಗೆ ಆಗಿರುವ ತೊಂದರೆಗೆ ನಾವು ಕ್ಷಮೆಯಾಚಿಸುತ್ತೇವೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ಪಿವಿಆರ್ ತಂಡ ವಿಚಾರಣೆ ನಡೆಸುತ್ತಿದೆ. ಮುಂದೆ ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಫೋರಂ ಸೌತ್ ಬೆಂಗಳೂರು ಹೇಳಿದೆ.