ಬಸ್‌ ಪ್ರಯಾಣ ದರ ಹೆಚ್ಚಳದ ಜತೆಗೆ ಬಿಎಂಟಿಸಿ ಬಸ್‌ ಪಾಸ್‌ ದರದಲ್ಲೂ ಭಾರೀ ಏರಿಕೆ ಮಾಡಲಾಗಿದೆ. ಬಿಎಂಟಿಸಿ ಸಾಮಾನ್ಯ ದೈನಂದಿನ ಪಾಸ್‌ ಸೇರಿದಂತೆ ಎಲ್ಲ ಪಾಸ್‌ಗಳ ಬೆಲೆಯನ್ನೂ ಹೆಚ್ಚಿಸಲಾಗಿದೆ.

-ದಿನದ ಪಾಸ್‌ ₹20, ಮಾಸಿಕ ₹300 ಏರಿಕೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಸ್‌ ಪ್ರಯಾಣ ದರ ಹೆಚ್ಚಳದ ಜತೆಗೆ ಬಿಎಂಟಿಸಿ ಬಸ್‌ ಪಾಸ್‌ ದರದಲ್ಲೂ ಭಾರೀ ಏರಿಕೆ ಮಾಡಲಾಗಿದೆ. ಬಿಎಂಟಿಸಿ ಸಾಮಾನ್ಯ ದೈನಂದಿನ ಪಾಸ್‌ ಸೇರಿದಂತೆ ಎಲ್ಲ ಪಾಸ್‌ಗಳ ಬೆಲೆಯನ್ನೂ ಹೆಚ್ಚಿಸಲಾಗಿದೆ.

ಬಿಎಂಟಿಸಿಯ ಸಾಮಾನ್ಯ ದೈನಂದಿನ ಪಾಸ್‌ ಬೆಲೆ 20 ರು., ಸಾಪ್ತಾಹಿಕ ಪಾಸ್‌ ಬೆಲೆ 70 ರು., ಮಾಸಿಕ ಪಾಸ್‌ 300 ರು. ಹೆಚ್ಚಳ ಮಾಡಲಾಗಿದೆ. ಅದೇ ರೀತಿ ವೋಲ್ವೋ ಬಸ್‌ ದೈನಂದಿನ ಪಾಸ್‌ 35 ರು., ವಜ್ರ ವೋಲ್ವೋ ಮಾಸಿಕ ಪಾಸ್‌ 500 ರು. ಹೆಚ್ಚಿಸಲಾಗಿದೆ. ಬಸ್‌ ಪಾಸ್‌ ದರ ಏರಿಕೆಯು ಗುರುವಾರದಿಂದಲೇ ಅನ್ವಯವಾಗುತ್ತಿದೆ.

ಹಲವು ಬೆಲೆ ಏರಿಕೆಗಳ ನಡುವೆ ಬಸ್‌ ಪ್ರಯಾಣ ದರ ಹೆಚ್ಚಳ ಮಾಡಿದ್ದಕ್ಕಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಸರ್ಕಾರದ ಬೆಲೆ ಏರಿಕೆ ಕ್ರಮದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

----

ಬಸ್‌ ಪಾಸ್‌ ವಿಧಹಳೇ ದರಪರಿಷ್ಕೃತ ದರ: (ರು.ಗಳಲ್ಲಿ)

ಸಾಮಾನ್ಯ ದೈನಂದಿನ ಪಾಸ್‌80100

ವೋಲ್ವೋ ದೈನಂದಿನ ಪಾಸ್‌140175

ಸಾಪ್ತಾಹಿಕ ಪಾಸ್‌350420

ಸಾಮಾನ್ಯ ಮಾಸಿಕ ಪಾಸ್‌12001500

ವಜ್ರ ವೋಲ್ವೋ ಮಾಸಿಕ ಪಾಸ್‌20002500