ಅಂಚೆ ಮೂಲಕ ದೇಶ-ವಿದೇಶಕ್ಕೂ ರೈತರ ಉತ್ಪನ್ನ ಸಾಗಣೆ: ಸಂಸದ ಗದ್ದಿಗೌಡರ

KannadaprabhaNewsNetwork |  
Published : Feb 25, 2024, 01:50 AM IST
(ಫೋಟೋ 24ಬಿಕೆಟಿ6, ಅಂಚೆ ಇಲಾಖೆ ಮುಖಾಂತರ ದೇಶಾದ್ಯಂತ ರೈತ ತಯಾರಿಸಿದ ಉತ್ಕೃಷ್ಠ ಉತ್ಪನ್ನ ವಿತರಿಸುವ ಕಾರ್ಯಕ್ಕೆ ಚಾಲನೆ ನಿಡಲಾಯಿತು) | Kannada Prabha

ಸಾರಾಂಶ

ರೈತರು ಬೆಳೆದ ಅಹಾರ ಉತ್ಪನ್ನಗಳನ್ನು ದೇಶ-ವಿದೇಶಕ್ಕೆ ಸುಲಭವಾಗಿ ಅಂಚೆ ಇಲಾಖೆ ಮೂಲಕ ಕಳಿಸಬಹುದಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೈತರು ಬೆಳೆದ ಅಹಾರ ಉತ್ಪನ್ನಗಳನ್ನು ದೇಶ-ವಿದೇಶಕ್ಕೆ ಸುಲಭವಾಗಿ ಅಂಚೆ ಇಲಾಖೆ ಮೂಲಕ ಕಳಿಸಬಹುದಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು

ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ನೇಚರ್ ಜಾಗರಿ ಮತ್ತು ಎಮ್ 81 ಫುಡ್ ಪ್ರೊಡಕ್ಟ್‌, ಸಂಗಾನಟ್ಟಿ ಹಾಗೂ ಚೇಂಬರ್ ಆಫ್‌ ಕಾಮರ್ಸ್‌ ಬಾಗಲಕೊಟೆ ಇವರ ಸಹಯೋಗದಲ್ಲಿ ಪ್ರಧಾನಮಂತ್ರಿಗಳ ಕಿರು ಅಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವುಕೆ ಯೋಜನೆಯಡಿಯಲ್ಲಿ ರೈತ ತಯಾರಿಸಿದ ಉತ್ಕೃಷ್ಠ ಉತ್ಪನ್ನವನ್ನು ಅಂಚೆ ಇಲಾಖೆ ಮುಖಾಂತರ ದೇಶಾದ್ಯಂತ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಂಪ್ರದಾಯಕ ಕೃಷಿ ಪದ್ಧತಿ ಅನುಸರಣೆ ಅಗತ್ಯ ಅಂಚೆ ಇಲಾಖೆಯಿಂದ ಪತ್ರ ವ್ಯವಹಾರವಲ್ಲದೆ ರೈತ ಬೆಳೆದ ಅಹಾರ ಉತ್ಪನ್ನಗಳನ್ನು ದೇಶ ವಿದೇಶಗಳಿಗೆ ಸುರಕ್ಷಿತವಾಗಿ ಸುಲಭ ರೀತಿಯಲ್ಲಿ ಸಾಗಾಣಿಕೆ ಮಾಡಬಹುದಾಗಿದೆ, ರೈತರ ಆರ್ಥಿಕ ಅಭಿವೃದ್ಧಿ ಸೈಕ್ಷಣಿಕ ಸಾಮಾಜಿಕ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವಾಗಿದೆ, ಪ್ರಧಾನಿ ನರೇಂದ್ರ ಮೋದಿಯವರ ಮುಂದಾಲೋಚನೆಯಿಂದ ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ 5ನೇ ಸ್ಥಾನದಲ್ಲಿರುವ ಭಾರತ 3 ಸ್ಥಾನಕ್ಕೆ ಏರುವಲ್ಲಿ ಯಾವುದೇ ಸಂದೆಹವಿಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿವಿವಿ ಸಂಘ ಕಾರ್ಯಾಧ್ಯಕ್ಷ ಹಾಗೂ ಚೇಂಬರ್ ಆಪ್ ಕಾಮರ್ಸ್‌ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಗ್ರಾಮದ ಉದ್ಧಾರವೇ ದೇಶದ ಪ್ರಗತಿಯಾಗಿದ್ದು, ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾದ ಒಂದು ಜಿಲ್ಲೆ ಒಂದು ಉತ್ಪನ್ನದ ಯೋಜನೆಯಡಿಯಲ್ಲಿ ದೇಶದ ಎಲ್ಲಾ 765 ಜಿಲ್ಲೆಗಳಲ್ಲಿ ರೈತರ ಉತ್ಪನ್ನಗಳ ರಪ್ತು ಸಾಮರ್ಥ್ಯ ಹೆಚ್ಚಿಸಲು ಅಂಚೆ ಇಲಾಖೆ ಮೂಲಕ ದೇಶಾದ್ಯಂತ ಅಹಾರ ವಿತರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನಿಯವಾಗಿದೆ. ಇದರಿಂದ ರೈತರಿಗೆ ತ್ವರಿತಗತಿಯಲ್ಲಿ, ಸುರಕ್ಷಿತವಾಗಿ, ಕೆಡದಂತೆ ಕಳಿಸುವುದು ಮುಖ್ಯವಾಗಿದೆ, ಅಂಚೆ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶಿಲಕುಮಾರ ಮಾತನಾಡಿ, ಆನಲೈನ್ ಮೂಲಕ ನೀವು ವ್ಯವಹಾರ ಮಾಡಿದ ಹಾಗೆ ಇದು ಕೂಡ ಅಂಚೆ ಇಲಾಖೆಯಿಂದ ಆನಲೈನ್ ನಲ್ಲಿ ವ್ಯವಹಾರ ಮಾಡಬಹುದಾಗಿದೆ, ರೈತರ ಉತ್ಪನ್ನವನ್ನು ಅಂಚೆ ಇಲಾಖೆ ಕೂಡ ಎಲ್ಲಡೆ ತಲುಪಿಸುವಲ್ಲಿ ಕೈ ಜೊಡಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಚರ್ ಜಾಗರಿಯ ಸಂಗಮೇಶಗೌಡ ಪಾಟೀಲ ವಹಸಿದ್ದರು, ಉತ್ತರ ಕರ್ನಾಟಕ ವಲಯದ ಅಂಚೆ ನಿರ್ದೇಶಕಿ ವ್ಹಿ,ತಾರಾ, ಅಂಚೆ ಇಲಾಖೆ ಅಧಿಕ್ಷಕ ಎಚ್.ಬಿ.ಹಸಬಿ, ವಿಜಯ ಕೋರೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ