ಗಂಗಾವತಿ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಸಿಬ್ಬಂದಿ ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಿದರು.
ಗಂಗಾವತಿ: ನಗರದ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಸಿಬ್ಬಂದಿ ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಿದರು. ಬಸ್ ಮುಂದೆ ಬಸವಣ್ಣನ ಭಾವಚಿತ್ರ ಅಳವಡಿಸಿ ಬಲೂನ್ ಮತ್ತು ಹೂ ಮಾಲೆಗಳಿಂದ ವಿಶೇಷವಾಗಿ ಅಲಂಕರಿಸಿದ್ದರು.ಬಸ್ ನಿಲ್ದಾಣದಿಂದ ಶ್ರೀಕೃಷ್ಣದೇವರಾಯ ವೃತ್ತದ ಮೂಲಕ ಅಂಬೇಡ್ಕರ್ ವೃತ್ತ, ನೀಲಕಂಠೇಶ್ವರ ವೃತ್ತದ ಸಾರಿಗೆ ಘಟಕಕ್ಕೆ ಮರೆವಣಿಗೆ ತೆರಳಿತು. ಮೆರವಣಿಗೆಯಲ್ಲಿ ಗದಗ ಜಿಲ್ಲೆಯ ಕಣ್ಣೂರಿನ ಮಹಿಳಾ ಡೊಳ್ಳು ಕುಣಿತ ಆಕರ್ಷಣೀಯವಾಗಿತ್ತು. ಇದಕ್ಕಿಂತ ಪೂರ್ವದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಸಿಬ್ಬಂದಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ಸಾರಿಗೆ ಘಟಕದ ನಿಯಂತ್ರಾಣಾಧಿಕಾರಿ ಶಿವನಗೌಡ ಪಾಟೀಲ್, ರಾಜ್ಯದ ಸಾಂಸ್ಕೃತಿಕ ನಾಯಕ ಹಾಗೂ ಮಹಾನಮಾನವತಾವಾದಿ ಬಸಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಅವರ ತತ್ವಾದರ್ಶಗಳನ್ನು ಸಿಬ್ಬಂದಿ ಅಳವಡಿಸಿಕೊಳ್ಳುವ ಮೂಲಕ ಕಾಯಕಕ್ಕೆ ಮುಂದಾಗಬೇಕು ಎಂದರು.
ಈ ವೇಳೆ ಅಮರೇಶ ಸಜ್ಜನ್, ಹನುಮಂತ ಆಮೆನಿ, ಶಂಭುನಗೌಡ ಹಿಟ್ನಾಳ್, ಶಂಕರ್, ಶ್ರೀನಿವಾಸ ಭೋವಿ, ಭೀಮಣ್ಣ ಜಬ್ಬಲಗುಡ್ಡ, ಮಹೇಶ ತಗ್ಗಿನಮನಿ, ವಾದಿರಾಜ್, ಚಾಲಕ ಮಂಜುನಾಥ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.
ಎಬಿವಿಪಿ
ನಗರದ ಬಸವಣ್ಣನ ಪ್ರತಿಮೆ ಬಳಿ ಎಬಿವಿಪಿ ಕಾರ್ಯಕರ್ತರು ಬಸವ ಜಯಂತಿ ಆಚರಿಸಿದರು. ಪ್ರತಿಮಗೆ ಪುಷ್ಪ ಗುಚ್ಛ ಸಮರ್ಪಿಸಿದರು. ಈ ವೇಳೆ ನಗರ ಕಾರ್ಯದರ್ಶಿ ಕಿರಣ ವಸ್ತ್ರದ್, ತಾಲೂಕು ಸಂಚಾಲಕ ಈಶ್ವರ್, ಪೃಥ್ವಿ, ಚನ್ನವೀರ್, ಗಣೇಶ್, ಸುಪ್ರೀತ್, ಸೇರಿದಂತೆ ಇತರರು ಇದ್ದರು.
ಬಿಜೆಪಿ ಕಚೇರಿ
ನಗರದ ಹೊಸಳ್ಳಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ ಆಚರಿಸಲಾಯಿತು. ಬಸವಣ್ಣನವರ ಭಾವಚಿತ್ರಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೂ ಮಾಲೆ ಹಾಕಿ ಆಚರಣೆಗೆ ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ, ಡಿ.ಕೆ. ಆಗೋಲಿ, ಚಂದ್ರು ಹಿರೂರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಕೃಷ್ಣದೇವರಾಯ ವೃತ್ತ
ನಗರದ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಇರುವ ಬಸವಣ್ಣನ ಪ್ರತಿಮೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೂಮಾಲೆ ಹಾಕಿದರು. ಈ ವೇಳೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿರೂಪಾಕ್ಷಪ್ಪ ಸಿಂಗನಾಳ, ಎಚ್.ಎಂ. ಸಿದ್ದರಾಮಸ್ವಾಮಿ, ಎಚ್.ಎಂ. ವಿರೂಪಾಷಯ್ಯಸ್ವಾಮಿ, ಮಹಾಲಿಂಗಪ್ಪ ಬನ್ನಿಕೊಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.