ಪೌರಕಾರ್ಮಿಕರನ್ನು ಗೌರವದಿಂದ ಕಾಣಿ: ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು

KannadaprabhaNewsNetwork |  
Published : Sep 26, 2024, 09:46 AM IST
ಪೊಟೊ25ಕೆಎನ್‌ಎಲ್‌ಎಮ್‌1: ನೆಲಮಂಗಲ ನಗರಸಭೆ ಯಿಂದಪೌರಕಾರ್ಮಿಕ ದಿನಾಚರಣೆ ಪ್ರಯುಕ್ತ ನಗರಸಭೆಕಚೇರಿಆವರಣದಿಂದ ಆಯೋಜಿಸಿದ್ದ ಪೌರಕಾರ್ಮಿಕರಥಯಾತ್ರೆಗೆ ಶಾಸಕ ಎನ್. ಶ್ರೀನಿವಾಸ್ ಬಲೂನ್‌ಹಾರಿಬಿಡುವ ಮೂಲಕ ಚಾಲನೆ ನೀಡಿದರು. ನಗರಸಭೆಅಧ್ಯಕ್ಷೆ ಎನ್,ಎಸ್.ಪೂರ್ಣಿಮಸುಗ್ಗರಾಜು ಮತ್ತಿತರರುಇದ್ದರು.  | Kannada Prabha

ಸಾರಾಂಶ

ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರು ಮಹತ್ವದ ಪಾತ್ರವಹಿಸಲಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಹೇಳಿದರು. ನೆಲಮಂಗಲದಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ನೆಲಮಂಗಲ

ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರು ಮಹತ್ವದ ಪಾತ್ರವಹಿಸಲಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಹೇಳಿದರು.

ನಗರದ ಚಿಕ್ಕೆಲ್ಲಯ್ಯ ಸಮುದಾಯ ಭವನದಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕರ ಶ್ರಮದ ಪ್ರತಿಫಲದಿಂದಾಗಿ ನಾಗರೀಕರಲ್ಲಿ ನಗರಸಭೆ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲಿದೆ. ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಅವರ ಬಡಾವಣೆಗೆ ಭೇಟಿ ನೀಡಿದಾಗ ಕೆಲ ಬೇಡಿಕೆ, ಸಮಸ್ಯೆ ಹೇಳಿಕೊಂಡಿದ್ದು ಆದ್ಯತೆ ಮೇರೆಗೆ ಪರಿಹಾರ ಒದಗಿಸುವುದಾಗಿ ತಿಳಿಸಿದರು.

ಪೌರಾಯುಕ್ತ ಎಚ್.ಎಂ.ಮನುಕುಮಾರ್ ಮಾತನಾಡಿ, ನಾಗರೀಕತೆಯ ಕಾಲದಿಂದಲೇ ಬೆಳೆದು ಬಂದಿರುವ ಆಡಳಿತ ವ್ಯವಸ್ಥೆಯಲ್ಲಿ ಪೌರಕಾರ್ಮಿಕರಿದ್ದ ಪುರಾವೆಗಳಿವೆ. ಸರ್ಕಾರದ ಎಲ್ಲ ಇಲಾಖೆಗಳಿಂದ ಪೌರಾಡಳಿತ ಇಲಾಖೆ ಜನ್ಮತಾಳಿದೆ ಎಂದರು.

ಪೌರಕಾರ್ಮಿಕ ದಿನಾಚರಣೆ ಪ್ರಯುಕ್ತ ನಗರಸಭೆ ಕಚೇರಿ ಆವರಣದಿಂದ ಆಯೋಜಿಸಿದ್ದ ಪೌರಕಾರ್ಮಿಕ ರಥಯಾತ್ರೆಗೆ ಶಾಸಕ ಎನ್. ಶ್ರೀನಿವಾಸ್ ಬಲೂನ್ ಹಾರಿಬಿಡುವ ಮೂಲಕ ಚಾಲನೆ ನೀಡಿದರು.

ಬಹುಮಾನ ವಿತರಣೆ: ಪೌರಕಾರ್ಮಿಕ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರು ಹಾಗೂ ನಗರಸಭಾಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಕ್ರೀಡಾಕೂಟ, ಮಹಿಳಾ ಪೌರಸೇವಾ ನೌಕಕರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಿದ್ದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಮೂಡ್ ಮಾತನಾಡಿ, ಕೇವಲ ಪೌರಕಾರ್ಮಿಕರ ದಿನದಂದು ಅವರನ್ನುಗೌರವಿಸದೇ ನಿತ್ಯವೂ ಗೌರವದಿಂದ ಕಾಣಬೇಕಿದೆ. ಪೌರಕಾರ್ಮಿಕರಿಗೆ ಸರ್ಕಾರದಿಂದ ವಿಶೇಷ ಭತ್ಯೆ ವಿತರಣೆ, ಉಡುಗೊರೆ ಸೇರಿದಂತೆ ವಿಶೇಷವಾದ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎನ್.ಪಿ.ಹೇಮಂತ್‌ಕುಮಾರ್, ನಗರಸಭೆ ಉಪಾಧ್ಯಕ್ಷೆ ಸುಜಾತ ಮುನಿಯಪ್ಪ, ಸದಸ್ಯ ಕೆ.ಎಂ.ಶಿವಕುಮಾರ್, ಎನ್.ಗಣೇಶ್, ಆನಂದ್, ಆಂಜಿನಪ್ಪ, ಪ್ರದೀಪ್.ಸಿ, ಪದ್ಮನಾಭ್, ರಾಜಮ್ಮಪಿಳ್ಳಪ್ಪ, ಸುಧಾಕೃಷ್ಣಪ್ಪ, ಲೋಲಾಕ್ಷಿಗಂಗಾಧರ್, ಶಾರದಾಉಮೇಶ್, ಭಾಗ್ಯನರಸಿಂಹಮೂರ್ತಿ, ಹೆಚ್ಚವರಿ ಸದಸ್ಯರಾಮಮೂರ್ತಿ, ಕೃಪಾನಂದ್, ಆಂಜಿನಮೂರ್ತಿ, ಎಇಇ ನಾಗಲಿಂಗಪ್ಪ ಬಡಿಗೇರ ಮತ್ತಿತರರುಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!