ಶಿರಸಿಯಲ್ಲಿ ಶೀಘ್ರವೇ ಮಂಗನ ಕಾಯಿಲೆಗೆ ಚಿಕಿತ್ಸೆ: ದಿನೇಶ ಗುಂಡೂರಾವ್

KannadaprabhaNewsNetwork |  
Published : Jul 31, 2025, 12:46 AM IST
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೊನ್ನಾವರದ ತಾಲೂಕು ಆಸ್ಪತ್ರೆ ಪರಿಶೀಲಿಸಿದರು. ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವ, ಶಾಸಕ ದಿನಕರ ಶೆಟ್ಟಿ ಇನ್ನಿತರರು ಹಾಜರಿದ್ದರು. | Kannada Prabha

ಸಾರಾಂಶ

ಮಂಗನ ಕಾಯಿಲೆಗೆ ಸಂಬಂಧಪಟ್ಟಂತೆ ಶಿರಸಿಯಲ್ಲಿ ಲ್ಯಾಬ್ ಆಗಿದೆ. ಅದಕ್ಕೆ ಬೇಕಾಗಿರುವ ಸಲಕರಣೆ ಈಗಾಗಲೇ ಬಂದಿದೆ. ಕೆಲವೆ ದಿನದಲ್ಲಿ ಅದು ಪ್ರಾರಂಭಗೊಳ್ಳಲಿದೆ. ಎಲ್ಲ ಕಡೆ ಕೊಡಲು ಸಾಧ್ಯ ಆಗುವುದಿಲ್ಲ ಎಂದು ಕುಟುಂಬ ಮತ್ತು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಹೊನ್ನಾವರ: ಮಂಗನ ಕಾಯಿಲೆಗೆ ಸಂಬಂಧಪಟ್ಟಂತೆ ಶಿರಸಿಯಲ್ಲಿ ಲ್ಯಾಬ್ ಆಗಿದೆ. ಅದಕ್ಕೆ ಬೇಕಾಗಿರುವ ಸಲಕರಣೆ ಈಗಾಗಲೇ ಬಂದಿದೆ. ಕೆಲವೆ ದಿನದಲ್ಲಿ ಅದು ಪ್ರಾರಂಭಗೊಳ್ಳಲಿದೆ. ಎಲ್ಲ ಕಡೆ ಕೊಡಲು ಸಾಧ್ಯ ಆಗುವುದಿಲ್ಲ ಎಂದು ಕುಟುಂಬ ಮತ್ತು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಅವರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಪರಿಶೀಲನೆ ನಡೆಸಿದ ಆನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಎಲ್ಲ ಕಡೆ ವೈದ್ಯರ ಕೊರತೆ ಇದೆ. ಅದನ್ನು ನೀಗಿಸಲು ಬೇರೆ ಬೇರೆ ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ಗುತ್ತಿಗೆ ಆಧಾರದ ಮೇಲೆ ಡಾಕ್ಟರ್‌, ನರ್ಸ್, ಟೆಕ್ನಿಷಿಯನ್ ನೇಮಕ ಮಾಡಿಕೊಳ್ಳಲಾಗುತ್ತದೆ. 400 ಜನರ ನೇಮಕಕ್ಕೆ ಅನುಮತಿ ಸಿಕ್ಕಿದೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರದ ಬಗ್ಗೆ ಕೇಳಿದಾಗ, ನಾವು ಔಷಧ ಕೇಂದ್ರದ ವಿರೋಧಿಗಳಲ್ಲ, ಆಸ್ಪತ್ರೆ ಒಳಗೆ ಬೇಡ ಎಂದಿದ್ದೇವೆ. ರೋಗಿಗಳಿಗೆ ಆಸ್ಪತ್ರೆಯಲ್ಲಿ ಉಚಿತ ಔಷಧ ಸಿಗಬೇಕು. ಸರ್ಕಾರಿ ಆಸ್ಪತ್ರೆ ಒಳಗೆ ಸೇಲ್ ಆಗಬಾರದು ಎನ್ನುವುದು ನಮ್ಮ ಉದ್ದೇಶ ಎಂದರು.

ಔಷಧ ಕೊರತೆ ಸ್ವಲ್ಪ ಮಟ್ಟಿಗೆ ಇದೆ. ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ನಮ್ಮಲ್ಲಿ ಇರುವ ಔಷಧ ಹೊರಗಡೆ ಬರೆದು ಕೊಡಬಾರದು. ರೋಗಿಗಳಿಗೆ ತೀರಾ ಅಗತ್ಯ ಇರುವ ಔಷಧ ಆಗಿದ್ದಲ್ಲಿ ಬರೆಯಲೇಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಸತಿಗೃಹ ನಿರ್ಮಾಣದ ಬಗ್ಗೆ ಕೇಳಿದಾಗ, ಹಂತ ಹಂತವಾಗಿ ಮಾಡುತ್ತೇವೆ. ಒಮ್ಮೆಲೆ ಮಾಡುವುದು ಕಷ್ಟ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದರು.

ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಆಯುಷ್ಮಾನ್ ಯೋಜನೆಯಲ್ಲಿ ಈ ಹಿಂದೆ ಜಿಲ್ಲಾ ಆರೋಗ್ಯ ಅಧಿಕಾರಿ ಶಿಫಾರಸು ತರಬೇಕಿತ್ತು. ಈಗ ತಾಲೂಕು ಆಸ್ಪತ್ರೆ ವೈದ್ಯರ ಶಿಫಾರಸು ಪತ್ರ ಪಡೆಯಲಾಗುತ್ತಿದೆ. ಶಿಫಾರಸು ಪತ್ರದ ಪರಿಷ್ಕರಣೆ ಮಾಡುತ್ತಿದ್ದೇವೆ. ಶಿಫಾರಸು ಪತ್ರ ಇಲ್ಲದೆ ನೇರವಾಗಿ ಮಾಡುವ ಬಗ್ಗೆ ಪ್ರಯತ್ನ ನಡೆಸಿದ್ದೇವೆ ಎಂದರು.

ಗೋಕರ್ಣ ಮತ್ತು ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿದ್ದರೂ ವೇಗ ಪಡೆದುಕೊಂಡಿಲ್ಲ. ಮೆಡಿಕಲ್ ಕಾಲೇಜು ಸ್ಟೂಡೆಂಟ್ ಹಾಕುತ್ತಿದ್ದಾರೆ ಎಂದಾಗ, ಮಂಕಿಯಲ್ಲಿ ಪರಿಶೀಲನೆ ನಡೆಸಿದ್ದೇನೆ. ಹೊಸ ಮೇಲ್ವಿಚಾರಕರನ್ನು, ಇನ್ನುಳಿದ ಸೌಲಭ್ಯವನ್ನು ನೀಡುತ್ತೇನೆ ಎಂದರು.

ಕರವೇ ಅಧ್ಯಕ್ಷ ಮಂಜುನಾಥ ಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನರ್ ಇಲ್ಲದ ಬಗ್ಗೆ ಸಚಿವರ ಗಮನ ಸೆಳೆದರು. ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್‌, ನಿವೇದಿತ್ ಆಳ್ವ, ಬೀನಾ ವೈದ್ಯ, ಭಟ್ಕಳ ಉಪ ವಿಭಾಗಾಧಿಕಾರಿ ಆಶಾರಾಣಿ ಇದ್ದರು.

ಮಂಕಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಪರಿಶೀಲನೆ:

ಮೇಲ್ದರ್ಜೆಗೆ ಏರಿರುವ ತಾಲೂಕಿನ ಮಂಕಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಪರಿಶೀಲನೆ ನಡೆಸಿದರು. ಸ್ಥಳೀಯರು ಅಲ್ಲಿರುವ ಹಳೆಯ ಕಟ್ಟಡ ತೆರವಿಗೆ ಮನವಿ ಮಾಡಿದರು. ತೆರವುಗೊಳಿಸುವುದಾಗಿ ಸಚಿವರು ತಿಳಿಸಿದರು. ವೈದ್ಯರು ಮತ್ತು ಸಿಬ್ಬಂದಿಗೆ ವಸತಿಗೃಹ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದರು. ಕುಟುಂಬ ಮತ್ತು ಆರೋಗ್ಯ ಸಚಿವರ ಜತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಇನ್ನಿತರ ಮುಖಂಡರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...