ಕಡೂರು: ತಾಲೂಕಿನ ಇತಿಹಾಸ ಪ್ರಸಿದ್ದ ಖಂಡುಗದಹಳ್ಳಿಯ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಆಚರಣೆ ಮತ್ತು ರಥೋತ್ಸವದ ಹಿನ್ನೆಲೆಯಲ್ಲಿ ಕಡೂರು ಪಟ್ಟಣದಿಂದ ಹೆಣ್ಣುಮಕ್ಕಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬುಧವಾರ ಭಕ್ತರು ಖಂಡುಗದಹಳ್ಳಿಗೆ ಪಾದಯಾತ್ರೆ ಬೆಳೆಸಿದರು.
ಆ ಬಳಿಕ ದೇವಾಲಯದ ಧರ್ಮದರ್ಶಿ ಕೆ.ಬಿ. ಸೋಮೇಶ್ ಮಾತನಾಡಿ, ಶಿವರಾತ್ರಿ ಆಚರಣೆಯ ಅಂಗವಾಗಿ ಭಕ್ತರು ಪಾದಯಾತ್ರೆಯ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಿದ್ದು, ಇದೇ ಮೊದಲ ಭಾರಿಗೆ ಪ್ರಥಮ ವರ್ಷದಲ್ಲಿ ಭಕ್ತರು ಉತ್ಸುಕರಾಗಿ ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸಿದ್ದಾರೆ.. ಮುಂದಿನ ದಿನಗಳಲ್ಲಿ ಮತ್ತಷ್ಟು ಭಕ್ತರ ಪಾದಯಾತ್ರೆ ಪ್ರಮಾಣ ಹೆಚ್ಚಲಿದೆ ಎಂದರು.
ಕೆ.ಸಿ. ಸೋಮೇಶ್, ಕೆ.ಎಸ್. ಮಂಜುನಾಥ್, ಕಂಸಾಗರ ಸೋಮಶೇಖರ್, ಹಳೇಪೇಟೆ ಶೇಖರಪ್ಪ, ಗೋವಿಂದಪ್ಪ, ಕೆ.ಜಿ.ಲೋಕೇಶ್, ದೀಪು,ಕೆ.ಜಿ. ಸೋಮಶೇಖರ್ ಹಾಗೂ ಮಹಿಳಾ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.