ಬುಡಕಟ್ಟು ನಮ್ಮ ಮಾನವ ಕುಲದ ಮೂಲ ನೆಲೆ: ಸಾಹಿತಿ ಬನ್ನೂರು ರಾಜು

KannadaprabhaNewsNetwork |  
Published : Oct 01, 2024, 01:18 AM IST
50 | Kannada Prabha

ಸಾರಾಂಶ

ಬುಡಕಟ್ಟು ಅಂದರೆ ಒಗ್ಗಟ್ಟು, ಸಂಸ್ಕಾರ, ಸಂಸ್ಕೃತಿಯ ಪ್ರತೀಕ. ಇದು ಒಂದು ವಿಶಿಷ್ಟ ಮಾನವ ಜನಾಂಗ, ಮಾನವ ಕುಲದ ಅಸ್ಮಿತೆ. ಒಂದೇ ದೇವರು ಒಂದೇ ಧರ್ಮವನ್ನುಳ್ಳ ನಾಗರೀಕತೆ. ಅವರು ಕೊಟ್ಟ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲದರಲ್ಲೂ ಬುಡಕಟ್ಟಿನ ಕೊಡುಗೆಯಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ಬುಡಕಟ್ಟು ನಮ್ಮ ಮಾನವ ಕುಲದ ಮೂಲ ನೆಲೆ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್, ತಾಲೂಕು ಘಟಕ ಹುಣಸೂರು ಹಾಗೂ ಕನ್ನಡ ವಿಭಾಗ ವತಿಯಿಂದ ವಿಶ್ವ ಬುಡಕಟ್ಟು ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬುಡಕಟ್ಟು ಅಂದರೆ ಒಗ್ಗಟ್ಟು, ಸಂಸ್ಕಾರ, ಸಂಸ್ಕೃತಿಯ ಪ್ರತೀಕ. ಇದು ಒಂದು ವಿಶಿಷ್ಟ ಮಾನವ ಜನಾಂಗ, ಮಾನವ ಕುಲದ ಅಸ್ಮಿತೆ. ಒಂದೇ ದೇವರು ಒಂದೇ ಧರ್ಮವನ್ನುಳ್ಳ ನಾಗರೀಕತೆ. ಅವರು ಕೊಟ್ಟ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲದರಲ್ಲೂ ಬುಡಕಟ್ಟಿನ

ಕೊಡುಗೆಯಿದೆ. ಒಂದು ನೈತಿಕತೆಯನ್ನು ಇಟ್ಟುಕೊಂಡು ಬಾಳುತ್ತಿರುವ ವಿಶಿಷ್ಟ ಸಮುದಾಯ ಬುಡಕಟ್ಟು, ಕೂಡಿ ಬಾಳುವ ಸಂಸ್ಕೃತಿ ಮನುಷ್ಯತ್ವದ ಪಾಠ ಹೇಳುವ ಜನಾಂಗದ ಇವರು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಸರ್ಕಾರ ಹೆಚ್ಚಿನ ಸೌಲಭ್ಯ ನೀಡುವ ಮೂಲಕ ಅವರ ಬದುಕನ್ನು ಸುಧಾರಿಸಬೇಕು ಎಂದರು. ಜಿಲ್ಲಾ ಕನ್ನಡ ಜಾನಪದ ಪರಿಷತ್ ನ ಅಧ್ಯಕ್ಷ ಕ್ಯಾತನಹಳ್ಳಿ ಎಚ್. ಪ್ರಕಾಶ್ ಮಾತನಾಡಿದರು.

ಬುಡಕಟ್ಟು ಸಮುದಾಯದ ತೊಲಯ್ಯ, ಜಯಪ್ಪ, ಕಿರುಮಿದಿ, ಗೌರಮ್ಮ ಅವರನ್ನು ಸನ್ಮಾನಿಸಲಾಯಿತು. ಬುಡಕಟ್ಟು ಜನ ಸಮುದಾಯಕ್ಕೆ ಸೇವೆ ಮಾಡುತ್ತಿರುವ ಡಾ.ಎಸ್. ಶ್ರೀಕಾಂತ್ ಅವರನ್ನು ಗೌರವಿಸಲಾಯಿತು. ಸಿಂಗೇಶ್, ಮಹೇಶ್ ಚಿಲ್ಕುಂದ, ಸೋಮಶೇಖರ ಮಲರಾ ಹಾಗೂ ಪ್ರವೀಣ್ ತಂಡದವರು ಜಾನಪದ ಗೀತಗಾಯನ ನಡೆಸಿಕೊಟ್ಟರು.

ಇಂಚರ ಭರತನಾಟ್ಯ ಪ್ರದರ್ಶಿಸಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪುಟ್ಟಶೆಟ್ಟಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ರವಿಗೌಡ ಇದ್ದರು. ಎಂ.ಆರ್. ಬಸವಲಿಂಗಸ್ವಾಮಿ, ಬಿ. ನಂಜುಂಡಸ್ವಾಮಿ, ಎಚ್.ಆರ್. ವಿಶ್ವನಾಥ್, ಎನ್. ಕರುಣಾಕರ್, ಕೆ.ಪಿ. ಪ್ರಸನ್ನ, ಲಕ್ಷ್ಮಯ್ಯ ಇದ್ದರು. ನೂರುನ್ನಿಸ ಪ್ರಾರ್ಥಿಸಿದರು. ಬಸವಲಿಂಗಸ್ವಾಮಿ ಸ್ವಾಗತಿಸಿದರು. ನಂಜುಂಡಸ್ವಾಮಿ ನಿರೂಪಿಸಿದರು.

PREV