ಕನ್ನಡಪ್ರಭ ವಾರ್ತೆ ಹಲಗೂರು
ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಶೇಖರ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಉತ್ತಮ ಸೇವೆ, ಕರ್ತವ್ಯ ನಿರ್ವಹಿಸುತ್ತಿರುವ ಶೇಖರ್ ಅವರಿಗೆ ಇತ್ತೀಚೆಗೆ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಿಸಿದರು.
ಈ ಹಿನ್ನೆಲೆಯಲ್ಲಿ ಹಲಗೂರು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರ ಸಹಪಾಠಿಗಳು ಅಭಿನಂದಿಸಿದಾಗ ಸನ್ಮಾನ ಸ್ವೀಕರಿಸಿ ಮಾತನಾಡಿದ ಶೇಖರ್, ನಾನು ಮಾರಗೌಡನಹಳ್ಳಿ ನಿವಾಸಿ. ನನ್ನ ಸೇವೆ ಗುರುತಿಸಿ ಸನ್ಮಾನಿಸಿರುವುದು ಸಂತೋಷದ ವಿಷಯ. ಅದರ ಜೊತೆಗೆ ನಾನು ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ನನ್ನ ಸಹಪಾಠಿಗಳು ಈಗ ಒಂದೊಂದು ವೃತ್ತಿಯಲ್ಲಿದ್ದಾರೆ. ಅವರೆಲ್ಲ ಒಂದು ಕಡೆ ಸೇರಿ ಇಂದು ನನಗೆ ಸನ್ಮಾನಿಸಿ ಅಭಿನಂದಿಸಿರುವುದು ತುಂಬಾ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಂಜುಳಾ ಮಾತನಾಡಿ, ನಾವು 1994ರಲ್ಲಿ ವ್ಯಾಸಂಗ ಪಡೆದಿರುವ ವಿದ್ಯಾರ್ಥಿಗಳು. ನಮ್ಮ ಜೊತೆ ವ್ಯಾಸಂಗ ಮಾಡುತ್ತಿದ್ದ ಶೇಖರ್ ಇಂದು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಚಿನ್ನದ ಪದಕ ಪಡೆದಿರುವುದು ನಮಗೆಲ್ಲ ತುಂಬಾ ಸಂತೋಷವಾಗಿದೆ ಎಂದರು.
ಈ ವೇಳೆ ಸಹಪಾಠಿಗಳಾದ ನಾಗೇಂದ್ರ, ಜಗದೀಶ ,ಕುಸುಮ, ತನುಜಾ, ಎನ್.ಯೋಗೇಶ ಸೇರಿದಂತೆ ಇತರರು ಇದ್ದರು. ಇಂದು ಮಳವಳ್ಳಿಯಲ್ಲಿ ಬೃಹತ್ ಶಸ್ತ್ರಚಿಕಿತ್ಸಾ ಶಿಬಿರಮಂಡ್ಯ: ಯಶಸ್ವಿನಿ ಯೋಜನೆ ಹಾಗೂ ಎಸ್.ಡಿ.ಜಯರಾಂ ಆಸ್ಪತ್ರೆ ಸಹಯೋಗದೊಂದಿಗೆ ಸೆ.೨೪ರಂದು ಮಳವಳ್ಳಿಯ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರವು ಖ್ಯಾತ ವೈದ್ಯ ಡಾ.ಸಿ.ಎಂ. ಪರಮೇಶ್ವರ್ ಮಾರ್ಗದರ್ಶನದಲ್ಲಿ ನಡೆಯಲಿದೆ. ಆರೋಗ್ಯ ಶಿಬಿರದಲ್ಲಿ ಪೈಲ್ಸ್, ಫಿಷರ್, ಪಿಸ್ತುಲ ಪೈಲೋನಿಡಾಲ್ ಸೈನಸ್, ಮೂಲವ್ಯಾಧಿ ಸಂಬಂಧಿತ ಕಾಯಿಲೆಗಳು, ಥೈರಾಯಿಡ್, ಹರ್ನಿಯಾ. ಅಪೈಂಡೀಕ್ಸ್, ಗರ್ಭಕೋಶದ ಶಸ್ತ್ರಚಿಕಿತ್ಸೆ, ಪಿತ್ತಕೋಶದ ಶಸ್ತ್ರ ಚಿಕಕಿತ್ಸೆಗಳಿಗೆ ಸಂಬಂಧಿಸಿದಂತೆ ಉಚಿತ ಸಮಾಲೋಚನೆ ಇರುತ್ತದೆ. ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಎಸ್.ಡಿ.ಜಯರಾಂ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.