ಕವಿ ಎಚ್‌ಎಸ್‌ವಿ ಅವರಿಗೆ ಗೀತನಮನ ಮೂಲಕ ಶ್ರದ್ಧಾಂಜಲಿ

KannadaprabhaNewsNetwork |  
Published : Jun 19, 2025, 11:49 PM IST
19ಕೆಎಂಎನ್ ಡಿ20 | Kannada Prabha

ಸಾರಾಂಶ

ಕನ್ನಡ ಹಲವು ಗೀತೆಗಳು ಯುವಕರ ಬಾಯಲ್ಲಿ ಗುನುಗುವಂತೆ ಮಾಡಿದ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಬಹುತೇಕ ಟಿವಿ ಧಾರಾವಾಹಿಗಳ ಶೀರ್ಷಿಕೆ ಗೀತೆಗಳು ಇವರ ಕವಿತೆಯಾಗಿತ್ತು. ಹಿಂದಿನ ಯುವಪೀಳಿಗೆ ಕನ್ನಡ ಗೀತೆ, ಕಾವ್ಯಗಳನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಎಲ್ಲ ರಂಗದಲ್ಲಿಯೂ ಸೈ ಎನಿಸಿ ಕೊಂಡ ಕನ್ನಡದ ಸಾರಸ್ವತ ಲೋಕದ ಧೃವ ನಕ್ಷತ್ರ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿಟ್ರಸ್ಟ್ ಹಮ್ಮಿಕೊಂಡಿದ್ದ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೇಷ್ಟ್ರಾಗಿ, ನಾಟಕಕಾರ, ನಿರ್ದೇಶಕ, ವಿಮರ್ಶಕ, ಸಾಹಿತ್ಯ, ಗೀತೆರಚನೆ ಎನ್ನದೆ ಎಲ್ಲ ರಂಗದಲ್ಲಿಯೂ ತೊಡಗಿಸಿಕೊಂಡಿದ್ದರು ಎಂದರು.

ಕನ್ನಡ ಹಲವು ಗೀತೆಗಳು ಯುವಕರ ಬಾಯಲ್ಲಿ ಗುನುಗುವಂತೆ ಮಾಡಿದ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಬಹುತೇಕ ಟಿವಿ ಧಾರಾವಾಹಿಗಳ ಶೀರ್ಷಿಕೆ ಗೀತೆಗಳು ಇವರ ಕವಿತೆಯಾಗಿತ್ತು. ಹಿಂದಿನ ಯುವಪೀಳಿಗೆ ಕನ್ನಡ ಗೀತೆ, ಕಾವ್ಯಗಳನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದರು ಎಂದರು.

ಸ್ಪಂದನಾ ಟ್ರಸ್ಟಿ ತ್ರಿವೇಣಿ ಮಾತನಾಡಿ, ಸಾಹಿತ್ಯಕ್ಕೆ ಸಾವಿಲ್ಲಎಂದು ತೋರಿಸಿದವರು ಎಚ್‌ಎಸ್‌ವಿ. ಆಧ್ಯಾತ್ಮ, ಪ್ರಕೃತಿ, ತಾಯಿ, ದೇಶಭಕ್ತಿ ಎನ್ನದೆ ಎಲ್ಲ ಗೀತೆಗಳನ್ನು ರಚಿಸಿದ ಅಪರೂಪದ ಮೇಷ್ಟ್ರಾಗಿದ್ದರು ಎಂದರು.

ಇದೇ ವೇಳೆ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮಕ್ಕಳೊಂದಿಗೆ ಎಚ್ ಎಸ್ ವಿಯವರನ್ನು ಸ್ಮರಿಸಿ ಗೀತನಮನ ಸಲ್ಲಿಸಿದರು. ಸತೀಶ್, ಮಹೇಂದ್ರ, ಕವಿತಾ, ಮಂಜುಳಾ ಇದ್ದರು.

ಕ್ಷಯಮುಕ್ತ ಗ್ರಾಪಂ ಕುರಿತು ಸಭೆ

ಮದ್ದೂರು: ತಾಲೂಕು ಕೂಳಗೆರೆ ಗ್ರಾಪಂ ಅಯನ್ನು ಕ್ಷಯ ಮುಕ್ತ ಮಾಡುವ ಸಂಬಂಧ ಆರೋಗ್ಯಾಧಿಕಾರಿಗಳು, ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಮ್ಮಯ್ಯ ಮಾತನಾಡಿ, ಕ್ಷಯ ರೋಗ ಹರಡುವುದು, ಕ್ಷಯ ಮುಕ್ತ ಗ್ರಾಪಂ ಮಾಡುವ ಮಾನ ದಂಡಗಳು ಹಾಗೂ ಪಂಚಾಯ್ತಿಯಿಂದ ಕೈಗೊಳ್ಳ ಬೇಕಿರುವ ಚಟುವಟಿಕೆ ಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಗ್ರಾಪಂ ಸದಸ್ಯರು ಆಶಾ ಕಾರ್ಯಕರ್ತೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೆರಿಗೆ ಹೊರೆಯಿಂದ ಸಂಕ್ರಾಂತಿ ಹಿಗ್ಗು ಮಾಯ: ರವಿಕುಮಾರ್
ಅಥಣಿಯಲ್ಲಿ ರಸ್ತೆ ಅತಿಕ್ರಮಣ ತೆರವು