ಕನ್ನಡಪ್ರಭ ವಾರ್ತೆ ಬೆಟ್ಟದಪುರ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನೇ ಜಾರಿಗೆ ತರಬೇಕೆಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟಿಸಿದರು.ಸಚಿವ ಕೆ. ವೆಂಕಟೇಶ್ ಮಾತನಾಡಿ, ಬಡವರ ಬದುಕಿಗೆ ಬೇಕಾಗಿರುವ ನರೇಗಾ ಯೋಜನೆಯನ್ನು ರದ್ದುಗೊಳಿಸಿ, ಉಳ್ಳವರ ಜೆಬಿಗೆ ತುಂಬ ಯೋಜನೆಯನ್ನು ತಂದಿದ್ದು, ಇದರಿಂದ ಬಡವರು ದಿನನಿತ್ಯ ಕೂಲಿ ಮಾಡಲು ಕಷ್ಟವಾಗಿದ್ದು, ಈ ಯೋಜನೆಯನ್ನು ರದ್ದುಗೊಳಿಸಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮುಂದುವರಿಸಬೇಕು ಎಂದು ತಿಳಿಸಿದರು.ಗ್ಯಾರಂಟಿ ಯೋಜನೆಯ ಸಮಿತಿಯ ನಿತಿನ್ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಎಂ. ಲಕ್ಷ್ಮಣ್, ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ವಾಮಿಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಅಯ್ಯರ್ ಗಿರಿ, ಕಾಂಗ್ರೆಸ್ ಮುಖಂಡರಾದ ರವಿ, ಬಿ.ವಿ. ಮಹೇಶ್ ಕುಮಾರ, ಬಿ.ಟಿ.ಕೆ. ಶೇಖರ್, ಸತೀಶ್ ರಾಜೆ ಅರಸ್, ವೆಂಕಟೇಶ್, ಇಕ್ಬಾಲ್ ಶರೀಫ್, ರಕ್ಷಿತ್ ಶಾಲೆ ಕೊಪ್ಪಲು ಪುಟ್ಟರಾಜ, ತಾಪಂ ಮಾಜಿ ಅಧ್ಯಕ್ಷ ಸರಸ್ವತಿ, ಗ್ರಾಪಂ ಮಾಜಿ ಸದಸ್ಯೆ ಶ್ವೇತ, ಪಿರಿಯಾಪಟ್ಟಣದ ಅಧ್ಯಕ್ಷ ಎ.ಕೆ. ಗೌಡ, ಸಹಕಾರ ಸಂಘದ ಅಧ್ಯಕ್ಷ ದಿಲೀಪ್, ರೈತ ಸಂಘದ ರಫೀಕ್ ಅಹ್ಮದ್, ಹಲಗನಹಳ್ಳಿ ಗ್ರಾಮದ ಷಾ ಜಾವಿದ್ ಶರೀಫ್, ಮುಬಾರಕ್ ಇದ್ದರು.---------------