ಗಟ್ಟಿ ಧ್ವನಿ ಬಿಟ್ಟುಹೋದ ಶ್ರೀನಿವಾಸಪ್ರಸಾದ್: ಆರ್.ಮಹಾದೇವಪ್ಪ

KannadaprabhaNewsNetwork |  
Published : May 06, 2024, 12:30 AM IST
33 | Kannada Prabha

ಸಾರಾಂಶ

ಬದನವಾಳು ಗಲಾಟೆ ನಂತರ ದಲಿತರ ಮೇಲಿನ ದೌರ್ಜನ್ಯ ಒಂದಷ್ಟು ಕಡಿಮೆಯಾದವು. ಈ ಪ್ರಕರಣವು ವಿ. ಶ್ರೀನಿವಾಸಪ್ರಸಾದ್‌ ಅವರಿಗೆ ದೊಡ್ಡ ನಾಯಕತ್ವ ತಂದು ಕೊಟ್ಟಿತು. ಅಲ್ಲಿಂದ ದಲಿತ ಸಮುದಾಯಕ್ಕೆ ಗಟ್ಟಿಯಾದ ಧ್ವನಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಹಳ್ಳಿಗಾಡಿನಿಂದ ಬಂದಂತಹ ಅದೆಷ್ಟೋ ವಿದ್ಯಾರ್ಥಿಗಳಿಗೆ ಅಶೋಕಪುರಂ ಆಶ್ರಯ ತಾಣವಾಗಿತ್ತು. ಇದೊಂದು ಸಾಂಸ್ಕೃತಿಕ ಕೇಂದ್ರವೂ ಹೌದು. ಇಲ್ಲಿ ಹುಟ್ಟಿ ಬೆಳೆದ ಸಂಸದ ವಿ. ಶ್ರೀನಿವಾಸಪ್ರಸಾದ್ ಗಟ್ಟಿಯಾದ ಧ್ವನಿಯನ್ನು ಬಿಟ್ಟು ಹೋಗಿದ್ದಾರೆ

ಎಂದು ಕರ್ನಾಟಕ ಬುದ್ಧಧಮ್ಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ ತಿಳಿಸಿದರು.

ವಿಜಯನಗರ 1ನೇ ಹಂತದ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿಯು ಶನಿವಾರ ಸಂಜೆ ಆಯೋಜಿಸಿದ್ದ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದನವಾಳು ಗಲಾಟೆ ನಂತರ ದಲಿತರ ಮೇಲಿನ ದೌರ್ಜನ್ಯ ಒಂದಷ್ಟು ಕಡಿಮೆಯಾದವು. ಈ ಪ್ರಕರಣವು ವಿ. ಶ್ರೀನಿವಾಸಪ್ರಸಾದ್‌ ಅವರಿಗೆ ದೊಡ್ಡ ನಾಯಕತ್ವ ತಂದು ಕೊಟ್ಟಿತು. ಅಲ್ಲಿಂದ ದಲಿತ ಸಮುದಾಯಕ್ಕೆ ಗಟ್ಟಿಯಾದ ಧ್ವನಿಯಾಗಿದ್ದರು. ದಲಿತ ರಾಜಕಾರಣದಲ್ಲಿ ಪ್ರಸ್ತುತ ಇಂತಹ ಗಟ್ಟಿತನ, ಎದೆಗಾರಿಯುಳ್ಳ ಧ್ವನಿ ಇರುವ ನಾಯಕ ಅನಿವಾರ್ಯ ಎಂದು ಅವರು ಹೇಳಿದರು.

ಸಮಿತಿಯ ಅಧ್ಯಕ್ಷ ಪ್ರೊ.ಡಿ. ನಂಜುಂಡಯ್ಯ ವಾತನಾಡಿ, ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ತಮ್ಮ ರಾಜಕೀಯ ಜೀವನವನ್ನು ಜನ ಸಂಘದಿಂದ ಪ್ರಾರಂಭಿಸಿ, ಜನ ಸಂಘದಿಂದಲೇ ಅವರು ರಾಜಕೀಯ ನಿವೃತ್ತಿಯನ್ನು ಘೋಷಿಸಿದರು. ಆದರೆ, ಅವರ ರಾಜಕೀಯ ಜೀವನದಲ್ಲಿ ದಲಿತ ಸಮುದಾಯಕ್ಕೆ ಹಾಗೂ ಅವರ ಹೆಸರಿನಲ್ಲಿ ಶಾಲಾ ಕಾಲೇಜು, ಆಸ್ಪತ್ರೆ ಹೀಗೆ ಗುರುತರವಾದಂತಹದನ್ನು ಬಿಟ್ಟು ಹೋಗದಿರುವುದು ನೋವಿನ ಸಂಗತಿ ಎಂದರು.

ಮುಖಂಡ ಬಿ.ಎಂ. ಲಿಂಗರಾಜ್ ಮಾತನಾಡಿ, ವಿ. ಶ್ರೀನಿವಾಸಪ್ರಸಾದ್‌ ಅವರು ಎದೆಗಾರಿಕೆ ಇದ್ದ ವ್ಯಕ್ತಿ. ಪ್ರಾಮಾಣಿಕವಾಗಿ ರಾಜಕಾರಣ ಮಾಡಿದರು. ಯಾವುದೇ ಭ್ರಷ್ಟಾಚಾರವಿಲ್ಲದೆ ರಾಜಕೀಯ ಜೀವನ ನಡೆಸಿದರು. ಆದರೆ ಅವರ ನಂತರದ ಪರ್ಯಾಯ ರಾಜಕಾರಣಿಯನ್ನು ಹುಟ್ಟು ಹಾಕದಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬೌದ್ಧಬಿಕ್ಕು ಸೋದೆ ಭಂತೇಜಿ ಸಮ್ಮುಖ ವಹಿಸಿದ್ದರು. ಸಮಿತಿಯ ಸಹ ಕಾರ್ಯದರ್ಶಿ ಎಚ್. ಶಿವರಾಜ್, ಖಜಾಂಚಿ ಎಂ. ಸಾವಕಯ್ಯ, ಪತ್ರಕರ್ತ ದೀಪಕ್, ನಿವೃತ್ತ ಎಂಜಿನಿಯರ್ ಆರ್. ನಟರಾಜು, ರಾಜು ಹಂಪಾಪುರ, ಪುಟ್ಟಸ್ವಾಮಿ, ನಿಸರ್ಗ ಸಿದ್ದರಾಜು, ಮಹದೇವಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಅಹಿಂದ ಜವರಪ್ಪ, ಸಾಹಿತಿ ಡಾ. ಕೃಷ್ಣಮೂರ್ತಿ ಚಮರಂ, ಮಲ್ಕುಂಡಿ ಮಹದೇವಸ್ವಾಮಿ, ಪಿ. ಸಂಬಯ್ಯ , ಹರಕುಮಾರ್, ಬಸವಣ್ಣ, ರಾಘವೇಂದ್ರ ಅಪುರಾ, ಕ್ರಾಂತಿರಾಜ್ ಒಡೆಯರ್, ವಿಜಯಕುಮಾರ್, ವಿಶಾಲ್ ಮೊದಲಾದವರು ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ