ಚನ್ನಪಟ್ಟಣ: ಬೇರೆ ಇಲಾಖೆಗೆ ಹೋಲಿಸಿದರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವುದು ಕಷ್ಟಕರ. ಈ ಹಿನ್ನೆಲೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪೊಲೀಸರನ್ನು ಸ್ಮರಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಏ.2ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಯೋಜಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.
ನಗರದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಧ್ವಜ ದಿನಾಚರಣೆಯಿಂದ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಮ್ಮ ಜೀವ ಕೈಯಲ್ಲಿ ಹಿಡಿದು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಕ್ಲಿಷ್ಟಕರ ಪರಿಸ್ಥಿತಿ ಎದುರಿಸಿ ಪೊಲೀಸ್ ಇಲಾಖೆಯಲ್ಲಿ ೩೦-೩೫ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸರ ಸೇವೆಯನ್ನು ಧ್ವಜ ದಿನಾಚರಣೆಯೆಂದು ಸ್ಮರಿಸಿ ಗೌರವಿಸಲಾಗುತ್ತದೆ ಎಂದರು.ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ಇಲಾಖೆ ನೀಡುವ ಧ್ವಜವನ್ನು ಮಾರಾಟ ಮಾಡಿ ಅದರಿಂದ ಸಂಗ್ರಹವಾದ ಹಣದಲ್ಲಿ ಕೇಂದ್ರ ಬಿಎಫ್ ಗೆ ಕಳುಹಿಸಿ ಉಳಿದ ಅರ್ಧ ಹಣವನ್ನು ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ನಿಧಿಗೆ ಜಮಾ ಮಾಡಲಾಗುತ್ತದೆ. ಕಳೆದ ವರ್ಷ ಧ್ವಜ ಮಾರಾಟದಿಂದ ಜಿಲ್ಲೆಯಲ್ಲಿ 25.4 ಲಕ್ಷ ಹಣ ಸಂಗ್ರಹವಾಗಿತ್ತು ಎಂದು ಮಾಹಿತಿ ನೀಡಿದರು.
ಕ್ಷೇಮಾಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಚನ್ನಪಟ್ಟಣದಲ್ಲಿ ಪೊಲೀಸ್ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಶಿಶುವಿಹಾರ ಕೇಂದ್ರವನ್ನು ಸಹ ನಿರ್ಮಿಸಲಾಗಿದೆ. ವಿವಿಧ ತಾಲೂಕುಗಳಲ್ಲಿ ಪೊಲೀಸ್ ವಸತಿಗೃಹಗಳಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡಲಾಗುತ್ತಿದೆ. ಇದಲ್ಲದೆ ಅಮೃತ ಪೊಲೀಸ್ ಸಿಬ್ಬಂದಿ ಮೃತರಾದ ವೇಳೆ ಅವರಂತೆ ಕ್ರಿಯೆಗೆ ಹಾಗೂ ಅನಾರೋಗ್ಯ ವೆಚ್ಚಗಳಿಗೆ ಸಹಾಯ ಮಾಡಲಾಗುತ್ತಿದೆ. ಈ ಬಾರಿಯೂ ಸಹ ಧ್ವಜ ಮಾರಾಟದ ಮೂಲಕ ಹೆಚ್ಚಿನ ಸಂಗ್ರಹಿಸಿ ಅಮೃತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ನೀಡಬೇಕು ಮನವಿ ಮಾಡಿದರು.ನಿವೃತ್ತ ಎಎಸ್‌ಐ ಎಚ್.ಟಿ ಸುರೇಶ್ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಗೌರವ ವಂದನೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುರೇಶ್, ರಾಮಚಂದ್ರ, ಪಿಟಿಎಸ್ ಪ್ರಾಂಶುಪಾಲ ಯೋಗೇಶ್, ಡಿವೈಎಸ್‌ಪಿಗಳಾದ ದಿನಕರ ಶೆಟ್ಟಿ, ಗಿರಿ, ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಪೊಟೋ೩ಸಿಪಿಟಿ೧,2:ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಪೊಲೀಸ್‌ರನ್ನು ಗೌರವಿಸಲಾಯಿತು.