ಸೀತಾರಾಂ ಯೆಚೂರಿಗೆ ಶ್ರದ್ದಾಂಜಲಿ

KannadaprabhaNewsNetwork |  
Published : Sep 16, 2024, 01:50 AM IST
ಸೀತಾರಾಂ ಯೆಚೂರಿಗೆ ಶ್ರದ್ದಾಂಜಲಿ. | Kannada Prabha

ಸಾರಾಂಶ

ಸೀತಾರಾಂ ಯೆಚೂರಿಗೆ ಶ್ರದ್ದಾಂಜಲಿ

ಕನ್ನಡಪ್ರಭ ವಾರ್ತೆ ತುಮಕೂರುಭಾರತ ಕಮ್ಯೂನಿಷ್ಟ ಪಕ್ಷ (ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.ಸಿ.ಯತಿರಾಜು ಮಾತನಾಡಿ ಸಮಾಜದಲ್ಲಿ ಕೋಮುವಾದ ಪ್ರಜಾಸತ್ತೆಯನ್ನು , ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವ ದಾಳಿಯು ಜೋರಾಗಿರುವ ಈ ಸಮಯದಲ್ಲಿ ಪ್ರಜಾಸತ್ತೆಯನ್ನು , ಒಕ್ಕೂಟ ವ್ಯವಸ್ಥೆಯನ್ನು ರಕ್ಷಣೆಗಾಗಿ ಹೋರಾಟದ ಮುಂಚೂಣಿಯಲ್ಲಿದ್ದ, ಫ್ಯಾಸಿಸ್ಟ್ ವಿರೋಧಿಗಳ ಹೋರಾಟವನ್ನು ಹೆಚ್ಚು ವ್ಯಾಪಕವಾಗಿದೆ ಮುನ್ನಡೆಸುವಲ್ಲಿ ಯಶಸ್ವಿಯಾದರು ಆದರೆ ಯೆಚುರಿ ಅವರು ಅಗಲಿಕೆ ಪ್ರಜಾಪ್ರಭುತ್ವ ಪ್ರೇಮಿಗಳಗೆ ದುಃಖ ಉಂಟುಮಾಡಿದೆ ಎಂದರು. ಪ್ರೊ. ಕೆ ದೊರೆರಾಜು ಮಾತನಾಡಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ವಿರೋಧಿಸಿ ನೇರವಾಗಿ ಇಂದಿರಾಗಾಂಧಿಯವರನ್ನೇ ಎದುರಿಸಿದ ದಿಟ್ಟತನ ಅವರದು, ಜವಾಹರ್ ಲಾಲ್ ನೆಹರು ಯುನಿವರ್ಸಿಟಿಯಲ್ಲಿ ದಲಿತ ಆದಿವಾಸಿ ವಿದ್ಯಾರ್ಥಿಸಂಸ್ಥೆಗಳನ್ನು ಬೇರೆ ಬೇರೆ ಸಂಘಟನೆಗಳನ್ನು ಒಳಗೊಳ್ಳುವಿಕೆ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದರು ಅವರಿಗೆ ಭಾವ ಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸುತ್ತಿದ್ದೇನೆ ಎಂದರು.ಭಾರತ ಕಮ್ಯುನಿಸ್ಟ್ ಪಕ್ಷದ ಕರ್ನಾಟಕ ರಾಜ್ಯ ಪ್ರಧಾನಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ ಸೀತಾರಾಂ ಯೆಚರಿಯವರು ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಕಣಕ್ಕೆ ಧುಮುಕಿದ್ದು ಮಾತ್ರವಲ್ಲಾ ಅಖಿಲ ಭಾರತ ನಾಯಕರಾಗಿ ಮುನ್ನಡೆಸಿದ್ದಾರೆ ಎಂದರು. ಸಿಪಿಐ ಎಂ ತುಮಕೂರು ಜಿಲ್ಲಾ ಸಮಿತಿಯ ಎನ್.ಕೆ ಸುಬ್ರಮಣ್ಯ, ಬಿ.ಉಮೇಶ್, ಶಿವಣ್ಣ, ಕಲ್ಪನಾ ಮಾತನಾಡಿದರು ಸಭೆಯಲ್ಲಿ ಎರಡು ನಿಮಿಷ ಮೌನಾಚರಣೆ ಜೊತೆಗೆ ಪುಷ್ಪ ನಮನಗಳನ್ನು ಅರ್ಪಿಸಲಾಯಿತು, ಸಭೆಯಲ್ಲಿ ಜವಾಹರ್‌, ರೈತ ಸಂಘಟನೆಯ ಸಿ.ಅಜ್ಜಪ್ಪ, ಬಸವರಾಜು,ಪ್ರಗತಿಪರ ಸುಬ್ರಮಣ್ಯಂ, ಬೀಡಿ ಕಾರ್ಮಿಕ ಮುಖಂಡ ಖಾಸೀಂ, ಮುನಾಫ್,ಶಂಕರ, ಯುವ ಮುಖಂಡ ರಾಘವೇಂದ್ರ, ಶಹತಾಜ್, ಪುಟ್ಟೇಗೌಡ, ಸಿಪಿಐನ ಕಾರ್ಯದರ್ಶಿ ಗಿರೀಶ್‌ ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ