ಆರ್ಯ ವೈಶ್ಯ ನಿಗಮದ ನೂತನ ಅಧ್ಯಕ್ಷ ಕೆ.ವಿ.ರಾಮಪ್ರಸಾದ್‌ ಗೆ ಸನ್ಮಾನ

KannadaprabhaNewsNetwork |  
Published : Feb 15, 2026, 02:30 AM IST
ಫೋಟೋ 14ಪಿವಿಡಿ1ಪಾವಗಡ,ರಾಜ್ಯ ಆರ್ಯ ವೈಶ್ಯ ನಿಗಮದ ನೂತನ ಅಧ್ಯಕ್ಷರಾದ ಕೆ.ವಿ.ರಾಮಪ್ರಸಾದ್‌ ಅವರಿಗೆ ತಾಲೂಕಿನ ಅರ್ಯ ವೈಶ್ಯ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ದೇವರೆಂದರೆ ಕಣ್ಣಿಗೆ ಕಾಣದ ಒಂದು ಅದ್ಭುತ ಶಕ್ತಿ, ಧರ್ಮ ಅನುಸರಣೆ ಹಾಗೂ ಭಗವಂತನ ಪ್ರಾರ್ಥನೆಯಿಂದ ನಾವು ಒಳಿತು ಕಾಣಲು ಸಾಧ್ಯ. ಹೀಗಾಗಿ ಸಮಾಜಕ್ಕೆ ಉಪಯುಕ್ತ ಕೆಲಸ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಆರ್ಯ ವೈಶ್ಯ ಸಮುದಾಯ ಸೇರಿ ಇತರೆ ಸಮುದಾಯಗಳ ಅಭಿವೃದ್ಧಿ ಕಾರ್ಯಗಳಿಗೆ ಸದಾ ಬೆಂಬಲವಾಗಿ ನಿಲ್ಲುವೆ.

ಕನ್ನಡಪ್ರಭ ವಾರ್ತೆ ಪಾವಗಡ

ಶಿಕ್ಷಣ ಪ್ರಗತಿಯ ಸಂಕೇತ, ವಿದ್ಯೆ ಜತೆಗೆ ಧಾರ್ಮಿಕ ಆಚರಣೆ ಬಹು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸಹಕಾರ ಹಾಗೂ ಸಹಾಯ ನೀಡುವುದಾಗಿ ಆರ್ಯ ವೈಶ್ಯ ನಿಗಮದ ಅಧ್ಯಕ್ಷರು ಹಾಗೂ ಹಿರಿಯ ಉದ್ಯಮಿ ಕೆ. ವಿ.ರಾಮ್ ಪ್ರಸಾದ್ ಹೇಳಿದರು. ರಾಜ್ಯ ಆರ್ಯ ವೈಶ್ಯ ನಿಗಮದ ಅಧ್ಯಕ್ಷರಾದ ಬಳಿಕ ಶನಿವಾರ ಮೊದಲ ಬಾರಿಗೆ ಪಾವಗಡ ನಗರಕ್ಕೆ ಆಗಮಿಸಿ ಇಲ್ಲಿನ ಶ್ರೀ ಶನಿ ಮಹಾತ್ಮ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು, ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಿದ್ದು, ಪ್ರತಿಭಾನ್ವಿತರಾಗಿ ಹೊರಹೊಮ್ಮಬೇಕಿದೆ. ಹೀಗಾಗಿ ಪ್ರತಿಯೊಬ್ಬರೂ ವಿದ್ಯಾವಂತರಾದರೆ ರಾಷ್ಟ್ರದ ಪ್ರಗತಿಗೆ ಸಹಕಾರವಾಗಲಿದೆ. ಜತೆಗೆ ಶಿಸ್ತು, ಸಂಸ್ಕಾರ ಮುಖ್ಯವಾಗಿದ್ದು, ಧಾರ್ಮಿಕ ಶ್ರದ್ಧಾ ಕಾರ್ಯಕ್ರಮ ರೂಪಿಸಬೇಕು. ದೇವರೆಂದರೆ ಕಣ್ಣಿಗೆ ಕಾಣದ ಒಂದು ಅದ್ಭುತ ಶಕ್ತಿ, ಧರ್ಮ ಅನುಸರಣೆ ಹಾಗೂ ಭಗವಂತನ ಪ್ರಾರ್ಥನೆಯಿಂದ ನಾವು ಒಳಿತು ಕಾಣಲು ಸಾಧ್ಯ. ಹೀಗಾಗಿ ಸಮಾಜಕ್ಕೆ ಉಪಯುಕ್ತ ಕೆಲಸ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಆರ್ಯ ವೈಶ್ಯ ಸಮುದಾಯ ಸೇರಿ ಇತರೆ ಸಮುದಾಯಗಳ ಅಭಿವೃದ್ಧಿ ಕಾರ್ಯಗಳಿಗೆ ಸದಾ ಬೆಂಬಲವಾಗಿ ನಿಲ್ಲುವೆ ಎಂದು ಹೇಳಿದರು.ನಂತರ ಸಮಾಜದಿಂದ ಸನ್ಮಾನ ಸ್ವೀಕರಿಸಿ, ತಾಲೂಕು ಆರ್ಯ ವೈಶ್ಯ ಸಂಘದ ಅಧ್ಯಕ್ಷ ಜಿ.ಸುದೇಶ್‌ ಬಾಬು ಹಾಗೂ ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಜಿ.ಅನಿಲ್‌ ಕುಮಾರ್‌, ಮುಖಂಡರಾದ ಕೆ.ವಿ.ಶ್ರೀನಿವಾಸ್‌, ಖ್ಯಾತ ವೈದ್ಯೆ ಜಯಂತಿ, ಮಂಜುಶ್ರೀ ಮಂಜುನಾಥ್‌, ಶ್ರೀನಾಥ್‌, ರಘುನಂದನ್‌ ಟಿ.ವಿ., ನಾಗೇಶ್, ಕಮಲ್‌ ಬಾಬು, ಸೇತುರಾಮ್‌ ಸೇರಿ ಆರ್ಯ ವೈಶ್ಯ ಸಮಾಜದ ಮುಖಂಡರ ಸಮಾಲೋಚನೆ ನಡೆಸಿದರು.

ಬಳಿಕ ತಾಲೂಕಿನ ನಾಗಲಮಡಿಕೆ ಗ್ರಾಮಕ್ಕೆ ತೆರಳಿ ಅಲ್ಲಿನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಈ ವೇಳೆ ಪ್ರದೇಶ ಕಾಂಗ್ರೆಸ್ ಸಮಿತಿಯ ಎಸ್‌ಸಿ ಘಟಕದ ಸಂಚಾಲಕ ಕೋರ್ಟ್‌ ನರಸಪ್ಪ, ಮುಖಂಡರಾದ ಎಂ.ಕೆ.ನಾರಾಯಣಪ್ಪ, ಶಿವಕುಮಾರ್, ಕೆ.ರಾಮಪುರ ಆನಂದ, ಬಿಎಂಟಿಸಿ ನಿವೃತ್ತ ಅಧಿಕಾರಿ ನರಸಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲಾ ಮಕ್ಕಳಿಂದ ರಸ್ತೆ ಕಾಮಗಾರಿ ಕೆಲಸ...!
ಮಾದಿಗ ಮಹಾಸಭಾದ ತಾಲೂಕಾಧ್ಯಕ್ಷರಾಗಿ ಕತಿಕ್ಯಾತನಹಳ್ಳಿ ನರಸಿಂಹಪ್ಪ ಆಯ್ಕೆ