ಪಹಲ್ಗಾಮ್‌ನಲ್ಲಿ ಮಡಿದವರಿಗೆ ಮಾತೃಭೂಮಿ ವೃದ್ಧಾಶ್ರಮದಿಂದ ಶ್ರದ್ಧಾಂಜಲಿ

KannadaprabhaNewsNetwork |  
Published : Apr 27, 2025, 01:31 AM IST
26ಕೆಎಂಎನ್ ಡಿ22 | Kannada Prabha

ಸಾರಾಂಶ

ಉಗ್ರರಿಗೆ ತಕ್ಕ ಪಾಠ ಕಲಿಸದಿದ್ದರೆ ದೇಶದಲ್ಲಿ ನೆಮ್ಮದಿ ಇಲ್ಲ. ಎಲ್ಲಾ ವಿಚಾರದಲ್ಲೂ ರಾಜಕೀಯ ಬೆರೆಸುವ ಬದಲು ರಾಜಕೀಯ ಮುಖಂಡರು ದೇಶದ ಭದ್ರತೆಗೆ ಆಗಬೇಕಿರುವ ಕೆಲಸಗಳ ಬಗ್ಗೆ ಯೋಚಿಸಬೇಕು ಎಂದು ಮಾತೃಭೂಮಿ ವೃದ್ಧಾಶ್ರಮದ ಮುಖ್ಯಸ್ಥ ನಾಗಣ್ಣ ಆಗ್ರಹಿಸಿದರು.

ಕಿಕ್ಕೇರಿ: ಪಟ್ಟಣದ ಕೆ.ಎಸ್.ನರಸಿಂಹಸ್ವಾಮಿ ವೃತ್ತದಲ್ಲಿ ಶುಕ್ರವಾರ ರಾತ್ರಿ ಮಾತೃಭೂಮಿ ವೃದ್ಧಾಶ್ರಮ, ವಿವಿಧ ಸಮಾಜ ಪರ ಯುವಕರಿಂದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಮಡಿದ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿವಿಧ ಹಿಂದೂಪರ ಸಂಘಟನೆಗಳು ರಾಜ್ಯಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೇಣದಬತ್ತಿ ಹಿಡಿದು ಕೆಲಹೊತ್ತು ಅಗಲಿದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಲಭಿಸಲು ಪ್ರಾರ್ಥಿಸಿದರು.

ಉಗ್ರರಿಗೆ ತಕ್ಕ ಪಾಠ ಕಲಿಸದಿದ್ದರೆ ದೇಶದಲ್ಲಿ ನೆಮ್ಮದಿ ಇಲ್ಲ. ಎಲ್ಲಾ ವಿಚಾರದಲ್ಲೂ ರಾಜಕೀಯ ಬೆರೆಸುವ ಬದಲು ರಾಜಕೀಯ ಮುಖಂಡರು ದೇಶದ ಭದ್ರತೆಗೆ ಆಗಬೇಕಿರುವ ಕೆಲಸಗಳ ಬಗ್ಗೆ ಯೋಚಿಸಬೇಕು ಎಂದು ಮಾತೃಭೂಮಿ ವೃದ್ಧಾಶ್ರಮದ ಮುಖ್ಯಸ್ಥ ನಾಗಣ್ಣ ಆಗ್ರಹಿಸಿದರು.

ಅಕ್ಷಯ್ ಭಯೋತ್ಪಾದಕರ ಪೈಶಾಚಿಕ ಕೃತ್ಯ ಖಂಡಿಸಿ, ಪಾಪಿಗಳಿಗೆ ತಕ್ಕ ಶಾಸ್ತಿಯಾಗಬೇಕು. ಈ ಹಿಂದೆ ಭಾರತೀಯ ಸೈನಿಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಹತ್ಯೆಗೈದಿದ್ದಾರೆ. ದೇಶದ ಗಡಿಗೆ ನುಸುಳಿದವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಉಗ್ರಗಾಮಿಗಳು ಹಿಂದೂಗಳನ್ನು ಗುರುತಿಸಿ ಗುಂಡಿಕ್ಕಿರುವುದು ಮತಾಂಧ ಕೃತ್ಯಕ್ಕೆ ಸಾಕ್ಷಿಯಾಗಿದೆ. ಗಡಿಯಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವವರನ್ನು ಗುರುತಿಸಿ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

ಈ ವೇಳೆ ಕಿಕ್ಕೇರಮ್ಮ ಔಷಧಿ ಕೆ.ಎನ್. ಚಂದ್ರೇಗೌಡ, ರಂಗನಾಥ ಮೆಡಿಕಲ್ ಮೋಹನ್, ಸಿಪಾಯಿ ಲೋಕೇಶ್, ಮಧು, ಡಿ. ವಾಸು ಗಿರಿಟೀ, ಕುಮಾರಸ್ವಾಮಿ, ವೆಂಕಟೇಶ್, ಜಗದೀಶ್, ಬಿಜು, ದಿವಾಕರ್, ಗಿರೀಶ್, ದಿನೇಶ್‌ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌