ಪಹಲ್ಗಾಮ್‌ನಲ್ಲಿ ಪ್ರಾಣ ತೆತ್ತವರಿಗೆ ಅರೇಹಳ್ಳಿಯಲ್ಲಿ ಶ್ರದ್ಧಾಂಜಲಿ

KannadaprabhaNewsNetwork |  
Published : Apr 28, 2025, 12:46 AM IST
27ಎಚ್ಎಸ್ಎನ್12 : ಪಹಲ್ಗಾಮ್ ದಾಳಿ ಖಂಡಿಸಿ ಅರೇಹಳ್ಳಿಯಲ್ಲಿ ಹಿಂದೂ ಬಾಂಧವರು ಮೇಣದ ಬತ್ತಿ ಹಚ್ಚಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸುವ ಮೂಲಕ  ಪ್ರತಿಭಟನೆ  ನಡೆಸಲಾಯಿತು. | Kannada Prabha

ಸಾರಾಂಶ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯಾನಕ ಭಯೋತ್ಪಾದನಾ ದಾಳಿಯನ್ನು ವಿರೋಧಿಸಿ ಹಿಂದೂ ಬಾಂಧವರು ಮೇಣದ ಬತ್ತಿ ಹಚ್ಚಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸುವ ಮೂಲಕ ಮೃತರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯಾನಕ ಭಯೋತ್ಪಾದನಾ ದಾಳಿಯನ್ನು ವಿರೋಧಿಸಿ ಹಿಂದೂ ಬಾಂಧವರು ಮೇಣದ ಬತ್ತಿ ಹಚ್ಚಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸುವ ಮೂಲಕ ಮೃತರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಅರೇಹಳ್ಳಿ ಪಟ್ಟಣದ ಮಿಲಿಟರಿ ಚಂದ್ರಶೇಖರ್ ವೃತ್ತದಲ್ಲಿ ಗ್ರಾಮಸ್ಥರು ಮೇಣದ ಬತ್ತಿಯನ್ನು ಹಿಡಿದುಕೊಂಡು ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆಯನ್ನ ನಡೆಸಿದರು. ನಂತರ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉಗ್ರರ ದಾಳಿಯಿಂದ ಬಲಿಯಾದವರಿಗೆ ಶ್ರದ್ಧಾಂಜಲಿಯನ್ನು ಕೋರಿದರು.

ಜಿ.ಪಂ ಮಾಜಿ ಸದಸ್ಯ ಅಮಿತ್ ಶೆಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಯನ್ನು ಬುಡಸಮೇತ ಮಟ್ಟಹಾಕಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರೂ ಅವುಗಳ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಕೇವಲ ಹಿಂದೂ ಧರ್ಮದ ಬಗ್ಗೆ ಸ್ಪಷ್ಟೀಕರಣ ಮಾಡಿಕೊಂಡು ಅತ್ಯಂತ ಕ್ರೂರವಾಗಿ 26 ಜನರನ್ನು ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ, ಎಲ್ಲರನ್ನೂ ಸಮಾನರಾಗಿ ಕಾಣುವ ಸನಾತನ ಹಿಂದೂ ಧರ್ಮದ ಸುಭದ್ರವಾದ ಈ ನಮ್ಮ ದೇಶದಲ್ಲಿ ಭಯೋತ್ಪಾದಕ ಹಾಗೂ ಉಗ್ರಗಾಮಿಗಳ ವಿರುದ್ಧ ಕೇಂದ್ರ ಸರ್ಕಾರದ ಕ್ರಮ ಶ್ಲಾಘನೀಯ, ಇಂತಹ ಅಮಾನವೀಯ ಘಟನೆ ಮುಂದೆಂದೂ ಮರುಕಳಿಸಬಾರದು . ಅದಕ್ಕಾಗಿ ಪ್ರಧಾನ ಮಂತ್ರಿಗಳ ನಿರ್ಧಾರಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕು. ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ವಿಶ್ವದ ಭೂಪಟದಿಂದಲೇ ಕಿತ್ತೊಗೆಯಬೇಕು. ಭಯೋತ್ಪಾದನೆ ಎಲ್ಲಿ ತನಕ ಇರುತ್ತದೆಯೋ ಅಲ್ಲಿಯವರೆಗೆ ಆ ದೇಶದಲ್ಲಿ ಶಾಂತಿ ನೆಮ್ಮದಿಯಿಂದ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದರು.

ಈ ವೇಳೆ ಚಂದನ್, ಶ್ರೀನಿವಾಸ ಶೆಟ್ಟಿ, ಚಿದಾನಂದ, ಮಹೇಶ್ ಶೆಟ್ಟಿ, ಯೋಗೇಶ್, ಜಗದೀಶ್, ಚಂದ್ರು ಶೆಟ್ಟಿ, ಭರತ್, ಸಚಿನ್ ರೈ, ಮಂಜುನಾಯಕ್, ನಾರಾಯಣ, ಎ.ಬಿ ಮೋಹನ್, ಬಿಪಿ ಬಸವರಾಜ್ ಇತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...