ಹಾವೇರಿ: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಹಾಗೂ ಉಗ್ರರ ದಾಳಿಗೆ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಘಟಕ ವತಿಯಿಂದ ಮೊಂಬತ್ತಿ ಬೆಳಗಿದರು. ಈ ವೇಳೆ ಸಂಘಟನೆಯ ಯುವ ಘಟಕದ ಜಿಲ್ಲಾಧ್ಯಕ್ಷ ಮೌಲಾಲಿ ಏರಿಮನಿ ಮಾತನಾಡಿ, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರಗಾಮಿಗಳು ನಡೆಸಿದ ಗುಂಡಿನ ದಾಳಿ ಅತ್ಯಂತ ಖಂಡನೀಯ. ದಾಳಿ ನಡೆಸಿದ ಉಗ್ರಗಾಮಿಗಳನ್ನು ಪತ್ತೆ ಹಚ್ಚಿ ಅವರಿಗೆ ಒಂದು ಜೀವದ ಬೆಲೆ ಏನು ಅಂತ ಗೊತ್ತಾಗುವಂತೆ ಶಿಕ್ಷಿಸಬೇಕು. ಕೇಂದ್ರ ಸರ್ಕಾರ ಈ ಘಟನೆಗೆ ತಕ್ಕ ಉತ್ತರ ನೀಡಬೇಕು ಎಂದರು. ತಾಲೂಕಾಧ್ಯಕ್ಷ ಯುವರಾಜ ನವಲಗುಂದ ಮಾತನಾಡಿ, ಜಮ್ಮು ಕಾಶ್ಮೀರ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರ ಸಂಘಟನೆ ನಡೆಸಿದ ದಾಳಿ ದೇಶವೇ ಬೆಚ್ಚಿ ಬೀಳಿಸುವಂತಾಗಿದೆ. 26 ಜನ ಪ್ರವಾಸಿಗರನ್ನು ಭಯೋತ್ಪಾದಕ ಸಂಘಟನೆಗಳು ಗುಂಡು ಹಾರಿಸಿ ಹತ್ಯೆ ಮಾಡಿವೆ. ಅದರಲ್ಲಿ 3 ಜನ ಕರ್ನಾಟಕದ ಪ್ರವಾಸಿಗರು ಹತ್ಯೆಯಾಗಿದ್ದಾರೆ. ಉಗ್ರರಿಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ತಕ್ಕ ಉತ್ತರ ಕೊಡಬೇಕು ಎಂದರು.ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಮಹದೇವಪ್ಪ ಹೇಡಿಗೊಂಡ, ಜಿಲ್ಲಾ ಯುವ ಘಟಕ ಪ್ರಧಾನ ಕಾರ್ಯದರ್ಶಿ ಅಮೃತ್ ಮಜ್ಜಗಿ, ಸುರೇಶ ಇ.ಕೆ., ಅಶೋಕ್ ಗದಗ, ಕುಮಾರ್ ಬಾರ್ಕಿ, ಪ್ರವೀಣ್ ಪಾಟೀಲ್, ಪುಟ್ಟು ಕೊರವರ, ಶಾಂತು ಕೊರವರ, ವೆಂಕಟೇಶ ಭಜಂತ್ರಿ, ಇಮ್ರಾನ್‌ಖಾನ್ ಲಕ್ಷ್ಮೇಶ್ವರ, ನಾಗರಾಜ್ ಮಚ್ಚಗಾರ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಇದ್ದರು. ದಾಳಿಯಲ್ಲಿ ಬಲಿಯಾದವರಿಗೆ ಸಂತಾಪ
ಈ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಮಂಡಲ ಪ್ರಧಾನ ಕಾರ್ಯದರ್ಶಿ ಲಿಂಗಾಚಾರ ಮಾಯಾಚಾರಿ, ಯುವ ಮೋರ್ಚಾ ಅಧ್ಯಕ್ಷ ಜಗದೀಶ್ ದೊಡ್ಡಗೌಡ್ರ, ಮುಖಂಡರಾದ ರುದ್ರೇಶ ನೀಲನಗೌಡ್ರ, ಸಂಜೀವ ಕಬ್ಬಿಣಕಂತಿಮಠ, ಮನೋಹರ್ ವಡ್ಡಿನಕಟ್ಟಿ, ಉಮೇಶ್ ಬಣಕಾರ್, ಹುಚ್ಚಣ್ಣ ಚೌಟಗಿ, ಬಸವರಾಜ ಅರಕೇರಿ, ಈರಣ್ಣ ಚಿಟ್ಟೂರ್, ಪ್ರವೀಣ್ ತಳವಾರ್, ಮಲ್ಲಿಕಾರ್ಜುನ ಹನುಮಗೌಡ್ರ, ಸಂತೋಷ ವಾಲಿ, ಎಂ.ಬಿ. ಕಾಗಿನೆಲ್ಲಿ, ಅಣ್ಣಯ್ಯ ಕುಬಸದ, ಮಂಜುನಾಥ್ ಪಾಟೀಲ್ ಹಾಗೂ ಕಾರ್ಯಕರ್ತರು ಇದ್ದರು.