ಕ್ರೈಸ್ಟ್ ಸಿಎಂಐ ಪಬ್ಲಿಕ್ ಶಾಲಾ ಆಡಳಿತ ಮಂಡಳಿ ಕಾರ್ಯಕ್ಕೆ ಮೆಚ್ಚುಗೆ
ಅಮೃತ. ಎಸ್ ೬೧೦ ಅಂಕ, ನವ್ಯ. ಎನ್ ೬೦೩ ಅಂಕ, ಗಾನವಿ ಜಿ.ಪಿ ೬೦೨ ಅಂಕ ಪಡೆದು ಶಾಲೆಗೆ ಕೀರ್ತಿ ತಂದರು. ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಗಿಂತಲೂ ಮೇಲ್ಪಟ್ಟು ಪಾಸಾದ ಹಿನ್ನಲೆ ಶಾಲೆಯ ಆಡಳಿತ ಮಂಡಳಿ ಒಪ್ಪಿಗೆ ಪಡೆದ ಶಾಲಾ ಮುಖ್ಯ ಶಿಕ್ಷಕ ರೆವರೆಂಡ್ ಫಾದರ್ ಪುತಿಯಾಪರಂಬಿಲ್ ಎಸ್‌ಎಸ್‌ಎಲ್‌ಸಿ ಪಾಸಾದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರೊಂದಿಗೆ ಮಡಿಕೇರಿ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಿಗೆ ತೆರಳಿದ್ದಾರೆ.
ಕ್ರೈಸ್ಟ್ ಸಿಎಂಐ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯು ಶಾಲಾ ಮಕ್ಕಳು ಮಾಡಿದ ಸಾಧನೆ ಗಮನಿಸಿ ಪ್ರವಾಸ ಭಾಗ್ಯ ಕಳುಹಿಸಿದ್ದಕ್ಕೆ ಹೆಸರೇಳಲಿಚ್ಚಿಸಿದ ಪೋಷಕರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.---ನುಡಿದಂತೆ ನಡೆದ ಮುಖ್ಯ ಶಿಕ್ಷಕಗುಂಡ್ಲುಪೇಟೆ: ಕ್ರೈಸ್ಟ್ ಸಿಎಂಐ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೆ 2 ದಿನಗಳ ಉಚಿತ ಪ್ರವಾಸ ಮಾಡಿಸುತ್ತೇನೆ ಎಂದು ಪರೀಕ್ಷೆಗೂ ಮುನ್ನ ಮುಖ್ಯ ಶಿಕ್ಷಕ ಫಾದರ್ ರೆವರೆಂಡ್ ಪುತ್ರಿಯಾಪರಂಬಿಲ್ ವಿದ್ಯಾರ್ಥಿಗಳಿಗೆ ಮಾತು ಕೊಟ್ಟಿದ್ದರು. ಮಾತಿನಂತೆ ಅವರು ಮಕ್ಕಳೊಂದಿಗೆ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ಪ್ರವಾಸ ಕಳುಹಿಸುವ ಮೂಲಕ ನುಡಿದಂತೆ ನಡೆದಿದ್ದಾರೆ.
೯ಜಿಪಟಿ೬