ತ್ರಿಬಲ್‌ ರೈಡಿಂಗ್‌; ಕಾರಿಗೆ ಸ್ಕೂಟರ್‌ ಗುದ್ದಿಸಿ ಕಿಡಿಗೇಡಿಗಳ ದುಂಡಾವರ್ತನೆ

KannadaprabhaNewsNetwork |  
Published : Apr 02, 2024, 02:15 AM ISTUpdated : Apr 02, 2024, 07:25 AM IST
Accident  3 | Kannada Prabha

ಸಾರಾಂಶ

ರಸ್ತೆಯಲ್ಲಿ ತ್ರಿಬಲ್‌ ರೈಡಿಂಗ್ ಮಾಡಿದ್ದಲ್ಲದೆ ಮನಬಂದಂತೆ ಸ್ಕೂಟರ್ ಓಡಿಸಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಮೂವರು ದುಂಡಾವರ್ತನೆ ಮಾಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು :  ರಸ್ತೆಯಲ್ಲಿ ತ್ರಿಬಲ್‌ ರೈಡಿಂಗ್ ಮಾಡಿದ್ದಲ್ಲದೆ ಮನಬಂದಂತೆ ಸ್ಕೂಟರ್ ಓಡಿಸಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಮೂವರು ದುಂಡಾವರ್ತನೆ ಮಾಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಸ್ಕೂಟರ್ ನೊಂದಣಿ ಸಂಖ್ಯೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ಈ ಘಟನೆ ಬಗ್ಗೆ ಯಾರೊಬ್ಬರು ಲಿಖಿತ ದೂರು ನೀಡಿಲ್ಲ. ‘ಎಕ್ಸ್‌’ ತಾಣದಲ್ಲಿ ಸಲ್ಲಿಕೆಯಾದ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ತ್ರಿಬಲ್ ರೈಡಿಂಗ್‌ನಲ್ಲಿ ಬಂದ ಮೂವರು, ಮುಂದೆ ಹೋಗುತ್ತಿದ್ದ ಕಾರನ್ನು ಹಿಂದಿಕ್ಕುವ ಭರದಲ್ಲಿ ಗುದ್ದಿಸಿದ್ದಾರೆ. ಆಗ ಆ ಕಾರಿನ ಬಂಪರ್‌ ಕಿತ್ತು ಬಂದಿದೆ. ಹೀಗಿದ್ದರೂ ಸ್ಕೂಟರ್‌ ನಿಲ್ಲಿಸದೆ ಅತಿವೇಗವಾಗಿ ಮುಂದುವರೆದ ಆರೋಪಿಗಳು, ಅಲ್ಲಿಂದ ಸ್ವಲ್ಪ ದೂರದಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ. ಆಗಲೂ ಸ್ಕೂಟರ್ ನಿಲ್ಲಿಸದೆ ಚಾಲಕ ಕಾರಿನಿಂದಿಳಿಯುತ್ತಿದ್ದಂತೆ ಪರಾರಿಯಾಗಿದ್ದಾರೆ. ಈ ಕೃತ್ಯವು ಹಿಂದಿನ ಕಾರಿನ ಡ್ಯಾಶ್ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ