ತ್ರಿವಿಕ್ರಮಾನಂದ ಸರಸ್ವತೀ ಸ್ವಾಮೀಜಿ ಪುಣ್ಯಾರಾಧನೆ

KannadaprabhaNewsNetwork |  
Published : Feb 05, 2024, 01:48 AM ISTUpdated : Feb 05, 2024, 03:24 PM IST
ಜೇವರ್ಗಿ: ಗಂವ್ಹಾರದ ಸದ್ಗುರು ತ್ರಿವಿಕ್ರಮಾನಂದ ಸರಸ್ವತೀ ಸ್ವಾಮೀಗಳ ಹಾಗೂ ಸೋಪಾನನಾಥ ಸ್ವಾಮೀಜಿಗಳ ಭಾವಚಿತ್ರ ಅಂಟಿಸಲಾಗಿದೆ. | Kannada Prabha

ಸಾರಾಂಶ

ಗಂವ್ಹಾರ ಗ್ರಾಮದ ಆರಾದ್ಯ ದೈವ ತ್ರಿವಿಕ್ರಮಾನಂದ ಸರಸ್ವತೀ ಸ್ವಾಮೀಜಿ ಆರಾಧನೆ ಫೆ.5ರಿಂದ 8 ರವರೆಗೆ ವೈಭವದಿಂದ ಜರುಗಲಿದೆ ಎಂದು ಶ್ರೀ ಮಠದ ಶ್ರೀಪಾದ ಭಟ್ಟ ಜೋಶಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ತಾಲೂಕಿನ ಗಂವ್ಹಾರ ಗ್ರಾಮದ ಆರಾದ್ಯ ದೈವ ತ್ರಿವಿಕ್ರಮಾನಂದ ಸರಸ್ವತೀ ಸ್ವಾಮೀಜಿ ಆರಾಧನೆ ಫೆ.5ರಿಂದ 8 ರವರೆಗೆ ವೈಭವದಿಂದ ಜರುಗಲಿದೆ ಎಂದು ಶ್ರೀ ಮಠದ ಶ್ರೀಪಾದ ಭಟ್ಟ ಜೋಶಿ ತಿಳಿಸಿದ್ದಾರೆ.

ಫೆ.5ರಂದು ಬೆಳಗ್ಗೆ 6ಗಂಟೆಗೆ ಕಾಕಡಾರತಿ, ಅಷ್ಟಾವಧಾನ ಸೇವೆ, ನವಗ್ರಹ ಹೋಮ, ನಡೆಯಲಿವೆ. ಮ.11ರಿಂದ 5ಗಂಟೆ ವರೆಗೆ ಪ್ರವಚನ, ಸಂಜೆ 6.30ಕ್ಕೆ ಶಾಲಾ ವರ್ಷಿಕೋತ್ಸವ ನಡೆಯಲಿದೆ.

ಫೆ.6ರಂದು ಬೆಳಗ್ಗೆ 6ಗಂಟೆಗೆ ಕಾಕಡಾರತಿ, ಅಷ್ಟಾವಧಾನ ಸೇವೆ, ಅಖಂಡ ಭಜನೆ. ಮ.11ಗಂಟೆಗೆ ರುದ್ರ ಹೋಮ, ಸಂಜೆ 4ಕ್ಕೆ ಪ್ರವಚನ, ರಾತ್ರಿ 9ಕ್ಕೆ ಶ್ರೀರಾಮ ಕಥಾನಕ. 

ರಾಮಾಯಣ ಆಧಾರಿತ ಪ್ರವಚನ ಹಾಗೂ ರೂಪಕ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರಿಂದ ಪ್ರವಚನ, ಕೋರ್ಗಿ ಶಂಕರನಾರಾಯಣ ಉಪಾಧ್ಯಾಯ ತಂಡದಿಂದ ರೂಪಕ ನಡೆಯಲಿದೆ.

ಫೆ.7ರಂದು ಬೆಳಗ್ಗೆ 6ಕ್ಕೆ ಕಾಕಡಾರತಿ, ಅಷ್ಟಾವಧಾನ ಸೇವೆ, ಮ.11ಗಂಟೆಗೆ ಪ್ರವಚನ, ಚಂಡಿಹೋಮ ಅಷ್ಠಾವಧಾನ ಸೇವೆ, ಭಜನಾ ಸಮಾಪ್ತಿ, ತ್ರಿವಿಕ್ರಮ ಸನ್ನಿಧಿಗೆ ವಿಶೇಷ ಪೂಜೆ ನೆರವೇರಲಿದೆ. 

ಮ.2ಗಂಟೆಗೆ ಸಭಾ ಕಾರ್ಯಕ್ರಮ, ವಿಶೇಷ ಪ್ರವಚನ ನಡೆಯಲಿದೆ. ನಾಥ ಪ್ರಶಸ್ತಿ, ತ್ರಿವಿಕ್ರಮ ಪ್ರಶಸ್ತಿ ಪ್ರಧಾನ ನಡೆಯಲಿದೆ. ನಂತರ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀಜಿ ಮಠದ ಪೀಠಾಧಿಪತಿ ಸದ್ಗುರು ಶ್ರೀ ಸೋಪಾನನಾಥ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಲಿದೆ. ಮ.3 ಗಂಟೆಗೆ ಪೂರ್ಣಾಹುತಿ, ಗುರುಪಾದ ಪೂಜೆ ನಡೆಯಲಿದೆ.

ಫೆ.8ರಂದು ಶ್ರೀಗಳಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಗದಗಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಮಹಾಸ್ವಾಮಿಜಿ ಅವರಿಗೆ ನಾಥ ಪ್ರಶಸ್ತಿ, ಹಾಗೂ ಶಂಕ್ರಪ್ಪ ಶಾಂತಪುರ ಹುಲಿಕಲ್, ಮಾನಪ್ಪಗೌಡ ಮಾಲಿಪಾಟೀಲ ಸಾದ್ಯಾಪುರ ಅವರಿಗೆ ತ್ರಿವಿಕ್ರಮ ಪ್ರಶಸ್ತಿ ಪ್ರಧಾನ ಮಾಡಲಾಗುವುದು. 

ಕಾರಣ ಭಕ್ತಾದಿಗಳು ಸ್ವಾಮೀಜಿ ಪುಣ್ಯಾರಾಧನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀಮಠದ ಶ್ರೀಪಾದ ಜೋಶಿ, ಪಾಂಡುರಂಗ ಮಹಾರಾಜರು, ಶ್ರೀಮಠದ ಕಾರ್ಯದರ್ಶಿ ಚಂದಪ್ಪಗೌಡ ತಾಯಪ್ಪಗೋಳ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌