ಹಾಸನ: ಮನೆಯಲ್ಲಿರುವ ತಂದೆ-ತಾಯಿಯನ್ನು ದೇವರು ಎಂದು ಪೂಜಿಸುವವರೆ ನಿಜವಾದ ಗಣಪನ ಭಕ್ತರು. ತನ್ನ ಮಾತಾ, ಪಿತೃರನ್ನೆ ಪ್ರಪಂಚ ಎಂದುಕೊಂಡು ಗಣೇಶ ಸುತ್ತಿದ ಉದಾಹರಣೆ ಕೇಳಿದ್ದೇವೆ ಎಂದು ಶ್ರೀ ಸಿದ್ಧಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಇಡೀ ಜಗತ್ತನ್ನು ಪ್ರೀತಿಸುವ ಗುಣ ಭಾರತೀಯರದ್ದು. ಇಡೀ ಜಗತ್ತಿಗೆ ಒಳಿತನ್ನು ಬಯಸುವವರು ನಾವು. "ಸರ್ವೆ ಜನೋ ಸುಖಿನೋ ಭವ " ಎಂಬ ಆಶಯದಲ್ಲಿ ಬದುಕುತ್ತಿರುವವರು. ಇಂದಿನ ಮಕ್ಕಳ ಆದರ್ಶಗಳು ಬೇರೆ ಬೇರೆ ಕಡೆ ಸಾಗುತ್ತಿದ್ದು, ಅವರಿಗೆ ಒಳ್ಳೆಯ ಸಂಸ್ಕಾರ ನೀಡುವ ಕೆಲಸವನ್ನು ಮಾಡಬೇಕಿದೆ. ಮಕ್ಕಳಿಗೆ ತಂದೆ-ತಾಯಿಯೇ ಆದರ್ಶ ಎಂಬ ಮನೋಭಾವನೆ ಬೆಳೆಯಬೇಕಿದೆ ಎಂದು ಕಿವಿಮಾತು ಹೇಳಿದರು. ಶ್ರೀ ಬಾಲಗಂಗಾಧರನಾಥ ತಿಲಕ್ ಅವರು ಗಣೇಶೋತ್ಸವ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಪ್ರಜಾಪ್ರಭುತ್ವದಲ್ಲಿ ನಾವೆಲ್ಲ ಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಮಾಜದ ಸುಧಾರಣೆಗೆ ಮಾರ್ಗದರ್ಶನವಾಗಿ ಮಾನವೀಯತೆಯಿಂದ ಕೆಲಸ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು. ಗಣೇಶನಿಗೆ ಅಪಾರವಾದ ಶಕ್ತ ಇದೆ. ಮೊದಲ ಪೂಜೆ ಸಲ್ಲಿಸಿ ನಂತರ ಇತರ ಕಾರ್ಯ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದೇ ವೇಳೆ ಹಾಸನ ಕ್ಷೇತ್ರದ ಮಾಜಿ ಶಾಸಕರಾದ ಪ್ರೀತಂ ಜೆ. ಗೌಡರು ಮತ್ತು ಅವರ ಕುಟುಂಬಸ್ಥರು ಗಣೇಶ ಪೆಂಡಾಲ್‌ಗೆ ಬಂದು ಶ್ರೀ ಸಿದ್ಧಗಂಗೆಯ ಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹೋ ಸ್ವಾಮೀಜಿರವರನ್ನು ಸನ್ಮಾನಿಸಿ ಗೌರವಿಸಿ ಆಶೀರ್ವಾದ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಪೆಂಡಾಲ್ ಸಮಿತಿಯವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಕಿರೀಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಯಳನಾಡು ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಅರೆಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲಮಠದ ಮಹಾಂತ ಸ್ವಾಮೀಜಿ, ಬಸವ ಮಂದಿರ ಚಿಕ್ಕಮಂಗಳೂರು ಜಯ ಬಸವನಂದ ಸ್ವಾಮೀಜಿ, ತಣ್ಣೀರು ಹಳ್ಳ ಮಠದ ಶ್ರೀ ವಿಜಯ ಕುಮಾರ್ ಸ್ವಾಮೀಜಿ, ತೋರೆನೂರು ಮಠದ ಮಲ್ಲೇಶ್ವರ ಸ್ವಾಮೀಜಿ, ಸಿಡಿಗಳಲೆ ಮಠ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಸ್ವಾಮೀಜಿ, ಶ್ರೀ ಗಣಪತಿ ಸೇವಾ ಸಂಸ್ಥೆ ಅಧ್ಯಕ್ಷ ಡಾ. ಎಚ್. ನಾಗರಾಜು, ಕಾರ್ಯದರ್ಶಿ ಚನ್ನವೀರಪ್ಪ, ಸಹಕಾರ್ಯದರ್ಶಿ ವೈ.ಎಸ್. ಮುರುಗೇಂದ್ರ, ಖಜಾಂಚಿ ಎಂ.ಎಸ್. ಶ್ರೀಕಂಠಯ್ಯ, ಧರ್ಮದರ್ಶಿಗಳಾದ ಲಲಾಟ್ ಮೂರ್ತಿ, ಅನಂತನಾರಾಯಣ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಎನ್ ಪರಮೇಶ್, ತಾಲೂಕು ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಎಚ್.ಕೆ. ನಾಗೇಶ್, ದರ್ಶನ್ ಮಲ್ನಾಡ್, ಶೋಭನ್ ಬಾಬು, ನೀತು ಜೈನ್, ನಿರ್ಮಲ, ಹನುಮಂತೇಗೌಡ ಇತರರು ಉಪಸ್ಥಿತರಿದ್ದರು.