ಸೋಲು, ಗೆಲವು ಸಮಾನವಾಗಿ ಸ್ವೀಕರಿಸುವವರೇ ನಿಜನಾಯಕರು

KannadaprabhaNewsNetwork | Published : Mar 6, 2025 12:30 AM

ಸಾರಾಂಶ

ಯಾವುದೇ ಸಂದರ್ಭಗಳಲ್ಲಿ ಸೋಲು-ಗೆಲುವುಗಳನ್ನು ಸಮಾನನಾಗಿ ಸ್ವೀಕರಿಸಿ, ಹೋರಾಡುವ ಮನಸ್ಥಿತಿ ಹೊಂದಿದವರೇ ನಿಜವಾದ ನಾಯಕರಾಗುತ್ತಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- 64ನೇ ಜನ್ಮದಿನ ಸಂಭ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾಜಿ ಸಚಿವ ರೇಣುಕಾಚಾರ್ಯ ಅಭಿಮತ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಯಾವುದೇ ಸಂದರ್ಭಗಳಲ್ಲಿ ಸೋಲು-ಗೆಲುವುಗಳನ್ನು ಸಮಾನನಾಗಿ ಸ್ವೀಕರಿಸಿ, ಹೋರಾಡುವ ಮನಸ್ಥಿತಿ ಹೊಂದಿದವರೇ ನಿಜವಾದ ನಾಯಕರಾಗುತ್ತಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಪಟ್ಟಣದಲ್ಲಿ ತಾಲೂಕು ಬಿಜೆಪಿ ಮುಖಂಡರು ಹಾಗೂ ಅಭಿಮಾನಿಗಳು ಸೋಮವಾರ ಆಯೋಜಿಸಿದ್ದ ತಮ್ಮ 64ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಮಾತನಾಡಿದರು. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಎಲ್ಲ ವರ್ಗದ ಜನರ ನಡುವೆ ಜೀವನ ಸಾಗಿಸಿ, ಹೋರಾಟ ಮಾಡುತ್ತಿದ್ದೇನೆ. ಇದರ ಪ್ರತಿಫಲ ನನ್ನನ್ನು ಅವಳಿ ತಾಲೂಕಿನ ಜನತೆ ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಪಕ್ಷ ಸಹ ನನ್ನನ್ನು ಸಚಿವ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿವಿಧ ನಿಗಮಗಳ ಅಧ್ಯಕ್ಷನಾಗಿಯೂ ಹುದ್ದೆ ನೀಡಿದೆ. ಇದಕಿಂತ ಸೌಭಾಗ್ಯ ಬೇರೆ ಏನಿದೆ ಎಂದ ಅವರು, ಜನಸೇವೆಗಾಗಿ ಈ ಎಲ್ಲ ಅಧಿಕಾರ ಸಿಕ್ಕಿದ್ದು ಅವಳಿ ತಾಲೂಕುಗಳ ಜನತೆಯಿಂದ ಎಂದು ಹೇಳಿದರು.

ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಕ್ಷ ಹಾಗೂ ವಿಪಕ್ಷ ಅಧಿಕಾರದಲ್ಲಿದ್ದಾಗಲೂ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ, ಬಿ.ಎಸ್. ಯಡಿಯೂರಪ್ಪ ಅಧಿಕಾರವದಿಯಲ್ಲಿ ₹4500 ಕೋಟಿ ಅನುದಾನ ತಂದು ಅವಳಿ ತಾಲೂಕಿನ ನೀರಾವರಿ, ಆರೋಗ್ಯ, ಶಿಕ್ಷಣ, ಚತುಷ್ಪಥ ರಸ್ತೆ, ಗ್ರಾಮೀಣ ರಸ್ತೆ, ಕೆರೆಗೆ ನೀರು ತುಂಬಿಸುವ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎಂದು ಅಭಿವೃದ್ಧಿ ಸಾಧನೆ ಬಗ್ಗೆ ವಿವರಿಸಿದರು.

೨೦೧೮ರ ಚುನಾಣೆಯಲ್ಲಿ ವೀರಶೈವ ಲಿಂಗಾಯಿತ, ಹಾಲುಮತ, ಪರಿಶಿಷ್ಟ ಹಾಗೂ ಪರಿಶಿಷ್ಟ ಪಂಗಡ ಸೇರಿದಮತೆ ಎಲ್ಲ ವರ್ಗವರು ಬಿಜೆಪಿಗೆ ಮತ ನೀಡಿದ್ದರು. ವೀರಶೈವ ಸಮುದಾಯವನ್ನು ಒಡೆಯುವ ಹುನ್ನಾರಗಳು ನಡೆಯುತ್ತಿದೆ. ಇದನ್ನು ತಡೆಗಟ್ಟಿ ಸಂಘಟಿಸುವ ಸಲುವಾಗಿ ವೀರಶೈವ ಮಹಾ ಸಂಗಮ ಹೆಸರಿನಲ್ಲಿ ಸಂಘಟನೆ ಮಾಡುತ್ತಿದ್ದೇವೆ ಹೊರತು, ಬೇರೆ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರನಾಗಪ್ಪ ಮಾತನಾಡಿ, ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ದ ಎಂಬಂತೆ ಮಾಜಿ ಸಚಿವ ಎಂಪಿ.ರೇಣುಕಾಚಾರ್ಯ. ಒಂದು ಬಾರಿ ಅವರು ಯಾರನ್ನಾದರೂ ನಂಬಿದರೆ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೋಯ್ಯುತ್ತಾರೆ. ಅಂತಹ ವಿಶಾಲ ಮನೋಭಾವದ ಗುಣ ಅವರಲ್ಲಿದೆ ಎಂದರು.

ದಾವಣಗೆರೆ ಪಾಲಿಕೆ ಮಾಜಿ ಪೌರರಾದ ಅಜೇಯ್, ಮಾಯಕೊಂಡ ಮಾಜಿ ಶಾಸಕ ಬಸವರಾಜ ನಾಯ್ಕ, ಚನ್ನಗಿರಿಯ ಮಾಡಳ್ ಮಲ್ಲಿಕಾರ್ಜುನ್, ಹರಿಹರದ ಚಂದ್ರಶೇಖರ್ ಪೂಜಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಮಾತನಾಡಿದರು.

ಮುಖಂಡರಾದ ಸತೀಶ್, ಧನಂಜಯ ಕಡ್ಲೆಬಾಳ್, ಅನಿಲ್ ನಾಯ್ಕ್, ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ನೆಲಹೊನ್ನೆ ಮಂಜುನಾಥ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಕೆ.ಪಿ.ಕುಬೇಂದ್ರಪ್ಪ, ದೊಡ್ಡೇರಿ ರಾಜಣ್ಣ, ಗಿರೀಶ್, ಸಿ.ಆರ್.ಶಿವಾನಂದ್, ಶಿವು ಹುಡೇದ್ ಇತರರು ಇದ್ದರು.

- - - -ಫೋಟೋ:

-5ಎಚ್.ಎಲ್.ಐ2:

ಹೊನ್ನಾಳಿ ಪಟ್ಟಣದಲ್ಲಿ ಬಿಜೆಪಿ ಮುಖಂಡ ಹಾಗೂ ಎಂ.ಪಿ.ರೇಣುಕಾಚಾರ್ಯ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಮಾಜಿ ಸಚಿವರಿಗೆ ಬೃಹತ್ ಹಾರ ಹಾಕಿ ಅಭಿನಂದಿಸಿದರು. ಜಿಲ್ಲಾ ಮತ್ತು ತಾಲುೂ ಬಿಜೆಪಿ ಮುಖಂಡರು ಇದ್ದರು.

Share this article