ಸವಣೂರು: ಪದವಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಉದ್ಯೋಗದ ಅವಕಾಶಗಳು ಇದ್ದು ಅವುಗಳನ್ನು ಪಡೆದುಕೊಳ್ಳಲು ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಪ್ರಯತ್ನಿಸಿದರೆ ಯಶಸ್ಸು ಸಾಧ್ಯವಾಗಲಿದೆ ಎಂದು ಶ್ರೀ ವೀರಭದ್ರೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷೆ ಶಶಿಕಲಾ ಪೊಲೀಸ್‌ಗೌಡ್ರ ತಿಳಿಸಿದರು.ಪಟ್ಟಣದ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಉದ್ಯೋಗ ಕೋಶ ವಾಣಿಜ್ಯ ಸಂಘ ಹಾಗೂ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಕೆನರಾ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಸವಣೂರು ಇವರ ಸಹಯೋಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಅವಕಾಶಗಳು, ಆರ್ಥಿಕ ಸಾಕ್ಷರತೆ ಹಾಗೂ ಸೈಬರ್ ಕ್ರೈಂ ಕುರಿತು ಜರುಗಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಆಧುನಿಕ ಯುಗದಲ್ಲಿ ಹಣ ಎನ್ನುವ ವಸ್ತು ಪ್ರಚಲಿತದಲ್ಲಿರುವದರಿಂದ ಪ್ರತಿಯೋಬ್ಬ ವ್ಯಕ್ತಿಗಳಿಗೆ ಹಣದ ಬೆಲೆ ಮತ್ತು ಅದರ ಮಹತ್ವದ ಜೋತೆಗೆ ನಿರ್ವಹಣೆ ಮಾಡುವಂತ ಕೌಶಲ್ಯವನ್ನು ಕಲಿತಾಗ ಸ್ವಾವಲಂಭಿ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ. ಪುರುಷ ಪ್ರಧಾನವಾದ ಭಾರತ ದೇಶದಲ್ಲಿಯು ಸಹಿತ ಮಹಿಳೆಯರಿಗೆ ಮಹತ್ವದ ಸ್ಥಾನವನ್ನು ನೀಡುವದರ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿದ್ದು ಅವುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.ಕೆನರಾ ಬ್ಯಾಂಕ್ ಸವಣೂರು ಶಾಖೆಯ ಸಹಾಯಕ ವ್ಯವಸ್ಥಾಪಕ ಮಹಾರಾಜನ್ ಆರ್ ಮಾತನಾಡಿ, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಪದವಿ ಶಿಕ್ಷಣದೊಂದಿಗೆ ಉತ್ತಮ ತರಬೇತಿಯನ್ನು ಪಡೆಯುವದು ಅವಶ್ಯವಾಗಿದೆ ಎಂದರು. ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕಿ ಸೋನಾಲಿ ಹಾಗೂ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಲೋಚಕ ಹರೀಶ ಹಿರಳ್ಳಿ ಕಾರ್ಯಕ್ರಮವನ್ನು ಉದ್ದೇಶಿಸಿ, ಕಾಲೇಜು ಪ್ರಾಚಾರ್ಯ ಮಾಲತೇಶ ದಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಚೈತ್ರಾ ಪೊಲೀಸಗೌಡ್ರ, ನೇತ್ರಾ ಪೊಲೀಸಗೌಡ್ರ, ಉಪನ್ಯಾಸಕರಾದ ರೂಪ ಎನ್ ಹೆಚ್, ಶಿಲ್ಪ ಕೂಡಲ, ಗೀತಾ ಕೂಡಲ, ಅಮಿತ್ ಸರ್ವದೆ, ಸರಸ್ವತಿ ಮುಗಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.ಪವನ್‌ಕುಮಾರ್ ಪಾಟೀಲ, ಪವಿತ್ರ ನಾಗನಗೌಡ್ರ ಹಾಗೂ ಅಶ್ವಿನಿ ಕರಿಗಾರ ಕಾರ್ಯಕ್ರಮ ನಿರ್ವಹಿಸಿದರು.