ಶರಣರ ವಿಚಾರಗಳ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿತ್ನಿಸಿ

KannadaprabhaNewsNetwork |  
Published : Aug 12, 2026, 01:45 AM IST
ಚಿತ್ರ 11ಬಿಡಿಆರ್59 | Kannada Prabha

ಸಾರಾಂಶ

A program was held at the city's Anubhava Mantapa to release the brochure for a series of discourses titled "Ajnata Amaranganagala Atma Charitre " (Autobiographies of Unknown Immortals), being conducted by Shivananda Swamiji

ಪಟ್ಟದೇವರು ಸಲಹೆ । ಪ್ರವಚನದ ಕರಪತ್ರ ಬಿಡುಗಡೆ

ಬಸವಕಲ್ಯಾಣ: ನಗರದ ಅನುಭವ ಮಂಟಪದಲ್ಲಿ ಶ್ರಾವಣ ಮಾಸದಲ್ಲಿ ಅನುಭವ ಮಂಟಪದ ಸಂಚಾಲಕರಾದ ಶಿವಾನಂದ ಸ್ವಾಮಿಗಳು ನಡೆಸಿಕೊಡುತ್ತಿರುವ ಅಜ್ಞಾತ ಅಮರಂಗಣಂಗಳ ಆತ್ಮ ಚರಿತ್ರೆ ಪ್ರವಚನದ ಕರಪತ್ರ ಬಿಡುಗಡೆ ಕಾರ್ಯಕ್ರಮ ಜರುಗಿತು.

ಸಾನ್ನಿಧ್ಯ ವಹಿಸಿದ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ನಾಡೋಜ ಬಸವಲಿಂಗ ಪಟ್ಟದೇವರು ಮಾತನಾಡಿ. ಶ್ರಾವಣ ಮಾಸದಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಕೇಳುವ ಮೂಲಕ ನಾವು ನಮ್ಮ ಜೀವನ ಶರಣ ಮಾರ್ಗದಲ್ಲಿ ಸಾಗಿಸಬೇಕು. ನಾವು ಒಂದು ತಿಂಗಳು ಶರಣರ ವಿಚಾರಗಳನ್ನ ಕೇಳಿ ಹನ್ನೊಂದು ತಿಂಗಳು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.ಪೂಜ್ಯ ಶಿವಾನಂದ ಸ್ವಾಮಿಗಳು ಅಧ್ಯಯನಶೀಲರು, ಲಿಂಗಯೋಗಿಗಳು ಆಗಿದ್ದಾರೆ ಅವರಿಂದ ಅಜ್ಞಾತ ಅಮರಂಗಣಂಗಳ ಆತ್ಮ ಚರಿತ್ರೆ ಪ್ರವಚನ ಕೇಳುವುದು ಒಂದು ಸಂಭ್ರಮ ಎಂದು ಹೇಳಿದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಸಿದ್ದಣ್ಣಾ ಭೂಮಾ ಮಾತನಾಡಿ, ಶ್ರಾವಣ ಮಾಸದ ನಿಮಿತ್ಯ ಅನುಭವ ಮಂಟಪದಲ್ಲಿ ಆ.13ರಿಂದ ಒಂದು ತಿಂಗಳ ಪರ್ಯಂತ ಪ್ರತಿದಿನ ಸಾಯಂಕಾಲ 6 ಗಂಟೆಗೆ ಪ್ರವಚನ ನೀಡಲಿದ್ದಾರೆ. ನಗರದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನ ಆಲಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪೂಜ್ಯ ಶಿವಾನಂದ ಸ್ವಾಮಿಗಳು, ಪೂಜ್ಯ ಮಾತೆ ಸುಗುಣಾತಾಯಿ, ಪೂಜ್ಯ ಹಾಲಮ್ಮತಾಯಿ, ಪೂಜ್ಯ ಅನೀಲ ಮಹಾರಾಜರು, ಪೂಜ್ಯ ಬಸವದೇವರು, ಮಹಾದೇವಪ್ಪ ಇಜಾರೆ, ಪ್ರಮೋದ ಶರ್ಮಾ, ಶಿವಪುತ್ರಪ್ಪ ಅವಸೆ, ಜಗನ್ನಾಥ ಪತಂಗೆ, ವೀರೇಶ ಕುಂಬಾರ, ರಾಜಕುಮಾರ ರಟಕಲ್ಲೆ, ರವಿ ಕೋಳಕೂರ, ಶಂಕರ ಮದರಗೈ, ಶ್ರೀಶೈಲ ಬಿರಾದಾರ, ಪ್ರಭುಶೇಟ್ಟಿ ಜ್ಯಾಂತಿ. ಗಂಗಾಧರ ಬಿರಾದಾರ. ಶಿವಶಂಕರ ಕುಂಬಾರ, ಸರಸ್ವತಿ ಪಾಟೀಲ, ಪ್ರಭಾವತಿ ಅವಸೆ, ಶರಣಮ್ಮ ಮದರಗೈ, ಇತರರಿದ್ದರು.

--ಚಿತ್ರ 11ಬಿಡಿಆರ್59:ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಪ್ರವಚನದ ಕರಪತ್ರ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪೂಜ್ಯ ನಾಡೋಜ ಬಸವಲಿಂಗ ಪಟ್ಟದೇವರು, ಪೂಜ್ಯ ಶಿವಾನಂದ ಸ್ವಾಮಿಗಳು, ಪೂಜ್ಯ ಮಾತೆ ಸುಗುಣಾತಾಯಿ, ಪೂಜ್ಯ ಹಾಲಮ್ಮತಾಯಿ, ಪೂಜ್ಯ ಅನೀಲ ಮಹಾರಾಜರು, ಪೂಜ್ಯ ಬಸವದೇವರು ಇನ್ನಿತರರಿದ್ದರು.

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನ್ನನ್ನು ಮುಗಿಸಲು ಕಿಮ್ಮನೆ ಸುಪಾರಿ ನೀಡಲೂ ಸಿದ್ಧ: ಶಾಸಕ ಆರಗ ಜ್ಞಾನೇಂದ್ರ ಆರೋಪ
ರಾಜ್ಯ ಸರ್ಕಾರದ ಆಡಳಿತ ವೈಪಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ