ಕಾರ್ಖಾನೆ ಸಿಬ್ಬಂದಿಗೆ ಕ್ಷಯರೋಗದ ಅರಿವು, ತಪಾಸಣೆ ಕಾರ್ಯಕ್ರಮ

KannadaprabhaNewsNetwork |  
Published : Aug 30, 2024, 01:10 AM IST
29ಕೆಎಂಎನ್ ಡಿ17 | Kannada Prabha

ಸಾರಾಂಶ

ಕ್ಷಯರೋಗದ ಲಕ್ಷಣಗಳು, ಹರಡುವ ಬಗ್ಗೆ, ಉಚಿತ ಪರೀಕ್ಷೆ, ಚಿಕಿತ್ಸೆ ಹಾಗೂ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ. 2025ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಮತ್ತು ಸಹಭಾಗಿತ್ವ ಅಗತ್ಯ.

ಕನ್ನಡಪ್ರಭ ವಾರ್ತೆ ಭಾರತೀನಗರ

ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸಿಬ್ಬಂದಿಗೆ ಕ್ಷಯರೋಗಕ್ಕೆ ಉಚಿತ ತರಬೇತಿ ಅಭಿಯಾನದ ಅಂಗವಾಗಿ ಅರಿವು ಹಾಗೂ ತಪಾಸಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್.ಆಶಾಲತಾ ಮಾತನಾಡಿ, ಕ್ಷಯರೋಗದ ಲಕ್ಷಣಗಳು, ಹರಡುವ ಬಗ್ಗೆ, ಉಚಿತ ಪರೀಕ್ಷೆ, ಚಿಕಿತ್ಸೆ ಹಾಗೂ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. 2025ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಮತ್ತು ಸಹಭಾಗಿತ್ವ ಅಗತ್ಯ ಎಂದರು.

ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಮಾತನಾಡಿ, ಕ್ಷಯರೋಗದ ನಿರ್ಮೂಲನೆಗಾಗಿ ಆರೋಗ್ಯ ಸೇವೆ ಬಗ್ಗೆ ತಿಳಿಸಿದರು. ಕ್ಷಯರೋಗ ಲಕ್ಷಣಗಳಿಗಿರುವ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸುವ ಬಗ್ಗೆ ವಿವರಿಸಿದರು.

ಇದಕ್ಕೂ ಮುನ್ನ ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಸಿಬ್ಬಂದಿಗೆ ಕ್ಷಯರೋಗದ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಶಿವರಾಜು, ಎಸ್‌ಟಿಎಸ್ ಕೆಂಪೇಗೌಡ, ಎಸ್‌ಟಿಎಲ್ ಎಸ್.ಅರುಣ್ ಕುಮಾರ್, ಸಿಎಚ್ಒ ಪ್ರವೀಣ್, ಪಿಎಚ್‌ಸಿ ಓ.ಶೈಲಜ, ಆಶಾ ಕಾರ್ಯಕರ್ತೆ ಗೌರಮ್ಮ ಹಾಗೂ ಸಿಬ್ಬಂದಿ ಮತ್ತು ಕಾರ್ಖಾನೆಯ ಸಿಬ್ಬಂದಿ ಹಾಜರಿದ್ದರು.ಇಂದು ವಿದ್ಯುತ್ ವ್ಯತ್ಯಯ

ಮಳವಳ್ಳಿ:ಉಪವಿಭಾಗ ವ್ಯಾಪ್ತಿಯ 66/11 ಕೆವಿ ಯತ್ತಂಬಾಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವಿರುವುದರಿಂದ ಆ.30ರಂದು ಬೆಳಗ್ಗೆ 9 ರಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಸ್.ಪ್ರೇಮ್ ಕುಮಾರ್ ತಿಳಿಸಿದ್ದಾರೆ. ತಾಲೂಕಿನ ಹಲಗೂರು ಹೋಬಳಿಯ ಯತ್ತಂಬಾಡಿ, ಅಂತರವಳ್ಳಿ, ಹೊಸಪುರ, ಸಿದ್ದಾಪುರ, ಹುಸ್ಕೂರು, ಹುಚ್ಚೇಗೌಡನದೊಡ್ಡಿ, ಕುಲುಮೆದೊಡ್ಡಿ, ಬಾಣಗಹಳ್ಳಿ, ನಿಟ್ಟೂರು, ನಿಟ್ಟೂರು ಹಲಸಹಳ್ಳಿ, ಸಾಗ್ಯ, ಸಾಗ್ಯ ಸರಗೂರು, ಸಾವಂದಿಪುರ, ಬುಯ್ಯನದೊಡ್ಡಿ, ಅಂಕನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.ಇಂದು ಉತ್ತೂರಮ್ಮ ದೇವಿಗೆ 10ನೇ ವರ್ಷದ ಕುಂಭಾಭಿಷೇಕ

ಶ್ರೀರಂಗಪಟ್ಟಣ:ಶ್ರೀಉತ್ತೂರಮ್ಮ ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನ ಚಿಕ್ಕಅಂಕನಹಳ್ಳಿಯಲ್ಲಿ ಆ.30 ರಂದು ಶ್ರೀ ಉತ್ತೂರಮ್ಮ ದೇವಿಯ 10ನೇ ವರ್ಷದ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ, ದೇವನೂರು ಮಠದ ಪೀಠಾಧ್ಯಕ್ಷ ಶ್ರೀಮಹಂತ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೋಮಾನಂದನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಬೆಳಗ್ಗೆ ಅನುಜ್ಞ, ಗಣಪತಿ ಪೂಜಾ ಪೂರ್ವಕ ಪುಣ್ಯಾಹದಿಗಳು, ವಾಸ್ತು ರಾಕ್ಷೋಜ್ಞ ಪೂಜೆ, ನವಗ್ರಹ ಮೃತ್ಯುಂಜಯ ಪೂಜೆ, ಪ್ರಧಾನ ಕಳಸ ಸ್ಥಾಪನೆ, ಪ್ರಧಾನ ಹೋಮ, ಪೂರ್ಣಾಹುತಿ, ಬೆಳಗ್ಗೆ 10.30ಕ್ಕೆ ಉತ್ತೂರಮ್ಮ ದೇವಿಗೆ ಕುಂಭಾಭಿಷೇಕ, ಅಲಂಕಾರ, ಮಹಾನೈವೆದ್ಯ, ಮಹಾಮಂಗಳಾರತಿ, ರಾಷ್ಟ್ರಾಶೀರ್ವಾದ, ತೀರ್ಥಪ್ರಸಾದ ವಿತರಣೆ ಜರುಗಲಿದೆ.ನಂತರ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಶ್ರೀ ಲಕ್ಷ್ಮಿದೇವಮ್ಮ ಸೌಂಡ್ ಸಿಸ್ಟಮ್ ಅವರಿಂದ ಭಾವಗೀತೆಗಳ ಕಾರ್ಯಕ್ರಮ, ಶಿವಾರ ಉಮೇಶ್ ಅವರಿಂದ ಗೀತಗಾಯನ ಆಯೋಜಿಸಲಾಗಿದೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ