ಹೊಸಕೋಟೆ ಜನರಿಗೆ ಕೊಳವೆಬಾವಿ ನೀರು ಅನಿವಾರ್ಯ: ಶಾಸಕ ಶರತ್ ಬಚ್ಚೇಗೌಡ

KannadaprabhaNewsNetwork |  
Published : Apr 24, 2025, 12:04 AM IST
ಫೊಟೋ :23 ಎಚ್‌ಎಸ್‌ಕೆ 1ಹೊಸಕೋಟೆ ನಗರದ ತಾಲೂಕು ಕಚೇರಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಬಸವರಾಜ್ ನೇತೃತ್ವದಲ್ಲಿ ನೀರಿನ ಸಮಸ್ಯೆ ಸಂಭAದ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಯಿತು.ಫೊಟೋ :23 ಎಚ್‌ಎಸ್‌ಕೆ 1ಹೊಸಕೋಟೆ ನಗರದ ತಾಲೂಕು ಕಚೇರಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಬಸವರಾಜ್ ನೇತೃತ್ವದಲ್ಲಿ ನೀರಿನ ಸಮಸ್ಯೆ ಸಂಭAದ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸರ್ಕಾರ ನೀಡಿರುವ ಯೋಜನೆಗಳ ಪಟ್ಟಿ ಸಿದ್ಧಪಡಿಸಿ, ಯೋಜನೆ ಜಾರಿಗೆ ಬೇಕಾದ ಹಣ ಬಿಡುಗಡೆಗೆ ಡಿಪಿಆರ್ ಸಿದ್ಧಪಡಿಸಿ ನೀಡಿ. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಹೊಸಕೋಟೆ ತಾಲೂಕು ಸಹ ಒಂದು. ಇಲ್ಲಿನ ಜನರು ಯಾವುದೇ ನದಿ ನೀರಿನ ಮೂಲಗಳಿಲ್ಲದೆ ಕೇವಲ ಕೊಳವೆ ಬಾವಿಗಳನ್ನು ನಂಬಿ ಜೀವನ ಮಾಡಬೇಕಿದೆ, ಈ ಸಮಸ್ಯೆ ಬಗೆಹರಿಸಲು ತಾಲೂಕಿಗೆ ಇನ್ನೂ ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆಸುವ ಅವಶ್ಯಕತೆಯಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ತಾಲೂಕು ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.

ಹೊಸಕೋಟೆ ತಾಲೂಕನ್ನು 2023- 24ನೇ ಸಾಲಿನಲ್ಲಿ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿತ್ತು, ವಾಡಿಕೆಯಂತೆ ಪ್ರತಿ ವರ್ಷ ಸುಮಾರು 2.4 ಟಿಎಂಸಿಯಷ್ಟು ಮಳೆಯಾಗುತ್ತದೆ. ಅದರಲ್ಲಿ 1.8ರಷ್ಟು ನೀರು ಭೂಮಿಯಲ್ಲಿ ಇಂಗಿ ಹೋಗುತ್ತದೆ. ಇನ್ನುಳಿದ ನೀರು ಕೆರೆ- ಕುಂಟೆಗಳಲ್ಲಿ ಸಂಗ್ರಹ ಹಾಗೂ ಪಕ್ಕದ ಪ್ರದೇಶಕ್ಕೆ ಹರಿಯುತ್ತದೆ. ಆದರೆ ತಾಲೂಕಿನ ಕೈಗಾರಿಕೆಗಳಿಗೆ ಪ್ರತಿ ವರ್ಷ 3 ಟಿಎಂಸಿಯಷ್ಟು ನೀರು ಬಳಕೆಯಾಗುತ್ತದೆ. ಇದರ ಮಧ್ಯೆ ಕೃಷಿ ಹಾಗೂ ಕುಡಿಯುವ ನೀರಿಗಾಗಿ ಕೇವಲ ಕೊಳವೆ ಬಾವಿಗಳ ಮೊರೆ ಹೋಗಲಾಗಿದೆ, ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಕೇಂದ್ರದ ಜಲ್ ಜೀವನ್ ಯೋಜನೆ ಜಾರಿಯಾದರೂ ಹಲವಾರು ಗ್ರಾಮಗಳಲ್ಲಿ ಇಂದಿಗೂ ಪೂರ್ಣಗೊಂಡಿಲ್ಲ, ಅದರಲ್ಲೂ ಕಳಪೆ ಕಾಮಗಾರಿಯಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ, ಗುತ್ತಿಗೆದಾರರು ಸೂಕ್ತ ರೀತಿಯಲ್ಲಿ ಅಧಿಕಾರಿಗಳಿಗೆ ಸ್ಪಂದಿಸುತಿಲ್ಲ, ಇದರಿಂದ ಜೆಜೆಎಂನ ಹಲವಾರು ಕಾಮಗಾರಿಗಳು ಕುಂಠಿತವಾಗಿ ಸಮಸ್ಯೆ ಆಗುತ್ತಿದೆ, ಹೊಸಕೋಟೆ ನಗರ ಪ್ರದೇಶದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 6 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ, ನಗರಸಭೆ ಕೂಡಲೇ ಆ ಕೊಳವೆ ಬಾವಿಗಳನ್ನು ತನ್ನ ಸುಪರ್ದಿಗೆ ಪಡೆಯಬೇಕು, ಪ್ರತಿ ನಗರಸಭೆಗೆ ಪ್ರತಿ ವರ್ಷ 20 ಕೊಳವೆ ಬಾವಿ ಕೊರೆಸಲು ಅವಕಾಶ ಇದ್ದು, ಇನ್ನುಳಿದ ಕೊಳವೆ ಬಾವಿ ಕೊರೆಸಲು ಜಿಲ್ಲಾಧಿಕಾರಿಗಳು ಅನುದಾನ ಬಿಡುಗಡೆ ಮಾಡಬೇಕಿದೆ, ಇದಕ್ಕೆ ಬೇಕಾದ ಪತ್ರ ವ್ಯವಹಾರ ಪೂರ್ಣಗೊಳಿಸಲು ನಗರ ಅಯುಕ್ತರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಎ.ಬಿ.ಬಸವರಾಜ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸರ್ಕಾರ ನೀಡಿರುವ ಯೋಜನೆಗಳ ಪಟ್ಟಿ ಸಿದ್ಧಪಡಿಸಿ, ಯೋಜನೆ ಜಾರಿಗೆ ಬೇಕಾದ ಹಣ ಬಿಡುಗಡೆಗೆ ಡಿಪಿಆರ್ ಸಿದ್ಧಪಡಿಸಿ ನೀಡಿ. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಬೇಕು ಎಂದರು.

ಜಿಲ್ಲಾ ಪಂಚಾಯತಿ ಸಿಇಒ ಡಾ.ಅನುರಾಧ, ತಹಸೀಲ್ದಾರ್ ಸೋಮಶೇಖರ್ ಕೆ.ಎಸ್., ಇ.ಒ ಡಾ.ಸಿ.ಎನ್ ನಾರಾಯಣಸ್ವಾಮಿ, ನಗರಸಭೆ ಅಯುಕ್ತರಾದ ನೀಲಾಲೋಚನಾ ಪ್ರಭು ಸೇರಿ ವಿವಿಧ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ