ನಾಳೆಯಂದ ತುಳುನಾಡಿನಾದ್ಯಂತ ‘ಗಂಟ್ ಕಲ್ವೆರ್’ ತುಳು ಚಲನಚಿತ್ರ ತೆರೆಗೆ

KannadaprabhaNewsNetwork |  
Published : May 22, 2025, 01:20 AM IST
ಫೊಟೋ: ೨೧-ಪ್ರೆಸ್ ಫಿಲ್ಮ್ಸುದ್ಧಿಗೋಷ್ಠಿಯಲ್ಲಿ ಸುಧಾಕರ ಬನ್ನಂಜೆ ಮಾತನಾಡಿದರು. | Kannada Prabha

ಸಾರಾಂಶ

ಸುಧಾಕರ ಬನ್ನಂಜೆ ಕಥೆ, ಚಿತ್ರಕತೆ, ಸಂಭಾಷಣೆ, ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿರುವ ‘ಗಂಟ್ ಕಲ್ವೆರ್’ ತುಳು ಚಲನಚಿತ್ರವು ಶುಕ್ರವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಸ್ನೇಹ ಕೃಪಾ ಮೂವೀಸ್ ಲಾಂಛನದಲ್ಲಿ ತಯಾರಾದ ಸುಧಾಕರ ಬನ್ನಂಜೆ ಕಥೆ, ಚಿತ್ರಕತೆ, ಸಂಭಾಷಣೆ, ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿರುವ ‘ಗಂಟ್ ಕಲ್ವೆರ್’ ತುಳು ಚಲನಚಿತ್ರವು ಶುಕ್ರವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸುಧಾಕರ್ ಬನ್ನಂಜೆ, ಈ ಚಲನ ಚಿತ್ರದಲ್ಲಿ ಹಾಸ್ಯದ ಜತೆ ವಿಡಂಬನಾತ್ಮಕವಾಗಿ ಉತ್ತಮ ಸಂದೇಶ ನೀಡಲಾಗಿದ್ದು, ಅವಿಭಕ್ತ ಕುಟುಂಬವೊಂದರ ರಾಗ-ದ್ವೇಷಗಳ ಕಥೆಯನ್ನು ಪೋಣಿಸಲಾಗಿದೆ. ಸುಮಾರು ೨೦೦ ಕಲಾವಿದರು ನಟಿಸಿರುವ ವಿಶೇಷ ಚಿತ್ರ ಇದಾಗಿದ್ದು, ಈಗಾಗಲೇ ಬೆಂಗಳೂರಿನಲ್ಲಿ ನಡೆಸಲಾದ ೫ ಪ್ರೀಮಿಯರ್ ಶೋಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ಮಂಗಳೂರಿನ ಭಾರತ್ ಸಿನಿಮಾಸ್, ಸಿನಿಪೋಲಿಸ್ ಪಿವಿಆರ್, ರೂಪವಾಣಿ, ಉಡುಪಿಯ ಭಾರತ್ ಸಿನಿಮಾಸ್, ಕಲ್ಪನಾ, ಮಣಿಪಾಲ, ಪಡುಬಿದ್ರೆ, ಪುತ್ತೂರು, ದೇರಳಕಟ್ಟೆಯ ಭಾರತ್ ಸಿನಿಮಾಸ್, ಮಣಿಪಾಲದ ಐನಾಕ್ಸ್, ಕಾರ್ಕಳದ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯ ಭಾರತ್, ಸುರತ್ಕಲ್‌ನ ನಟರಾಜ್ ಹಾಗೂ ಸಿನಿಗ್ಯಾಲಕ್ಸಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಆರ್ಯನ್ ಶೆಟ್ಟಿ, ಸ್ಮಿತಾ ಸುವರ್ಣ, ಉಮೇಶ್ ಮಿಜಾರು, ದಿಶಾ ಪುತ್ರನ್, ಸುಂದರ ರೈ ಮಂದಾರ, ಸಂದೀಪ್ ಶೆಟ್ಟಿ, ಮಾಣಿಬೆಟ್ಟು, ಯಾದವ ಮಣ್ಣಗುಡ್ಡೆ, ರವಿ ಸುರತ್ಕಲ್,ವಸಂತ ಮುನಿಯಾಲು, ಪ್ರಶಾಂತ್ ಎಳ್ಳಂಪಳ್ಳಿ, ಗಿರೀಶ್ ಶೆಟ್ಟಿ ಕಟೀಲ್, ಸುಧೀರ್ ಕೊಠಾರಿ, ಕ್ಲಾಡಿ ಡಿಲಿಮಾ, ನಾಗೇಶ ಶೆಟ್ಟಿ, ಸಂಪತ್, ಪ್ರದೀಪ್ ಆಳ್ವ, ತಮ್ಮ ಲಕ್ಷ್ಮಣ್, ಜೀವನ್ ಉಲ್ಲಾಳ್, ರಾಕೇಶ್ ಅಚಾರ್ಯ, ಶೇಖರ ಪಾಂಗಾಳ, ಸುರೇಶ್ ಯು.ಪಿ, ಸತೀಶ್ ಕಲ್ಯಾಣಪುರ, ಮೋಹನ್ ಕೊಪ್ಪಳ, ಮಂಗೇಶ್ ಭಟ್ ವಿಟ್ಲ, ಚೇತಕ್ ಪೂಜಾರಿ, ನಮಿತಾ ಕುಳೂರು, ಶಾಂತಿ ಶೆಣೈ, ಸಂಜಿತಾ, ಸಿಂಚನ, ಸುಮಾಲಿನಿ ಪೆರ್ಡೂರು, ಅರುಣ್, ರಾಮದಾಸ ಸಸಿಹಿತ್ಲು, ಹರೀಶ್ ಕಡಂದಲೆ, ವಿಶೇಷ ಪಾತ್ರದಲ್ಲಿ ಅಥರ್ವ ಪ್ರಕಾಶ್, ಪ್ರಣವ್ ಹೆಗ್ಡೆ, ಶ್ರೀಕಾಂತ ರೈ, ಶೈಲೇಶ್ ಕೋಟ್ಯಾನ್ ನಟಿಸಿದ್ದಾರೆ.ವಿ. ಮನೋಹರ್ ಅವರ ಸಂಗೀತ, ಶಂಕರ್ ರವಿಕಿಶೋರ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ, ತಮ್ಮ ಲಕ್ಷ್ಮಣ್ ಕಲೆ, ಕೌರವ ವೆಂಕಟೇಶ್ ಸಾಹಸ, ಪ್ರಶಾಂತ ಎಳ್ಳಂಪಳ್ಳಿ, ರಾಮದಾಸ ಸಸಿಹಿತ್ಲು, ಸಹ ನಿರ್ದೇಶನ ಇರುವ ಈ ಚಿತ್ರದ ಸಹನಿರ್ಮಾಪಕರು ರಾಜಾರಾಂ ಶೆಟ್ಟಿ ಉಪ್ಪಳ, ಮಮತಾ ಎಸ್. ಬನ್ನಂಜೆ, ಗಿರೀಶ್ ಎಸ್. ಪೂಜಾರಿ, ಪ್ರಾರ್ಥನ್ ಬನ್ನಂಜೆ, ಪ್ರೇರಣ್ ಬನ್ನಂಜೆ, ಕೃತಿ ಆರ್. ಶೆಟ್ಟಿ, ಚೀಫ್ ಕೋ ಆರ್ಡಿನೇಟರ್ ಸುಧಾಕರ ಕುದ್ರೋಳಿ, ಸಹಾಯ ಸಂತೋಷ್ ಶೆಟ್ಟಿ ಅಳಿಕೆ ಕೆಲಸ ನಿರ್ವಹಿಸಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ಸಹ ನಿರ್ದೇಶಕ ಪ್ರಶಾಂತ್ ಆಚಾರ್ಯ, ನಾಯಕ ನಟ ಆರ್ಯನ್, ಸುಧಾಕರ್ ಕುದ್ರೋಳಿ, ಸಂತೋಷ್ ಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ