31ರಂದು ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ

KannadaprabhaNewsNetwork |  
Published : Jan 29, 2025, 01:35 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ರೋಹನ್ ಮೊಂತೆರೊ. | Kannada Prabha

ಸಾರಾಂಶ

ಜನವರಿ 19ರಂದು ಯುಎಇಯಲ್ಲಿ ದಾಖಲೆಯ 16 ಪ್ರೀಮಿಯ‌ರ್ ಶೋ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಜನವರಿ 26ರಂದು ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ 3 ಪ್ರೀಮಿಯರ್ ಶೋ ನಡೆದಿದೆ. ಜನವರಿ 31ರಂದು ತುಳುನಾಡಿನಾದ್ಯಂತ ರಿಲೀಸ್ ಆದರೆ, ಫೆ.7ರಂದು ಯುಎಇ ಹಾಗೂ ಫೆ.2ರಂದು ಕೆನಡದಲ್ಲಿ ತೆರೆ ಕಾಣಲಿದೆ ಎಂದು ರಾಹುಲ್ ಅಮೀನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರೋಹನ್ ಕಾರ್ಪೊರೇಷನ್ ಅರ್ಪಿಸುವ, ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್‌ಮೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್. ಫಿಲ್ಮ್ಸ್‌ನ ಹರಿಪ್ರಸಾದ್ ರೈ ಸಹಯೋಗದಲ್ಲಿ ಆನಂದ್ ಎನ್. ಕುಂಪಲ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ "ಮಿಡ್ಲ್‌ ಕ್ಲಾಸ್ ಫ್ಯಾಮಿಲಿ " ತುಳು ಸಿನಿಮಾ ಜನವರಿ 31ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹನ್ ಕಾರ್ಪೊರೇಶನ್ ಎಂಡಿ ಹಾಗೂ ಅಧ್ಯಕ್ಷ ರೋಹನ್ ಮೊಂತೆರೊ, ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್‌ನ ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್ ದೇರಳಕಟ್ಟೆ, ಪುತ್ತೂರು, ಪಡುಬಿದ್ರಿ, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್‌ನ ನಟರಾಜ್, ಸಿನಿಗ್ಯಾಲಕ್ಸಿ, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ ಮೊದಲಾದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದರು.

ನಿರ್ದೇಶಕ ರಾಹುಲ್ ಅಮೀನ್ ಮಾತನಾಡಿ, ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇದರಲ್ಲಿ ದುಡಿದಿದ್ದಾರೆ. ಮಿಡಲ್ ಕ್ಲಾಸ್ ಕನಸುಗಳು ಇದರಲ್ಲಿ ಅಡಗಿವೆ ಎಂದು ಹೇಳಿದರು.

ಚಿತ್ರದಲ್ಲಿ ವಿನೀತ್ ಕುಮಾರ್ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿ, ತುಳು ಚಿತ್ರರಂಗದ ಕಲಾವಿದರಾದ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಮೈಮ್ ರಾಮದಾಸ್, ರೂಪ ವರ್ಕಾಡಿ ಅಭಿನಯಿಸಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್ ಪಿ, ಸಂಕಲನ ವಿಶಾಲ್ ದೇವಾಡಿಗ, ಡಿ.ಐ ಮತ್ತು ವರ್ಣ ಪ್ರಜ್ವಲ್ ಸುವರ್ಣ, ವಸ್ತ್ರವಿನ್ಯಾಸ ವರ್ಷ ಆಚಾರ್ಯ, ಡಿಜಿಟಲ್ ಮಾರ್ಕೆಟಿಂಗ್ ಆಯುಷ್ಮಾನ್ ಹಾಗೂ ನವೀನ್ ಕುಮಾರ್ ಶೆಟ್ಟಿ ಹಾಗೂ ವಿನಾಯಕ ಆಚಾರ್ಯ ನೃತ್ಯ ಸಂಯೋಜಿಸಿದ್ದಾರೆ.

ವಿದೇಶದಲ್ಲೂ ತೆರೆಗೆ: ಜನವರಿ 19ರಂದು ಯುಎಇಯಲ್ಲಿ ದಾಖಲೆಯ 16 ಪ್ರೀಮಿಯ‌ರ್ ಶೋ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಜನವರಿ 26ರಂದು ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ 3 ಪ್ರೀಮಿಯರ್ ಶೋ ನಡೆದಿದೆ. ಜನವರಿ 31ರಂದು ತುಳುನಾಡಿನಾದ್ಯಂತ ರಿಲೀಸ್ ಆದರೆ, ಫೆ.7ರಂದು ಯುಎಇ ಹಾಗೂ ಫೆ.2ರಂದು ಕೆನಡದಲ್ಲಿ ತೆರೆ ಕಾಣಲಿದೆ ಎಂದು ರಾಹುಲ್ ಅಮೀನ್ ತಿಳಿಸಿದರು.

ಸಹ ನಿರ್ಮಾಪಕರಾದ ಭರತ್ ಗಟ್ಟಿ, ಆನಂದ ಕುಂಪಲ, ಕಿರಣ್ ಶೆಟ್ಟಿ, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಗಣೇಶ್ ಕೊಲ್ಯ, ಅಶ್ವಿನಿ ರಕ್ಷಿತ್, ಕ್ಷಿತಿಂದ್ರ ಕೋಟೆಕಾರ್, ಮಿತ್ರಂಪಾಡಿ ಜಯರಾಮ್ ರೈ, ಸ್ವಸ್ತಿಕ್ ಆಚಾರ್ಯ, ನಾಯಕ ನಟ ವಿನೀತ್ ಕುಮಾರ್, ನಾಯಕ ನಟಿ ಸಮತಾ ಅಮೀನ್, ವಸ್ತ್ರಾಲಂಕಾರ ಮಾಡಿದ ವರ್ಷಾ ಆಚಾರ್ಯ, ನಟಿ ಚೈತ್ರಾ ಶೆಟ್ಟಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ