ಕನ್ನಡ ನಾಡು, ಸಾಹಿತ್ಯ, ಕಲೆಗೆ ತುಮಕೂರು ಕೊಡುಗೆ ಅಪಾರ: ಡಾ.ಕೆ.ಸಣ್ಣಹೊನ್ನಯ್ಯ ಕಂಟಲೆಗೆರೆ

KannadaprabhaNewsNetwork |  
Published : Nov 03, 2026, 01:15 AM IST
್ಿ್ಿ್ಿ್ಿಿ | Kannada Prabha

ಸಾರಾಂಶ

ರೈಲ್ವೇ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನೆನೆಗುದಿಗೆ ಬಿದ್ದಂತಾಗಿದ್ದ ರಾಯದುರ್ಗ, ದಾವಣಗೆರೆ ನೂತನ ರೈಲು ಮಾರ್ಗ ನಿರ್ಮಾಣ ವೇಗ ಪಡೆದುಕೊಂಡಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಕಲಾಕ್ಷೇತ್ರಕ್ಕೆ ತುಮಕೂರಿನ ಕೊಡುಗೆ ಅಪಾರವಾಗಿದೆ. ನಾಡು ನಮಗೇನು ಕೊಟ್ಟಿದೆ ಎಂದು ಕೇಳುವ ಬದಲು ನಾಡಿಗೆ ನಾವೇನು ಕೊಡಲು ಸಾಧ್ಯವಿದೆ ಎಂದು ಯೋಚಿಸಬೇಕಿದೆ ಜಾನಪದ ವಿದ್ವಾಂಸ ಡಾ. ಕೆ. ಸಣ್ಣ ಹೊನ್ನಯ್ಯ ಕಂಟಲೆಗೆರೆ ಹೇಳಿದರು.

ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ವತಿಯಿಂದ ನಗರದ ರೈಲು ನಿಲ್ದಾಣದ ಆವರಣಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಸಾಹಿತ್ಯ ದಿಗ್ಗಜರನ್ನು ಸ್ಮರಿಸಿದರು.

ವೇದಿಕೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ರಂಗ ಕಲಾವಿದ, ರೈಲ್ವೇ ಪ್ರಯಾಣಿಕ ಎಸ್. ರಾಜಣ್ಣ ಜಕ್ಕೇನಹಳ್ಳಿ ಅವರು, ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ರೈಲು ಪ್ರಯಾಣಿಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.

ವೇದಿಕೆ ಆರಂಭದಿಂದಲೂ ಅದರ ಚಟುವಟಿಕೆಗಳನ್ನು ಗಮನಿಸುತ್ತಿದ್ದು, ಪ್ರಯಾಣಿಕರ ಅಗತ್ಯಗಳಿಗೆ ಸ್ಪಂದಿಸುತ್ತಾ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ರೈಲು ಪ್ರಯಾಣಿಕರ ವೇದಿಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ಮಾತನಾಡಿ, ನಮ್ಮ ಮನೆ ಕನ್ನಡವಾಗಬೇಕು. ನಮ್ಮ ಮನಸ್ಸು ಕನ್ನಡದ ಭಾವನೆಗಳಿಂದ ತುಂಬಿರಬೇಕು. ನಮ್ಮ ನಡೆ ನುಡಿಯಲ್ಲಿ ಕನ್ನಡದ ಸೊಗಡು ತುಂಬಿರಬೇಕು. ಮಕ್ಕಳ ಮೊದಲ ಭಾಷೆ ಕನ್ನಡವಾಗಲಿ, ಮನೆಯ ಸಂಭಾಷಣೆ ಕನ್ನಡದಲ್ಲಿರಲಿ ಎಂದು ಹೇಳಿದರು.

ಪ್ರಾಸ್ತಾವಿಕ ಮಾತಗಳನ್ನಾಡಿದ ವೇದಿಕೆ ಕಾರ್ಯದರ್ಶಿ ಸಿ. ನಾಗರಾಜ್, ವೇದಿಕೆ ಆರಂಭದ ಉದ್ದೇಶ ಮತ್ತು ವೇದಿಕೆ ಚಟುವಟಿಕೆಗಳನ್ನು ವಿವರಿಸಿದರಲ್ಲದೆ, ಪ್ರಯಾಣಿಕರ ಸಮಸ್ಯೆಗಳಿಗೆ ಸಾಧ್ಯವಾದಷ್ಟೂ ವೇದಿಕೆ ಸ್ಪಂದಿಸುತ್ತಿದೆ ಎಂದರು.

ರೈಲ್ವೇ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನೆನೆಗುದಿಗೆ ಬಿದ್ದಂತಾಗಿದ್ದ ರಾಯದುರ್ಗ, ದಾವಣಗೆರೆ ನೂತನ ರೈಲು ಮಾರ್ಗ ನಿರ್ಮಾಣ ವೇಗ ಪಡೆದುಕೊಂಡಿದೆ ಎಂದು ತಿಳಿಸಿದರು.

ಮಾಸ್ಟರ್ ಆಶಿಕ್ ಕವನ್ ವಿಷ್ಣು ಪ್ರಾರ್ಥಿಸಿ, ಸಂಜನ್ ನಾಗರಾಜ್, ಕುಮಾರಿ ಆರ್. ಮಾನಸ ನಾಡಗೀತೆ, ಕನ್ನಡಗೀತೆಗಳ ಗಾಯನ ಮಾಡಿದರು. ಗುರುಪ್ರಸಾದ್ ಸ್ವಾಗತಿಸಿದರು. ಅರ್ಷದ್ ಸನ್ಮಾನಿತರ ಪರಿಚಯ ಮಾಡಿದರು. ರಾಮಾಂಜನೇಯ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿ ರಘು ವಂದಿಸಿದರು. ತುಮಕೂರು ರೈಲು ನಿಲ್ದಾಣದ ವ್ಯವಸ್ಥಾಪಕರಾದ ಮನಿಷ್, ಆರ್‌ಪಿಎಫ್‌ ಎಎಸ್‌ಐ ನಿರ್ಮಲಾ ಮತ್ತು ಸಿಬ್ಬಂದಿ, ಖಜಾಂಚಿ ಆರ್. ಬಾಲಾಜಿ ಸೇರಿದಂತೆ ವೇದಿಕೆಯ ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ