ತುಮುಲ್ ಚುನಾವಣೆ: ಕಾಂಗ್ರೆಸ್ ಮೇಲುಗೈ

KannadaprabhaNewsNetwork |  
Published : Jan 10, 2025, 12:45 AM IST

ಸಾರಾಂಶ

ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ.

ಕನ್ನಡಪ್ರಭ ವಾರ್ತೆ, ತುಮಕೂರುತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ.ನಗರದ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿರವರ ಸಮಕ್ಷದಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿ 10 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟವಾಯಿತು. ತುಮಕೂರು ಗ್ರಾಮಾಂತರ, ತಿಪಟೂರು, ಮಧುಗಿರಿ, ಪಾವಗಡ ಹಾಗೂ ಗುಬ್ಬಿ ತಾಲೂಕುಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಕುಣಿಗಲ್, ಶಿರಾ, ಕೊರಟಗೆರೆ ತಾಲೂಕಿನಿಂದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು, ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಸ್ವತಂತ್ರ ಅಭ್ಯರ್ಥಿ ಜಯಗಳಿಸಿದ್ದಾರೆ.ತುಮಕೂರು ತಾಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಎಂ. ನಂಜೇಗೌಡ ೮೩ ಮತಗಳನ್ನು ಪಡೆದು ಎಚ್.ಕೆ. ರೇಣುಕಾಪ್ರಸಾದ್ (66 ಮತ) ರವರ ವಿರುದ್ಧ ಗೆಲುವು ಸಾಧಿಸಿದ್ದಾರೆ.ಗುಬ್ಬಿ ತಾಲೂಕಿನಿಂದ ಶಾಸಕ ಹಾಗೂ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ರವರ ಪತ್ನಿ ಭಾರತಿದೇವಿ ಕೆ.ಪಿ. ಅವರು 68 ಮತಗಳನ್ನು ಪಡೆದು ಚಂದ್ರಶೇಖರ್ ಜಿ. (52 ಮತ) ರವರ ವಿರುದ್ಧ ಜಯಗಳಿಸಿದ್ದಾರೆ.ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಬಿ.ಎನ್. ಶಿವಪ್ರಕಾಶ್ ಅವರು 82 ಮತ ಪಡೆದು ಎಸ್. ರಾಜಶೇಖರ್ (27 ಮತ) ಅವರ ವಿರುದ್ದ ಗೆಲುವು ಸಾಧಿಸಿದ್ದಾರೆ. ತಿಪಟೂರು ತಾಲೂಕಿನಿಂದ ಸ್ಪರ್ಧಿಸಿದ್ದ ಎಂ.ಕೆ. ಪ್ರಕಾಶ್ ಅವರು 105 ಮತಗಳನ್ನು ಪಡೆದು ತ್ರಿಯಂಬಕ (34 ಮತ) ವಿರುದ್ಧ ವಿಜಯಿಯಾಗಿದ್ದಾರೆ.ತುರುವೇಕೆರೆ ತಾಲೂಕಿನಿಂದ ಸಿ.ವಿ. ಮಹಲಿಂಗಯ್ಯ 85 ಮತಗಳನ್ನು ಪಡೆದು ಪಿ.ಟಿ. ಗಂಗಾಧರಯ್ಯ ವಿರುದ್ಧ ಜಯಗಳಿಸಿದ್ದಾರೆ.ಕುಣಿಗಲ್ ತಾಲೂಕಿನಿಂದ ಡಿ. ಕೃಷ್ಣಕುಮಾರ್ ಅವರು 126 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಮಧುಗಿರಿ ತಾಲೂಕಿನಿಂದ ಬಿ. ನಾಗೇಶ್‌ಬಾಬು (61 ಮತ), ಕೊರಟಗೆರೆ ತಾಲೂಕಿನಿಂದ ಸಿದ್ದಗಂಗಯ್ಯ ವಿ. (78), ಶಿರಾ ತಾಲೂಕಿನಿಂದ ಎಸ್.ಆರ್.ಗೌಡ 84 ಮತ ಹಾಗೂ ಪಾವಗಡ ತಾಲೂಕಿನಿಂದ ಚಂದ್ರಶೇಖರರೆಡ್ಡಿ ಅವರು 29 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್