ಕನ್ನಡಪ್ರಭ ವಾರ್ತೆ ಪಾವಗಡ
ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ನೂತನ ನಿರ್ದೇಶಕ ಚಂದ್ರಶೇಖರರೆಡ್ಡಿಗೆ ಶುಭ ಹಾರೈಸಿ ಆಶೀರ್ವದಿಸಿದರು. ಪಾವಗಡಕ್ಕೆ ಆಗಮಿಸಿದ ಬಳಿಕ ಶಾಸಕ ಎಚ್.ವಿ.ವೆಂಕಚಟೇಶ್ ಪತ್ರಿಕೆಯೊಂದಿಗೆ ಮಾತನಾಡಿ, ಜ.9ರಂದು ನಡೆದ ಹಾಲು ಒಕ್ಕೂಟದ ಚುನಾವಣೆಯ ಫಲಿತಾಂಶದಲ್ಲಿ ಪಾವಗಡ ತಾಲೂಕಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರರೆಡ್ಡಿ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶ ಅತ್ಯಂತ ಸಂತಸ ತಂದಿದ್ದು, ಅಭಿನಂದನೆ ಸಲ್ಲಿಸುತ್ತಿದ್ದೇನೆ. ತುಮುಲ್ ನಿರ್ದೇಶಕರಾಗಿ ಆಯ್ಕೆಯಾದ ಚಂದ್ರಶೇಖರರೆಡ್ಡಿ ಅವರ ಗೆಲುವಿಗೆ ಸಹಕರಿಸಿದ ತಾಲೂಕಿನ ಎಲ್ಲ ಡೇರಿಗಳ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಮಾಜಿ ಪುರಸಭೆಯ ಅಧ್ಯಕ್ಷ ಎ.ಶಂಕರ್ ರೆಡ್ಡಿ, ತುಮುಲ್ ನಿರ್ದೇಶಕ ಚಂದ್ರಶೇಖರರೆಡ್ಡಿ, ಪಾವಗಡ ಬೇಕರಿ ಅನಿಲ್‌ಕುಮಾರ್ ಇತರರಿದ್ದರು.