ತುಂಗಭದ್ರಾ ಐಸಿಸಿ ತೀರ್ಮಾನ ರೈತ ವಿರೋಧಿ: ಬಸವಂತರಾಯಗೌಡ

KannadaprabhaNewsNetwork |  
Published : Nov 20, 2026, 01:30 AM IST
19ಕೆಪಿಎಸ್ಎನ್ಡಿ1: ಬಸವಂತರಾಯಗೌಡ | Kannada Prabha

ಸಾರಾಂಶ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತಕಾಯಬೇಕಾದ 128ನೇ ನೀರಾವರಿ ಸಲಹಾ ಸಮಿತಿ ರೈತ ವಿರೋಧಿ ತೀರ್ಮಾನ ಕೈಗೊಂಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತರಾಯಗೌಡ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತಕಾಯಬೇಕಾದ 128ನೇ ನೀರಾವರಿ ಸಲಹಾ ಸಮಿತಿ ರೈತ ವಿರೋಧಿ ತೀರ್ಮಾನ ಕೈಗೊಂಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತರಾಯಗೌಡ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎಡದಂಡೆ ಮುಖ್ಯ ನಾಲೆಗೆ ಪ್ರತಿದಿನ 3,000 ಕ್ಯೂಸೆಕ್‌ನಂತೆ ನ.28ರವರೆಗೆ ನೀರು ಹರಿಸಲು ಐಸಿಸಿ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿರುವುದು ರೈತ ವಿರೋಧಿ ನಡೆ ಹಾಗೂ ಅವೈಜ್ಞಾನಿಕವಾಗಿದೆ. ಇದರಿಂದ ಮೇಲ್ಭಾಗದ ರೈತರ ಜಮೀನುಗಳಿಗೆ ನೀರು ಸಿಗಬಹುದು. ಆದರೆ ಉಳಿದ ಮಧ್ಯದಲ್ಲಿರುವ ಹಾಗೂ ಕೆಳಭಾಗದ ಪ್ರದೇಶದ ರೈತರ ಜಮೀನಿಗೆ ನೀರು ತಲುಪುವುದು ಅಸಾಧ್ಯ. ಈ ತೀರ್ಮಾನವು ಕೆಳ ಭಾಗದ ರೈತರಿಗೆ ಮಾಡಿದ ಮೋಸವಾಗಿದೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ ಎಂದು ವಿವರಿಸಿದರು.

ಆ.11 ರಿಂದ ಸೆ.15 ರವರೆಗೆ ಯಾರು ಬಿತ್ತನೆ ಮಾಡಿದ್ದಾರೋ ಅವರಿಗೆ ಮಾತ್ರ ಈ ತೀರ್ಮಾನದಿಂದ ಅನುಕೂಲವಾಗಿದೆ. ಈ ಸಮಯದಲ್ಲಿ ಬಿತ್ತನೆ ಮಾಡಿರುವವರು ಶೇ.20 ರಷ್ಟು ನೀರನ್ನು ಕಳ್ಳತನ ಮಾಡಿದ್ದಾರೆ, ಉಳಿದ ಶೇ.15 ರಷ್ಟು ರೈತರು ಕಂತಿನ ಪ್ರಕಾರ ನೀರು ಪಡೆದಿದ್ದಾರೆ. ತಾಲೂಕಿನಲ್ಲಿ ಮಧ್ಯಮ ಪ್ರದೇಶ ಹಾಗೂ ಕೆಳಭಾಗದ ಶೇ.65 ರಷ್ಟು ರೈತರು ತಮ್ಮ ಜಮೀನಿನಲ್ಲಿ ಜೋಳ ಬಿತ್ತಿದ್ದಾರೆ. ಎಡದಂಡೆ ಮುಖ್ಯ ಕಾಲುವೆಗೆ 3800 ರಿಂದ 4000 ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಶೇ.40 ರಷ್ಟು ರೈತರ ಜಮೀನಿಗೆ ನೀರು ಅಲ್ಪ ಸ್ವಲ್ಪ ಸಿಕ್ಕಿದ್ದು, ಉಳಿದ ಶೇ.25 ರಷ್ಟು ರೈತರ ಜಮೀನಿಗೆ ಇದುವರೆಗೂ ನೀರು ತಲುಪಿಲ್ಲ ಎಂದು ಟೀಕಿಸಿದರು.

ನೀರಿನ ಕೊರತೆಯಿಂದ ತಾಲೂಕಿನಲ್ಲಿ ಬೆಳೆನಷ್ಟ ಅನುಭವಿಸುವ ರೈತರಿಗೆ ಸರ್ಕಾರ ಎಕರೆ 50 ಸಾವಿರ ರು. ಪರಿಹಾರ ನೀಡುವ ಮೂಲಕ ನೆರವಿಗೆ ಬರಬೇಕು. ಇಲ್ಲದೇ ಹೋದರೆ ಅನಿವಾರ್ಯವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಸವಂತರಾಯಗೌಡ ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ