- ಹೊನ್ನಾಳಿ, ಹರಿಹರ ತಾಲೂಕಿನಲ್ಲಿ ನೆರೆ ಹಾವಳಿ । ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರಕ್ಕೆ ಕ್ರಮ: ಡಿಸಿ
ಕನ್ನಡಪ್ರಭ ವಾರ್ತೆ, ದಾವಣಗೆರೆ
ತುಂಗಾ ಹಾಗೂ ಭದ್ರಾ ಅಣೆಕಟ್ಟೆಗಳ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ, ಭದ್ರಾ ಜಲಾಶಯ ಭರ್ತಿಯಾಗಿರುವುದು, ತುಂಗಾ ಡ್ಯಾಂ ಎಲ್ಲ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಬಿಡಲಾಗಿದೆ. ಈ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ ಹರಿಯುವ ನೀರು 1,44,468 ಕ್ಯುಸೆಕ್‌ಗೆ ಏರಿಕೆಯಾಗಿದೆ. ಇದು ಅಪಾಯದ ಮಟ್ಟವಾಗಿದ್ದು, ನದಿಪಾತ್ರದ ನಿವಾಸಿಗಳು, ಗ್ರಾಮಸ್ಥರು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮನವಿ ಮಾಡಿದ್ದಾರೆ.ಹೊನ್ನಾಳಿ ಪಟ್ಟಣದ ಬಾಲರಾಜ ಘಾಟ್, ಬಂಬೂ ಬಜಾರ್, ತಾಲೂಕಿನ ಸಾಸ್ವೇಹಳ್ಳಿ ಇತರೆಡೆ ಶಾಸಕ ಡಿ.ಜಿ.ಶಾಂತನಗೌಡ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತುಂಗಾ ಡ್ಯಾಂದಿಂದ 82053, ಭದ್ರಾ ಡ್ಯಾಂದಿಂದ 62415 ಕ್ಯುಸೆಕ್ ನೀರು ಬರುತ್ತಿದೆ ಎಂದರು.
ನದಿಗೆ ಯಾರೂ ಇಳಿಯದಂತೆ ಜನರಿಗೆ ಎಚ್ಚರಿಸಲಾಗಿದೆ. ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಎಸ್‌ಡಿಆರ್‌ಎಫ್, ಅಗ್ನಿಶಾಮಕ ಪಡೆಗಳು ರಕ್ಷಣಾ ಪರಿಕರಗಳೊಂದಿಗೆ ಸನ್ನದ್ಧವಾಗಿವೆ. ಅಪಾಯಕಾರಿ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ರಚಿಸಿ, ನದಿ ಪಾತ್ರದ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಾಡಳಿತ ಅಧಿಕಾರಿಗಳು ಸೇರಿದಂತೆ ತಹಸೀಲ್ದಾರರು ಕಟ್ಟೆಚ್ಚರ ವಹಿಸಲು ಸೂಚನೆ ನೀಡಿ, ನದಿಗೆ ಇಳಿಯದಂತೆ ಡಂಗುರ (ಟಾಂ ಟಾಂ) ಹೊಡೆಸಲು ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
- - - ಬಾಕ್ಸ್-1 * ತುಂಗಭದ್ರಾ 12.57 ಮೀಟರ್ ತಲುಪಿದರೆ ಪ್ರವಾಹ ದಾವಣಗೆರೆ: ಹೊನ್ನಾಳಿಯಲ್ಲಿ ತುಂಗಭದ್ರಾ ನದಿ ನೀರಿನಮಟ್ಟ ಅಳತೆಗೆ ಕೇಂದ್ರ ವಾಟರ್ ಬೋರ್ಡ್‌ನ ಬೇಸ್ ಸ್ಟೇಷನ್ ಇದ್ದು, ಬುಧವಾರ ಸಂಜೆ 6ರ ವೇಳೆಗೆ 12.06 ಮೀಟರ್ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದು ಅಪಾಯ ಮಟ್ಟವಾಗಿದೆ. ಈ ಸ್ಟೇಷನ್‌ನಲ್ಲಿ 10.85 ಮೀಟರ್ ಹರಿವು ದಾಖಲಾದರೆ, ಅಪಾಯದ ಮಟ್ಟವೆಂದೇ ಪರಿಗಣಿಸಲಾಗುತ್ತದೆ. ಒಂದುವೇಳೆ ಅದು 12.57 ಮೀಟರ್ ದಾಖಲಾದರೆ ಪ್ರವಾಹ ಉಂಟಾಗಿ, ಹಾನಿಯ ಮಟ್ಟವೆಂದು ಪರಿಗಣಿಸಲಾಗುತ್ತದೆ. ಪ್ರತಿ ಗಂಟೆಗೆ ಇಲ್ಲಿನ ದಾಖಲೆಯಲ್ಲಿ ಪಡೆದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ.
ಬಾಕ್ಸ್-2 * ಸಹಾಯವಾಣಿಗಳ ಸ್ಥಾಪನೆ
- - --31ಕೆಡಿವಿಜಿ10: ಹೊನ್ನಾಳಿ ಪಟ್ಟಣದಲ್ಲಿ ಜನವಸತಿ ಪ್ರದೇಶಕ್ಕೆ ತುಂಗಭದ್ರಾ ನದಿ ನೆರೆ ಬಂದಿರುವುದು.
-31ಕೆಡಿವಿಜಿ14, 15: ದಾವಣಗೆರೆ ಜಿಲ್ಲೆ ಹೊನ್ನಾಳಿ, ಹರಿಹರ ತಾಲೂಕಿನಲ್ಲಿ ತುಂಗಭದ್ರಾ ನದಿ ನೆರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸರ್ವ ಸನ್ನದ್ಧವಾಗಿರುವುದು.-31ಕೆಡಿವಿಜಿ16: ಹೊನ್ನಾಳಿ ತಾಲೂಕಿನಲ್ಲಿ ತುಂಗಭದ್ರಾ ನದಿ ನೆರೆ ಬಂದ ಸ್ಥಳಕ್ಕೆ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್ ಭೇಟಿ ನೀಡಿ, ಚರ್ಚಿಸುತ್ತಿರುವುದು.