- ನದಿ ನೋಡಲು ಜನಸಾಗರ: ಜನರ ನಿಯಂತ್ರಿಸಲು ಪೊಲೀಸರ ಹರಸಾಹಸ
- - -ಕನ್ನಡಪ್ರಭ ವಾರ್ತೆ ಹರಿಹರ
ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ತುಂಗ ಹಾಗೂ ಭದ್ರಾ ಜಲಾಶಯಗಳ ವ್ಯಾಪ್ತಿ ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಆ ಕಾರಣಕ್ಕೆ ತುಂಗಾ ಹಾಗೂ ಭದ್ರಾ ಜಲಾಶಯಗಳು ತುಂಬಿವೆ. ಎರಡೂ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಟ್ಟಿರುವ ಕಾರಣ ಹರಿಹರ ತಾಲೂಕಿನ ತುಂಗಭದ್ರಾ ನದಿಯೂ ಮೈದುಂಬಿ ಹರಿಯುತ್ತಿದೆ.ನಗರದ ತುಂಗಭದ್ರಾ ನದಿ ಉಕ್ಕಿ ಹರಿಯುವುದನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ತಂಡೋಪ ತಂಡವಾಗಿ ನದಿಯ ಸೇತುವೆ, ರಾಘವೇಂದ್ರ ಮಠದ ಹಿಂಭಾಗದ ಆರತಿ ಮಂಟಪದ ಬಳಿ ಆಗಮಿಸುತ್ತಿದ್ದಾರೆ. ಹುರಿದ ಶೇಂಗಾ, ಕಾರ-ಮಂಡಕ್ಕಿ, ಕುರುಕಲು ತಿಂಡಿಗಳು ಸೇರಿದಂತೆ ವಿವಿಧ ತಳ್ಳುಗಾಡಿಗಳು ತಲೆಯೆತ್ತಿವೆ. ಜನತೆ ಅವುಗಳನ್ನು ಸವಿಯುತ್ತ ನದಿ ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಅನೇಕರು ದ್ವಿಚಕ್ರ ವಾಹನ, ಕಾರುಗಳಲ್ಲಿ ಆಗಮಿಸುತ್ತಿದ್ದಾರೆ. ಆದಕಾರಣ ಹರಿಹರ- ರಾಣೇಬೆನ್ನೂರು ಮಧ್ಯೆ ಇರುವ ಸೇತುವೆಯಲ್ಲಿ ವಾಹನ ಸಂಚಾರ ಅಸ್ತ್ಯವ್ಯಸ್ತವಾಗಿತ್ತು. ಪೊಲೀಸರು ಸೇತುವೆ ಮೇಲೆ ವಾಹನಗಳನ್ನು ನಿಲ್ಲಿಸದಂತೆ ಚಾಲಕರಿಗೆ ಸೂಚಿಸುತ್ತ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಜನರು ನದಿ ಸಮೀಪ ಹೋಗದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ. ನದಿ ಪಾತ್ರದಲ್ಲಿ ಸ್ನಾನ, ವಿಹಾರ, ದನ- ಕರುಗಳನ್ನು ಮೇಯಿಸಲು ತೆರಳದಂತೆ ತಾಲೂಕು ಆಡಳಿತ ಕಟ್ಟೆಚ್ಚರ ನೀಡಿದೆ. ಹರಿಹರದ ಗಂಗಾ ನಗರ ಮನೆಗಳು ಜಲಾವೃತವಾಗುವ ಸಾಧ್ಯತೆ ಇದೆ. ಇದರಿಂದಾಗಿ ಇಲ್ಲಿಯ ಜನತೆ ಭೀತಿಯಲ್ಲಿದ್ದಾರೆ.ಕಳೆದ ವರ್ಷ ಹರಿಹರದ ಪೂರ್ವ ಭಾಗದಲ್ಲಿರುವ ದೇವರಬೆಳಕೆರೆ ನಾಲೆಯಲ್ಲಿ ಹೂಳು ತುಂಬಿದ್ದ ಕಾರಣ ಕಾಳಿದಾಸ ನಗರ, ಬೆಂಕಿ ನಗರ, ಪ್ರಶಾಂತ ನಗರ, ನೀಲಕಂಠ ನಗರ, ಜನತಾ ಕಾಲೋನಿ, ದಾವಣಗೆರೆಯಿಂದ ಹರಿಹರಕ್ಕೆ ಬರುವ ರಸ್ತೆ ಸೇರಿದಂತೆ ನಾಲೆಯ ಸುತ್ತಮುತ್ತ ಇರುವ ಬಡಾವಣೆಗೆ ನೀರು ನುಗ್ಗಿತ್ತು. ಆದಕಾರಣ ಅಲ್ಲಿನ ನೂರಾರು ಮನೆಗಳು ಜಲಾವೃತವಾಗಿದ್ದವು. ಪರಿಸ್ಥಿತಿ ಕಣ್ಣಾರೆ ಕಂಡ ಅನೇಕ ಜನಪ್ರತಿನಿಧಿಗಳು ಕಾಲುವೆಗೆ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದರೆ ವಿನಃ, ಕಾಮಗಾರಿ ಮಾತ್ರ ಆಗಿಲ್ಲ. ಇಲ್ಲಿನ ಜನತೆ ಮಳೆಗಾಲದಲ್ಲಿ ಭೀತಿಯಲ್ಲೇ ದಿನ ದೂಡುತ್ತಿದ್ದಾರೆ.
- - -(ಬಾಕ್ಸ್)
* ದೂರುಗಳ ನೀಡಿದ್ರೂ ಪ್ರಯೋಜನವಾಗಿಲ್ಲ: ಹನುಮಂತಪ್ಪವಾರ್ಡ್ ಸದಸ್ಯ ಆಟೋ ಹನುಮಂತಪ್ಪ ಈ ಕುರಿತು ಪ್ರತಿಕ್ರಿಯಿಸಿದ್ದು, ಅಮರಾವತಿ ಕಾಲೋನಿ, ಕೇಶವ ನಗರ, ಟಿಪ್ಪು ನಗರ, ವಿಜಯ ನಗರ ಸೇರಿದಂತೆ ಸುತ್ತಮುತ್ತ ಇರುವ ಬಡಾವಣೆಗಳ ನೀರು ಹರಿಯಲು 10 ಕಣ್ಣಿನ ರಾಜ ಕಾಲುವೆ ಇತ್ತು. ಆ ಭಾಗದಲ್ಲಿ ಅಧಿಕಾರಿಗಳು ಸರ್ವೆ ಮಾಡದೇ ಮನೆಗಳನ್ನು ನಿರ್ಮಿಸಲು ಅನುಮತಿ ಕೊಟ್ಟ ಕಾರಣ, ನೀರು ಸರಾಗವಾಗಿ ಹರಿಯದೇ ಅದನ್ನು ಮುಚ್ಚಿಸಿ ಪೈಪ್ ಲೈನ್ ಹಾಕಿಸಲಾಗಿತ್ತು. ತದನಂತರ ಅಲ್ಲಿನ ರೈತರು ತಮ್ಮ ಜಮೀನಿನಲ್ಲಿ ಪೈಪ್‍ಲೈನ್ ಹಾದುಹೋಗಿದೆ ಎಂದು ನೀರು ಹೋಗದಂತೆ ಪೈಪ್‌ಲೈನ್ ಮುಚ್ಚಿದ್ದಾರೆ. ಇದರಿಂದ ನಗರದ ಆಶ್ರಯ ಕಾಲೋನಿಯಲ್ಲಿ ಜಲಾವೃತವಾಗಿದೆ. ಈ ಬಗ್ಗೆ ಅನೇಕ ದೂರುಗಳು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
- - -* ಹೊನ್ನಾಳಿಯಲ್ಲಿ ತುಂಗಭದ್ರಾ ನೆರೆ: 8 ಕುಟುಂಬಗಳ 33 ಜನರ ಸ್ಥಳಾಂತರಕನ್ನಡಪ್ರಭ ವಾರ್ತೆ ಹೊನ್ನಾಳಿ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹೊನ್ನಾಳಿ ತಾಲೂಕಿನಾದ್ಯಂತ ಭಾನುವಾರ ಕೂಡ ಧಾರಾಕಾರ ಮಳೆಯಿಂದಾಗಿ ತುಂಗಭದ್ರಾ ನದಿ ನೀರಿನಮಟ್ಟ ಮತ್ತಷ್ಟು ಏರಿಕೆ ಆಗುತ್ತಿದೆ. ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಸಂತ್ರಸ್ಥರಿಗೆ ತಾಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಆರೈಕೆ ಕೇಂದ್ರದಲ್ಲಿ ಸದ್ಯ 8 ಕುಟುಂಬಗಳ 33 ಸಂತ್ರಸ್ಥರನ್ನು ಶನಿವಾರ ರಾತ್ರಿಯೇ ಇಲ್ಲಿಗೆ ಸ್ಥಳಾಂತರಿಸಿದ್ದು, ಊಟ-ವಸತಿ ಕಲ್ಪಿಸಲಾಗಿದೆ. ಭಾನುವಾರ ತಾಲೂಕಿನಾದ್ಯಂತ ಯಾವುದೇ ಅವಘಡಗಳು ಸಂಭವಿಸಿಲ್ಲ ಎಂದು ಗ್ರೇಡ್-2 ತಹಸೀಲ್ದಾರ್ ಸುರೇಶ್ ಮಾಹಿತಿ ನೀಡಿದ್ದಾರೆ. ನದಿ ನೀರಿನ ಮಟ್ಟ: ಶನಿವಾರಕ್ಕಿಂತ ಭಾನುವಾರ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ. ಶನಿವಾರ 10.1500 ಮೀ. ಇದ್ದ ನದಿ ನೀರಿನಮಟ್ಟ ಭಾನುವಾರ 10.9500 ಮೀಟರ್ ಇತ್ತು. ನದಿ ನೀರಿನ ಅಪಾಯದ ಮಟ್ಟ 12 ಮೀಟರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚರಿಕೆ ಕ್ರಮವಾಗಿ ಹೊನ್ನಾಳಿ ಪಟ್ಟಣದ ಬಾಲ್‌ರಾಜ್‌ಘಾಟ್ ಪ್ರದೇಶದ ನದಿ ಪಾತ್ರದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. - - - -27ಎಚ್.ಎಲ್.ಐ3.ಜೆಪಿಜಿ: ಹೊನ್ನಾಳಿ ಪಟ್ಟಣದ ಬಾಲ್‌ರಾಜ್‌ಘಾಟ್ ಬಳಿ ನೆರೆಯಿಂದಾಗಿ ಮನೆ ಜಲಾವೃತವಾಗಿದೆ.
- - --27ಎಚ್‍ಆರ್‍ಅರ್02.ಜೆಪಿಜಿ: ಹರಿಹರದಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದು.
-27ಎಚ್‍ಆರ್‍ಆರ್02ಎ.ಜೆಪಿಜಿ: ಹರಿಹರದಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆ ಸಾರ್ವಜನಿಕರು ನದಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿರುವುದು.