ಕೊರಟಗೆರೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ೨೦ ಮಂದಿ ಆಯ್ಕೆ

KannadaprabhaNewsNetwork |  
Published : Oct 31, 2026, 01:30 AM IST
೨೦೨೬ರ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ೨೦ ಮಂದಿ ಆಯ್ಕೆ | Kannada Prabha

ಸಾರಾಂಶ

ಕೊರಟಗೆರೆ ತಾಲೂಕು ಆಡಳಿತದಿಂದ ನ.೧ರಂದು ನಡೆಯುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸಿ. ಅನಂತರಾಮು ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ೨೦ ಮಂದಿ ಗಣ್ಯರನ್ನು ಆಯ್ಕೆ ಮಾಡಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೊರಟಗೆರೆ ತಾಲೂಕು ಆಡಳಿತದಿಂದ ನ.೧ರಂದು ನಡೆಯುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸಿ. ಅನಂತರಾಮು ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ೨೦ ಮಂದಿ ಗಣ್ಯರನ್ನು ಆಯ್ಕೆ ಮಾಡಿದೆ.

ತಾಪಂ ಸಭಾಂಗಣದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಮಾತನಾಡಿ, ತಾಲೂಕು ಆಡಳಿತ ವತಿಯಿಂದ ನ.೧ರಂದು ಪಟ್ಟಣದ ಕ್ರೀಡಾಂಗಣದಲ್ಲಿ ನಡೆಯುವ ೭೧ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಪ್ರಶಸ್ತಿ ಪುರಸ್ಕೃತರು;

ಸಮಗ್ರ ಕೃಷಿ ಕ್ಷೇತ್ರದಲ್ಲಿ ಸೋಮಶೇಖರಯ್ಯ ಜೋನಿಗರಹಳ್ಳಿ, ರಂಗಭೂಮಿ ಕ್ಷೇತ್ರದಲ್ಲಿ ಲಕ್ಷ್ಮೀಪತಿ ಹನುಮಂತಪುರ, ಹೋಟೆಲ್ ನಾಗರಾಜು ಕೊರಟಗೆರೆ, ವೈ.ಆರ್.ನರಸಪ್ಪ ಯಾದಗೆರೆ, ಜಿ.ಎಂ.ವೆಂಕಟೇಶ್ ಎಂ.ಗೊಲ್ಲಹಳ್ಳಿ, ಸಿದ್ದಗಂಗಪ್ಪ ಗಡ್ದೋಬನಹಳ್ಳಿ, ಶಿವಣ್ಣ ಹೊಸಕೋಟೆ, ಗಂಗರಾಜು ಬುಕ್ಕಾಪಟ್ಟಣ, ಎ.ಆರ್.ಗಿರಿರಾಜು ಚಿಕ್ಕಪಾಳ್ಯ, ಆಡಳಿತ ಕ್ಷೇತ್ರದಲ್ಲಿ ಕೃಷ್ಣನಾಯ್ಕ ನಿವೃತ್ತ ಸೈನಿಕ ಪಕ್ಕೀರಪ್ಪನಪಾಳ್ಯ, ಕನ್ನಡ ಪರ ಹೋರಾಟಗಾರರ ಕ್ಷೇತ್ರದಲ್ಲಿ ಶ್ರೀನಿವಾಸ್, ಕರ್ನಾಟಕ ರಕ್ಷಣಾ ವೇದಿಕೆ, ಮಧ್ಯ ವೆಂಕಟಾಪುರ, ವರದರಾಜು ಜಯಕರ್ನಾಟಕ ಸಂಘಟನೆ, ಎ.ಜಿ.ವೀರಭದ್ರಯ್ಯ ಕರವೇ ಗೌಜಗಲ್ಲು, ಸಾಹಿತ್ಯ. ಸಂಶೋಧನೆ ಕ್ಷೇತ್ರದಲ್ಲಿ ಎಲ್.ಎನ್. ರಾಜರಾವ್ ಕೊರಟಗೆರೆ, ಪತ್ರಿಕಾ ರಂಗ ಕ್ಷೇತ್ರದಲ್ಲಿ ಪಿ.ಎಂ. ಮಂಜುನಾಥ್, ಜಾನಪದ ಕ್ಷೇತ್ರದಲ್ಲಿ ದೊಡ್ಡಕ್ಕ ಬುಕ್ಕಪಟ್ಟಣ, ಸಮಾಜಸೇವೆ ಕ್ಷೇತ್ರದಲ್ಲಿ ವಿ.ಕೆ. ನರಸಿಂಹಮೂರ್ತಿ ವಮಚೇನಹಳ್ಳಿ, ಶಿಕ್ಷಣ ಮತ್ತು ಸೇವಾ ಕ್ಷೇತ್ರದಲ್ಲಿ ಕೆ.ಎಸ್.ಜಗದೀಶಯ್ಯ ನಿವೃತ್ತ ಪ್ರಾಂಶುಪಾಲರು, ಕೋಳಾಲ, ಕ್ರೀಡೆ ಮತ್ತು ಯೋಗ ಕ್ಷೇತ್ರದಲ್ಲಿ ಜಿ.ಪಿ.ಮಂಜುನಾಥ್ ಗುಂಡಿನಪಾಳ್ಯ, ಪೌರಕಾರ್ಮಿಕ ಕ್ಷೇತ್ರದಲ್ಲಿ ತುಂಬಾಡಿ ಗ್ರಾ.ಪಂ. ಮಂಜುನಾಥ ಅವರನ್ನು ಆಯ್ಕೆ ಮಾಡಲಾಯಿತು.ಆಯ್ಕೆ ಸಮಿತಿ ಸಭೆಯಲ್ಲಿ ಮಧುಸೂದನ್, ಪವಿತ್ರಾ, ಕೃಷಿ ಸಹಾಯಕ ನಿರ್ದೇಶಕ ಕಲ್ಲೇಶ್, ಸದಸ್ಯರಾದ ಕಸಾಪ ಅಧ್ಯಕ್ಷ ಈರಣ್ಣ, ರಂಗಭೂಮಿ ಸಂಘದ ಅಧ್ಯಕ್ಷ ಪುಟ್ಟಣ್ಣ, ಪ.ಪಂ.ಮಾಜಿ ಸದಸ್ಯ ಕೆ.ಆರ್.ಓಬಳರಾಜು, ದಾಡಿ ವೆಂಕಟೇಶ್, ಪತ್ರಕರ್ತ ಎನ್. ಪದ್ಮನಾಭ್, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಎಚ್.ಎನ್.ನಾಗರಾಜು, ಜಯಕರ್ನಾಟಕ ಸಂಘದ ಗೋಪಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ