ಆ್ಯಂಬುಲೆನ್ಸ್‌ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನನ

KannadaprabhaNewsNetwork |  
Published : May 07, 2026, 02:45 AM IST
ಫೋಟೋವಿವರ- (6ಎಚ್‌ಪಿಟಿ1) ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟಿ ಗ್ರಾಮದ ನಿವಾಸಿ ಶಕೀಲಾ ಎಂಬ ಮಹಿಳೆಯು ಅವಳಿ ಗಂಡು ಮಕ್ಕಳಿಗೆ ಆಂಬುಲೆನ್ಸ್ ನಲ್ಲಿ ಜನ್ಮ ನೀಡಿದ್ದಾರೆ | Kannada Prabha

ಸಾರಾಂಶ

ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಬೆಳಗಿನ ಜಾವ 4 ಗಂಟೆಗೆ ಒಂದು ಮಗು ಹಾಗೂ 4-20ಕ್ಕೆ ಇನ್ನೊಂದು ಮಗು ಜನನವಾಗುವ ಮೂಲಕ ಅವಳಿ ಮಕ್ಕಳ ಜನನವಾಗಿದೆ.

ಮರಿಯಮ್ಮನಹಳ್ಳಿ; ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯೊಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಘಟನೆ ಸಮೀಪದ ಹಂಪಿನಕಟ್ಟಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಹಂಪಿನಕಟ್ಟಿ ನಿವಾಸಿ ಶಕೀಲಾ ಎಂಬ ಮಹಿಳೆಯೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ತಾಯಿ. ಬುಧವಾರ ಬೆಳಗಿನ ಜಾವ ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಂಪಿನಕಟ್ಟಿ ಗ್ರಾಮದಿಂದ ಹೊಸಪೇಟೆ ನಗರದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಬೆಳಗಿನ ಜಾವ 4 ಗಂಟೆಗೆ ಒಂದು ಮಗು ಹಾಗೂ 4-20ಕ್ಕೆ ಇನ್ನೊಂದು ಮಗು ಜನನವಾಗುವ ಮೂಲಕ ಅವಳಿ ಮಕ್ಕಳ ಜನನವಾಗಿದೆ.

108 ಆ್ಯಂಬುಲೆನ್ಸ್ ಸಿಬ್ಬಂದಿ ಅನಿಲಕುಮಾರ್ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಹಾಗೂ ನವಜಾತ ಶಿಶುಗಳು ಆರೋಗ್ಯವಾಗಿದೆ ಎಂದು ಅವರು ತಿಳಿಸಿದರು. ಆಶಾ ಕಾರ್ಯಕರ್ತೆ ಗಂಗಮ್ಮ, ಚಾಲಕ ಬಾಷಾ ಇದ್ದರು.

ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟಿ ಗ್ರಾಮದ ನಿವಾಸಿ ಶಕೀಲಾ ಎಂಬ ಮಹಿಳೆಯು ಅವಳಿ ಗಂಡು ಮಕ್ಕಳಿಗೆ ಆ್ಯಂಬುಲೆನ್ಸ್‌ನಲ್ಲಿ ಜನ್ಮ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹೆ-ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಒಪ್ಪಂದ
ಉಡುಪಿ: ಅಗ್ನಿಶಾಮಕ ದಳದ ಬಲವರ್ಧನೆ ಬಿಜೆಪಿ ಯುವಮೋರ್ಚಾ ಮನವಿ