ಹನಿಟ್ರ್ಯಾಪ್‌ ಮಾಡಿ ಟೆಕ್ಕಿಯಿಂದ ಎರಡೂವರೆ ಕೋಟಿ ಸುಲಿಗೆ!

KannadaprabhaNewsNetwork |  
Published : Nov 24, 2024, 01:48 AM IST
11 | Kannada Prabha

ಸಾರಾಂಶ

ಉಡುಪಿ ಜಿಲ್ಲೆಯ ತಬಸಂ ಬೇಗಂ, ಆಕೆಯ ಸೋದರ ಅಜೀಂ ಉದ್ದೀನ್‌ ಹಾಗೂ ಅಭಿಷೇಕ್ ಅಲಿಯಾಸ್ ಅವಿನಾಶ್ ಬಂಧಿತನಾಗಿದ್ದು, ಆರೋಪಿಗಳಿಂದ ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಿಮ್‌ನಲ್ಲಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸಾಫ್ಟ್‌ವೇರ್ ಉದ್ಯೋಗಿಗೆ ಅಶ್ಲೀಲ ವಿಡಿಯೋ ಹಾಗೂ ಪೋಟೋಗಳಿವೆ ಎಂದು ಬೆದರಿಸಿ ಎರಡೂವರೆ ಕೋಟಿ ರು. ಸುಲಿಗೆ ಮಾಡಿದ್ದ ಅಣ್ಣ-ತಂಗಿ ಸೇರಿದಂತೆ ಮೂವರನ್ನು ಸಿಸಿಬಿ ಬಂಧಿಸಿದೆ.

ಉಡುಪಿ ಜಿಲ್ಲೆಯ ತಬಸಂ ಬೇಗಂ, ಆಕೆಯ ಸೋದರ ಅಜೀಂ ಉದ್ದೀನ್‌ ಹಾಗೂ ಅಭಿಷೇಕ್ ಅಲಿಯಾಸ್ ಅವಿನಾಶ್ ಬಂಧಿತನಾಗಿದ್ದು, ಆರೋಪಿಗಳಿಂದ ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಆರ್‌.ಟಿ.ನಗರದಲ್ಲಿರುವ ತಬಸಂನ ಅಣ್ಣ ಅಜೀಂ ಒಡೆತನದ ಜಿಮ್‌ಗೆ ಟೆಕ್ಕಿ ತೆರಳುತ್ತಿದ್ದ. ಆ ವೇಳೆ ಫಿಟ್ನೆಸ್‌ ಮಾರ್ಗದರ್ಶಿಯಾಗಿದ್ದ ಆಕೆ, ಸಂತ್ರಸ್ತ ಟೆಕ್ಕಿ ಜತೆ ಸಲುಗೆ ಬೆಳೆಸಿಕೊಂಡು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡಿದ್ದಳು. ಕೊನೆಗೆ ಬ್ಲ್ಯಾಕ್‌ ಮೇಲ್‌ ಕಿರುಕುಳ ಸಹಿಸಲಾರದೆ ಪೊಲೀಸ್ ಆಯುಕ್ತರಿಗೆ ಸಂತ್ರಸ್ತ ನೀಡಿದ ದೂರು ಆಧರಿಸಿ ಸಿಸಿಬಿ ತನಿಖೆ ಕೈಗೆತ್ತಿಕೊಂಡಿತ್ತು. ದೂರು ದಾಖಲಾದ ಕೂಡಲೇ ನಗರ ತೊರೆದು ಉಡುಪಿ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ಲ್ಯಾಕ್‌ಮೇಲ್‌: ದೂರುದಾರ ಸಾಫ್ಟ್‌ವೇರ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ತಮ್ಮ ಕುಟುಂಬದ ಜತೆ ಆರ್‌.ಟಿ.ನಗರ ಸಮೀಪ ಆತ ನೆಲೆಸಿದ್ದಾನೆ. ಹಲವು ವರ್ಷಗಳಿಂದ ಆರ್.ಟಿ.ನಗರದಲ್ಲಿ ‘ಗ್ರೂಪ್ ಎಕ್ಸ್ ಫಿಟ್ನೆಸ್‌ ಹೆಸರಿನ ಜಿಮ್‌ ಅನ್ನು ಅಜೀಂ ನಡೆಸುತ್ತಿದ್ದು, ಈ ಜಿಮ್‌ನಲ್ಲಿ ಆತನ ತಂಗಿ ತಬಸಂ ಫಿಟ್ನೆಸ್ ಕೋಚ್ ಆಗಿದ್ದಳು. ಆಗ ತನಗೆ ಮದುವೆಯಾಗಿ ಮಕ್ಕಳಿರುವ ಸಂಗತಿ ಮುಚ್ಚಿಟ್ಟು ತಮ್ಮ ಜಿಮ್‌ಗೆ ಬರುತ್ತಿದ್ದ ಟೆಕ್ಕಿ ಸ್ನೇಹ ಮಾಡಿ ಸಲುಗೆ ಬೆಳೆಸಿಕೊಂಡಿದ್ದಳು. ಅಲ್ಲದೆ ಪ್ರೀತಿ ನಾಟಕವಾಡಿ ದೂರುದಾರರ ಕುಟುಂಬದವರು ಇಲ್ಲದ ಹೊತ್ತಿನಲ್ಲಿ ಆತನ ಮನೆಗೆ ತೆರಳಿ ತಬಸಂ ಖಾಸಗಿ ಕ್ಷಣ ಕಳೆದಿದ್ದಳು. ಆ ವೇಳೆ ತನ್ನ ಮೊಬೈಲ್‌ನಲ್ಲಿ ರಹಸ್ಯವಾಗಿ ಏಕಾಂತದ ಸಮಯದ ದೃಶ್ಯಾವಳಿಗಳನ್ನು ಆಕೆ ಚಿತ್ರೀಕರಿಸಿಕೊಂಡಿದ್ದಳು.

ಈ ವಿಡಿಯೋ ಹಾಗೂ ಪೋಟೋ ಮುಂದಿಟ್ಟು ಆಕೆ ಸುಲಿಗೆ ಆರಂಭಿಸಿದ್ದಳು. ತನಗೆ ಹಣ ಕೊಡದೆ ಹೋದರೆ ಇವುಗಳನ್ನು ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಳು. ತನಗೆ ಮನೆಯಲ್ಲಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಇದಕ್ಕಾಗಿ ಮಗುವೊಂದನ್ನು ದತ್ತು ತೆಗೆದುಕೊಂಡಿದ್ದೀನಿ ಎಂದು ಆಕೆ ಹೇಳಿದ್ದಳು. ಈ ಮಾತು ನಂಬಿದ ಸಂತ್ರಸ್ತ, ಆಕೆಯ ಮಗನ ಶಿಕ್ಷಣಕ್ಕೆ ನೆರವಾಗಿದ್ದ. , ಅಲ್ಲದೆ ಪೊಲೀಸ್ ಮತ್ತು ಲಾಯರ್ ಎಂದು ಹೇಳಿಕೊಂಡು ತನ್ನ ಸಹಚರ ಅಭಿಷೇಕ್ ಮೂಲಕ ಸಂತ್ರಸ್ತನಿಗೆ ಕರೆ ಮಾಡಿ ಬೆದರಿಸಿದ್ದಳು.

ಹಂತ ಹಂತವಾಗಿ ಎರಡೂವರೆ ಕೋಟಿ ರು.ಗಳನ್ನು ಆರೋಪಿಗಳು ವಸೂಲಿ ಮಾಡಿದ್ದರು. ಇಷ್ಟಾದರು ಮತ್ತೆ ಹಣ ನೀಡುವಂತೆ ಈ ದುರುಳರ ಕಾಟ ಮುಂದುವರೆಸಿದ್ದರಿಂದ ಬೇಸತ್ತು ಪೊಲೀಸರಿಗೆ ಸಂತ್ರಸ್ತ ದೂರು ನೀಡಿದ್ದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ