ಜಾಲತಾಣದಲ್ಲಿ ತಲವಾರು ಪ್ರದರ್ಶನ: ಇಬ್ಬರ ಬಂಧನ

KannadaprabhaNewsNetwork |  
Published : Apr 11, 2025, 12:37 AM IST
ಫೋಟೋ: ೧೦ಪಿಟಿಆರ್-ತಲ್ವಾರ್ಸಾಮಾಜಿಕ ಜಾಲತಾಣದಲ್ಲಿ ತಲವಾರು ಪ್ರದರ್ಶನ ಮಾಡಿದ ಯುವಕರು | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಮಾರಕಾಯುಧವಾದ ತಲವಾರು ಪ್ರದರ್ಶನ ಯುವಕರಿಬ್ಬರು ಪೋಸ್ ಕೊಟ್ಟಿರುವ ಚಿತ್ರಗಳು ವೈರಲ್ ಆಗಿರುವ ಹಿನ್ನಲೆಯಲ್ಲಿ ಗುರುವಾರ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ಬಂಧಿಸಿರುವ ಘಟನೆ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಸಾಮಾಜಿಕ ಜಾಲತಾಣದಲ್ಲಿ ಮಾರಕಾಯುಧವಾದ ತಲವಾರು ಪ್ರದರ್ಶನ ಯುವಕರಿಬ್ಬರು ಪೋಸ್ ಕೊಟ್ಟಿರುವ ಚಿತ್ರಗಳು ವೈರಲ್ ಆಗಿರುವ ಹಿನ್ನಲೆಯಲ್ಲಿ ಗುರುವಾರ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ಬಂಧಿಸಿರುವ ಘಟನೆ ಗುರುವಾರ ನಡೆದಿದೆ.

ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕಟ್ಟದಬೈಲು ಎಂಬಲ್ಲಿನ ನಿವಾಸಿ ಸುಜಿತ್ (೨೬) ಮತ್ತು ಮರಿಕೆ ನಿವಾಸಿ ಪುಟ್ಟಣ್ಣ (೩೨) ಬಂಧಿತ ಆರೋಪಿಗಳು.

ಆರೋಪಿಗಳು ತಲ್ವಾರ್ ಹಿಡಿದು ಭಯ ಹುಟ್ಟಿಸುವ ರೀತಿಯಲ್ಲಿ ಭಾವಚಿತ್ರ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಸಂಜೆ ಹಂಚಿಕೊಂಡಿದ್ದರು. ಇವರು ನಿಷೇಧಿತ ಮಾರಕಾಯುಧವಾದ ತಲವಾರನ್ನು ಹಿಡಿದು ಪ್ರದರ್ಶಿಸಿ ಕಾನೂನಿಗೆ ಧಕ್ಕೆ ತರುವಂತೆ ಭಾವಚಿತ್ರವನ್ನು ತೆಗೆದು ಸಾಮಾಜಿನ ಜಾಲತಾಣದಲ್ಲಿ ಹರಿಯಬಿಟ್ಟಿರುವ ಆರೋಪದ ಬಗ್ಗೆ ಆರ್ಯಾಪು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ತಡರಾತ್ರಿ ಅವರಿಬ್ಬರನ್ನೂ ಪೊಲೀಸರು ಬಂಧಿಸಿ, ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವಂತ ಕೃತ್ಯ ಮಾಡಿರುವ ಪ್ರಕರಣ ದಾಖಲಿದ್ದಾರೆ.

ಆರೋಪಿಗಳನ್ನು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.

ಚಿನ್ನದ ಸರ ಸುಲಿಗೆ: ಆರೋಪಿ ವಶಕ್ಕೆ

ಬೆಳುವಾಯಿ ಗ್ರಾಮದ ಗುಜ್ಜರ ಗುಂಡಿ ಎಂಬಲ್ಲಿ ಮಾ.30ರಂದು 70ರ ಹರೆಯದ ಮಹಿಳೆಯ ಚಿನ್ನದ ಕರಿಮಣಿ ಸರ ದೋಚಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಂತಾವಾರ ಗ್ರಾಮದ ಪ್ರಶಾಂತ್ ಸಾಲಿಯನ್ ಯಾನೆ ಪಚ್ಚು (34 ) ಬಂಧಿತ ಆರೋಪಿ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯಿಂದ ಚಿನ್ನದ ಮಾಂಗಲ್ಯ ಕರಿಮಣಿ ಸರ ಹಾಗೂ ಚಿನ್ನದ ಸರದ ಒಂದು ತುಂಡು ಹಾಗೂ ದ್ವಿಚಕ್ರವಾಹನ ಸಹಿತ ಅಂದಾಜು ಮೌಲ್ಯ 3,30,000 ರು. ಮೌಲ್ಯದ ಸೊತ್ತು ಸ್ವಾಧೀನಪಡಿಸಲಾಗಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ