ಕೆರೆಯಲ್ಲಿ ಮುಳುಗಿ ಇಬ್ಬರ ಬಾಲಕರ ಸಾವು

KannadaprabhaNewsNetwork |  
Published : Oct 25, 2026, 03:15 AM IST
24್ಚವಚದಚವ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗಬಹಿರ್ದೆಸೆಗೆ ತೆರಳಿದ್ದ ಇಬ್ಬರು ಬಾಲಕರು ಗ್ರಾಮದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ರಾಮದುರ್ಗ ಪೊಲೀಸ್ ಠಾಣೆಯ ವ್ಯಾಪ್ತಿಯ ತಾಲೂಕಿನ ಬನ್ನೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ 7-30ಕ್ಕೆ ಜರುಗಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಬಾಲಕರು ಗ್ರಾಮದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ರಾಮದುರ್ಗ ಪೊಲೀಸ್ ಠಾಣೆಯ ವ್ಯಾಪ್ತಿಯ ತಾಲೂಕಿನ ಬನ್ನೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ 7-30ಕ್ಕೆ ಜರುಗಿದೆ.

ಬನ್ನೂರು ಗ್ರಾಮದ ಮನೋಜ್ ವಿಠ್ಠಲ ಬಡಿಗೇರ (10) ಮತ್ತು ಶಾರೂಖ್ ದಾದಾಸಾಬ ಚಿಲ್ಲೆದಾರ (9) ಮೃತರು ಎಂದು ಗುರುತಿಸಲಾಗಿದೆ.ಶನಿವಾರ ಬೆಳಗ್ಗೆ ಮೂರು ಬಾಲಕರು ಬಯಲು ಬಹಿರ್ದೆಸೆಗೆ ತೆರಳಿದ್ದಾರೆ. ನಂತರ ಆಳವಾದ ಕೆರೆಯಲ್ಲಿ ಕೈಕಾಲು ತೊಳೆಯಲು ಮೂರು ಬಾಲಕರು ನೀರಿಗೆ ಇಳಿದಿದ್ದಾರೆ. ಅಷ್ಟರೊಳಗೆ ಇಬ್ಬರೂ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾರೆ. 3ನೇ ಬಾಲಕ ಹೆದರಿ ಓಡಿ ಹೋಗಿ ಗ್ರಾಮದಲ್ಲಿ ಸುದ್ದಿ ತಿಳಿಸುತ್ತಿದ್ದಂತೆ ಗ್ರಾಮಸ್ಥರು ಆಗಮಿಸುವ ಮುನ್ನ ಇಬ್ಬರೂ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಸುನಿತಾ ಮುನ್ಯಾಳ ತನಿಖೆ ನಡೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮಖಂಡಿ ಸಕ್ಕರೆ ಕಾರ್ಖಾನೆಯಲ್ಲಿ ಗೂಂಡಾಗಿರಿ: ರೈತರ ಆರೋಪ
ಇಂದು ಕಿತ್ತೂರು ಉತ್ಸವದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾಗಿ