ಕಾಲುವೆಗೆ ಬಿದ್ದು ಎರಡು ಎತ್ತುಗಳು ಸಾವು

KannadaprabhaNewsNetwork |  
Published : Sep 06, 2025, 01:01 AM IST
5ಎಚ್‌ವಿಆರ್2- | Kannada Prabha

ಸಾರಾಂಶ

ಎತ್ತಿನ ಗಾಡಿಯಲ್ಲಿದ್ದ ಭೀರಪ್ಪ ಎಂಬವರು ಗಾಯಗೊಂಡಿದ್ದಾರೆ. ಲಕ್ಷಾಂತರ ಬೆಲೆಬಾಳುವ ಎತ್ತುಗಳನ್ನು ಕಳೆದುಕೊಂಡ ರೈತನ ರೋಧನೆ ನೆರೆದಿದ್ದ ಜನರ ಕಣ್ಣಂಚಿನಲ್ಲಿ ನೀರು ತರಿಸುವಂತಿತ್ತು.

ಹಾವೇರಿ: ತುಂಗಾ ಮೇಲ್ದಂಡೆ ಕಾಲುವೆಗೆ ಬಿದ್ದು ಎರಡು ಎತ್ತುಗಳು ಮೃತಪಟ್ಟಿರುವ ಘಟನೆ ತಾಲೂಕಿನ ಕೂರಗುಂದ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಭರಮಪ್ಪ ಕೆಂಚಣ್ಣನವರ ಎಂಬ ರೈತರಿಗೆ ಸೇರಿದ ಎರಡು ಎತ್ತುಗಳು ಬೆಳಗ್ಗೆ ಜಮೀನಿಗೆ ತೆರಳುತ್ತಿದ್ದಾಗ ಎತ್ತಿನ ಗಾಡಿ ಸಮೇತ ಕಾಲುವೆ ಬಿದ್ದು ಈ ಘಟನೆ ಸಂಭವಿಸಿದೆ.

ಈ ವೇಳೆ ಎತ್ತಿನ ಗಾಡಿಯಲ್ಲಿದ್ದ ಭೀರಪ್ಪ ಎಂಬವರು ಗಾಯಗೊಂಡಿದ್ದಾರೆ. ಲಕ್ಷಾಂತರ ಬೆಲೆಬಾಳುವ ಎತ್ತುಗಳನ್ನು ಕಳೆದುಕೊಂಡ ರೈತನ ರೋಧನೆ ನೆರೆದಿದ್ದ ಜನರ ಕಣ್ಣಂಚಿನಲ್ಲಿ ನೀರು ತರಿಸುವಂತಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗುತ್ತಲ ಪೊಲೀಸರು ಹಾಗೂ ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದರು. ಗುತ್ತಲ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಕೇಕ್‌ ಕತ್ತರಿಸಿ ಪತ್ರಿಕಾ ವಿತರಕರ ದಿನಾಚರಣೆ

ಶಿಗ್ಗಾಂವಿ: ಸ್ವಾತಂತ್ರ‍್ಯ ಪೂರ್ವದಲ್ಲಿ ಪತ್ರಿಕೆಗಳು ಜನರಲ್ಲಿ ದೇಶಾಭಿಮಾನ ಹಾಗೂ ಬ್ರಿಟಿಷರ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆನ್ನವರ ತಿಳಿಸಿದರು.ಪಟ್ಟಣದಲ್ಲಿ ತಾಲೂಕು ಪತ್ರಿಕಾ ವಿತರಕರ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಮಾಜಿಕ ಮಾಧ್ಯಮಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಇಲ್ಲದೆ ಇರುವ ಸಂದರ್ಭದಲ್ಲಿ ಪತ್ರಿಕೆಗಳು ಅಂತ್ಯತ ಪ್ರಮುಖ ಪಾತ್ರ ವಹಿಸಿದ್ದವು ಎಂದರು.

ಪತ್ರಿಕೆಗಳಲ್ಲಿ ಸುದ್ದಿ ಬರುವಲ್ಲಿ ಪತ್ರಿಕಾ ವರದಿಗಾರರ ಪಾತ್ರ ಎಷ್ಟು ಮುಖ್ಯವೊ ಆ ಪತ್ರಿಕೆಗಳನ್ನು ಚಳಿ- ಮಳೆ ಅನ್ನದೆ ಮನೆ ಮನೆ ಮನೆಗೂ ಪತ್ರಿಕೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರವು ಅಷ್ಟೇ ಪ್ರಮುಖವಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪತ್ರಿಕಾ ವಿತರಕರ ಸಂಘದಿಂದ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ನೀರಲಗಿ, ಉಪಾಧ್ಯಕ್ಷ ಸಿದ್ರಾಮಗೌಡ ಮೆಳ್ಳೆಗಟ್ಟಿ, ಕಾರ್ಯದರ್ಶಿ ಸುರೇಶ ಯಲಿಗಾರ, ಸದಸ್ಯರಾದ ಬಸವರಾಜ ಹೊನ್ನಣ್ಣವರ, ಬಸವರಾಜ ಹಡಪದ, ವಿಶ್ವನಾಥ ಬಂಡಿವಡ್ಡರ, ದೇವರಾಜ ಸುಣಗಾರ, ಶಿವಕುಮಾರಸ್ವಾಮಿ ಕೊಟಗಿಮಠ, ವಿತರಕರಾದ ಮುತ್ತು ಬಂಡಿವಡ್ಡರ, ನಿರಂಜನ ಗುಡಗೇರ, ಪ್ರಕಾಶ ಹರಿಗೊಂಡ, ಅಭಿಷೇಕ ಬಂಡಿವಡ್ಡರ, ಶ್ರೀಧರ ಕುರ್ಷಾಪೂರ, ಹನುಮಂತ ಜವಳಗಟ್ಟಿ, ಸುನೀಲ ಹರಿಗೊಂಡ, ನವೀನ, ಸೃಜನ್ ಹುಡೇದ, ಕಾರ್ತಿಕ ಸೇರಿದಂತೆ ಇತರ ವಿತರಕರು ಇದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್