ದಾವಣಗೆರೆ: ಚೆಕ್ ಪೋಸ್ಟ್ ಕರ್ತವ್ಯದ ವೇಳೆ ಅಡಕೆ ತುಂಬಿದ ಟ್ರ್ಯಾಕ್ಟರ್‌ಗಳಿಂದ ಹಣ ವಸೂಲಿ ಮಾಡುತ್ತ, ಅಮಾಯಕ ರೈತರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಆರೋಪದ ಹಿನ್ನೆಲೆ ಆಜಾದ್ ನಗರ ಠಾಣೆಯ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.
ಆಜಾದ್ ನಗರ ಠಾಣೆಯ ಆರೋಪಿತ ಸಿಬ್ಬಂದಿ ಅಂಕಳಪ್ಪ, ಮುಬಾರಕ್ ವಿರುದ್ಧ ಇಲಾಖೆ ಶಿಸ್ತುಕ್ರಮಕ್ಕೆ ಆಜಾದ್ ನಗರ ವೃತ್ತ ನಿರೀಕ್ಷಕರು ನೀಡಿದ ವರದಿ ಮೇಲೆ ನಗರ ಡಿವೈಎಸ್ಪಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು. ಈ ಇಬ್ಬರೂ ಸಿಬ್ಬಂದಿ ವಿರುದ್ಧ ಮುಂದಿನ ಇಲಾಖೆ ಶಿಸ್ತು ಕ್ರಮ ಬಾಕಿ ಇರಿಸಿಕೊಂಡು, ತಕ್ಷದಿಂದಲೇ ಜಾರಿಗೊಳ್ಳುವಂತೆ ಸೇವೆಯಿಂದ ಅಮಾನತುಗೊಳಿಸಿ, ಜಿಲ್ಲಾ ಎಸ್‌ಪಿ ಆದೇಶ ಹೊರಡಿಸಿದ್ದಾರೆ.