ರಾಮನಗರ: ನೇಪಾಳದ ಕಠ್ಮಂಡುವಿನಲ್ಲಿ ನವೆಂಬರ್ 20 ರಿಂದ 25 ನಡೆದ 8ನೇ ದಕ್ಷಿಣ ಏಷ್ಯಾ ಐಟಿಎಫ್ ಟೇಕ್ವಾಂಡೋ ಚಾಂಪಿಯನ್ ಶಿಪ್–2026 ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ರಾಮನಗರದ ಶಾನ್ವಿ ಸತೀಶ್ ರವರು 2 ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಸತೀಶ್ ರವರ ಪುತ್ರಿಯಾದ ಶಾನ್ವಿರವರು ಈ ಹಿಂದೆ ದುಬೈ ಮತ್ತು ಮಲೇಶಿಯಾದಲ್ಲಿ ನಡೆದ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಪಡೆದಿದ್ದರು. ಈಕೆ ಬಾಲರಾಜನ್ , ಪ್ರದೀಪ್ , ಜನಾರ್ದನ ತರಬೇತಿ ಪಡೆಯುತ್ತಿದ್ದಾಳೆ.
ಈ ಸಾಧನೆ ರಾಮನಗರ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದೆ. ಶಾನ್ವಿ ಸತೀಶ್ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಮೂಲಕ ನಾಡಿಗೆ ಕೀರ್ತಿ ತರಲಿ ಎಂದು ಶಾಸಕ ಇಕ್ಬಾಲ್ ಹುಸೇನ್ ಶುಭ ಹಾರೈಸಿದ್ದಾರೆ.----------------------
ನೇಪಾಳದ ಕಠ್ಮಂಡುವಿನಲ್ಲಿ ನಡೆದ 8ನೇ ದಕ್ಷಿಣ ಏಷ್ಯಾ ಐಟಿಎಫ್ ಟೇಕ್ವಾಂಡೋ ಚಾಂಪಿಯನ್ ಶಿಪ್–2026 ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ರಾಮನಗರದ ಶಾನ್ವಿ ಸತೀಶ್ ರವರು 2 ಚಿನ್ನದ ಪದಕ ಪಡೆದಿರುವುದು.