ಚಿಕ್ಕಮಗಳೂರು ಎಫ್‌ಸಿ ಅವಧಿ ಮುಗಿದ ಎರಡು ಸ್ಕೂಲ್ ಬಸ್‌ಗಳನ್ನು ಚಿಕ್ಕಮಗಳೂರು ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಸೀಜ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
(ಚನ್ನಾಗಿ ಬಳಸಿ)
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಎಫ್‌ಸಿ ಅವಧಿ ಮುಗಿದ ಎರಡು ಸ್ಕೂಲ್ ಬಸ್‌ಗಳನ್ನು ಚಿಕ್ಕಮಗಳೂರು ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಸೀಜ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
‘ಫೋಷಕರೇ ಎಚ್ಚರ.. ಫಿಟ್ ಇಲ್ಲದ ನೂರಾರು ಶಾಲಾ ಬಸ್ ಓಡುತ್ತಿವೆ’ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ಸೆ.7ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಚಿಕ್ಕಮಗಳೂರು ಸಾರಿಗೆ ಅಧಿಕಾರಿಗೆ ಈ ಕುರಿತು ಕ್ರಮಕ್ಕೆ ನಿರ್ದೇಶಿಸಿದ್ದರು.
ಇದರಿಂದ ಎಚ್ಚೆತ್ತ ಆಡಳಿತ ವರ್ಗ ಎಫ್‌ಸಿ ನವೀಕರಿಸದೇ ಓಡಾಟ ನಡೆಸುತ್ತಿರುವ ಶಾಲಾ ವಾಹನಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯುವಂತೆ ಮೋಟರ್ ವೆಹಿಕಲ್ ಇನ್ಸ್‌ಪೆಕ್ಟರ್ ಅವರಿಗೆ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ಆದೇಶಿಸಿದ್ದರು.
ವಿಶೇಷ ಕಾರ್ಯಚರಣೆ 2 ಬಸ್ ಸೀಜ್
ಆದೇಶದ ಬೆನ್ನಲ್ಲಿ ಮಂಗಳವಾರ ಚಿಕ್ಕಮಗಳೂರು ಸಾರಿಗೆ ವಿಭಾಗದಲ್ಲಿ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಾರಿಗೆ ಅಧಿಕಾರಿಗಳು ಎಫ್‌ಸಿ ಅವಧಿ ಮುಗಿದ ಎರಡು ಖಾಸಗಿ ಶಾಲಾ ಕಾಲೇಜಿನ ಬಸ್‌ಗಳನ್ನು ಸೀಜ್ ಮಾಡಿ ವಶಕ್ಕೆ ಪಡೆದಿದ್ದಾರೆ. ಬುಧವಾರ ಮತ್ತು ಗುರುವಾರವೂ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಚಿಕ್ಕಮಗಳೂರು ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
(ವರದಿ ಕಟಿಂಗ್ ಬಳಸುವುದು ಹಾಗೂ ಕನ್ನಡಪ್ರಭ ವರದಿ ಪರಿಣಾಮ ಲೋಗೋ ಬಳಸುವುದು ಕಡ್ಡಾಯ)
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.